ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್ಸಿಕಾ ದೊಣ್ಣೆ ವರಸೆ

Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸಾಯಿ ಧನ್ಸಿಕಾ ಹೆಸರು ನೆನಪಿದ್ಯಾ? ಅದೇ ‘ಕಬಾಲಿ’ ಸಿನಿಮಾದಲ್ಲಿ ರಜನಿಕಾಂತ್‌ ಮಗಳಾಗಿ ನಟಿಸಿದ್ದರಲ್ಲ, ಅವರು. ಮಾದಕ ಸೌಂದರ್ಯದ ಜತೆಗೆ ಉತ್ತಮ ನಟನೆಯಿಂದಲೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಧನ್ಸಿಕಾ ಹೆಸರು ಕೆಲದಿನಗಳಿಂದ ಮತ್ತೆ ಸುದ್ದಿಯಲ್ಲಿದೆ. ಅವರು ಸಿಂಬಲಮ್' (ತಮಿಳುನಾಡಿನ ಸಾಂಪ್ರದಾಯಿಕ ಸಮರಕಲೆ) ಕಲಿಯುತ್ತಿರುವ ವಿಡಿಯೊ ವೈರಲ್ ಆಗಿದೆ.

ಅಷ್ಟುದ್ದದ ಕೋಲನ್ನು ರಪರಪನೆ ಬೀಸುತ್ತಾ ಕೈ ಬದಲಾಯಿಸುವ ರಭಸ ನೋಡಿದರೆ 'ಇವಳ್ಯಾರಪ್ಪಾ ಸಮರಕಲೆ ಪ್ರವೀಣೆ' ಎಂದು ಹುಬ್ಬೇರಿಸುವಂತಾಗುತ್ತದೆ.

‘ನಾನು ಶಾಲಾ ದಿನಗಳಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿದ್ದೆ. ಫುಟ್‌ಬಾಲ್‌ ತಂಡದ ನಾಯಕಿಯೂ ಆಗಿದ್ದೆ. 15 ಪದಕ, ಒಂದಿಷ್ಟು ಕಪ್‌ ಗೆದ್ದಿದ್ದೆ. ಸಿಂಬಲಮ್‌ ಅಭ್ಯಾಸ ಮಾಡುವಾಗ ಅದೆಲ್ಲ ನೆನಪಾಗುತ್ತಿದೆ. ಫಿಟ್‌ನೆಸ್‌ ಬಗ್ಗೆ ನಾನು ಯಾವತ್ತೂ ಅಲಕ್ಷ್ಯ ಮಾಡುವುದಿಲ್ಲ. ಸಿಂಬಲಮ್‌ ನನ್ನ ಹೊಸ ಫಿಟ್‌ನೆಸ್‌ ಸೂತ್ರ. ಈಗ ನನ್ನೊಳಗಿನ ಕ್ರೀಡಾಳುವಿನ ಸ್ಫೂರ್ತಿ ಇಮ್ಮಡಿಗೊಂಡಿದೆ’ ಎಂದು ಧನ್ಸಿಕಾ ಹೇಳಿಕೊಂಡಿದ್ದಾರೆ.

‘ಕಬಾಲಿ’ಯ ಭರ್ಜರಿ ಯಶಸ್ಸು ಧನ್ಸಿಕಾ ಅವರ ಬೇಡಿಕೆಗೆ ಗ್ರಾಫ್‌ ಏರುವಂತೆ ಮಾಡಿತ್ತು. ಇದೇ ಅಕ್ಟೋಬರ್‌ನಲ್ಲಿ ಅವರ ಮೂರು ಸಿನಿಮಾಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ‘ಸಂಗುದೇವನ್‌’, ‘ವೀಜಿತ್ತಿರು’ ಮತ್ತು ‘ಕಾಲಕ್ಕೂತ್ತು’ ಎಂಬ ತಮಿಳು ಚಿತ್ರಗಳ ಚಿತ್ರೀಕರಣ ಅಂತಿಮ ಹಂತದಲ್ಲಿವೆ.

ಯಾವುದೇ ಸಾಧನೆ ಮಾಡುವುದಕ್ಕೂ ದೈವೀಪ್ರೇರಣೆ ಅಗತ್ಯ ಎಂಬುದು ಧನ್ಸಿಕಾ ನಂಬಿಕೆ. ‘ನಾನು ಸಾಯಿಬಾಬಾ ಮತ್ತು ವೈಷ್ಣವದೇವಿಯ ಮಹಾನ್‌ ಭಕ್ತೆ. ಎರಡೂ ಕ್ಷೇತ್ರಗಳಿಗೆ ನಿಯಮಿತವಾಗಿ ಭೇಟಿ ಕೊಡುತ್ತೇನೆ. ಅದರಿಂದ ನನಗೆ ದೈವಿಕ ಮತ್ತು ನೈತಿಕ ಶಕ್ತಿ ಸಿಗುತ್ತದೆ’ ಎಂದು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಬರೋಬ್ಬರಿ 3ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ಖುಷಿಯಲ್ಲಿದ್ದಾರೆ ಧನ್ಸಿಕಾ.



ಧನ್ಸಿಕಾ ಬಗ್ಗೆ ಒಂದಿಷ್ಟು
ಜನನ– 20ನೇ ನವೆಂಬರ್‌, 1989
ಎತ್ತರ– 5 ಅಡಿ 7 ಇಂಚು
ತೂಕ– 53 ಕೆ.ಜಿ
ಸುತ್ತಳತೆ– 34–26–34
ಕಣ್ಣಿನ ಬಣ್ಣ– ಕಂದು
ಕೂದಲು– ಕಪ್ಪು
ರಾಶಿ– ವೃಶ್ಚಿಕ
ಇಷ್ಟದ ಊಟ– ತರಕಾರಿ ಸಾಂಬಾರು, ಕೋಳಿ ಮತ್ತು ಸಿಗಡಿ ಖಾದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT