ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ ಹತ್ಯೆ: ಸತ್ಯದ ಕೊಲೆ

Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನೇರ ನಡೆ ನುಡಿಯವರು, ಸತ್ಯ ಹೇಳುವವರು ವೈಚಾರಿಕ ಮನೋಭಾವ ಉಳ್ಳವರು ನೆಮ್ಮದಿಯಾಗಿ ಈ ರಾಷ್ಟ್ರದಲ್ಲಿ ಬದುಕುವಂತಿಲ್ಲವಾಗಿದೆ. ತಂದೆಯಿಂದ ವೈಚಾರಿಕತೆಯನ್ನು ಮೈಗೂಡಿಸಿಕೊಂಡು, ನಾಡಿನ ಉದ್ದಗಲ ತಮ್ಮ ಪತ್ರಿಕೆ ಮೂಲಕ ಪ್ರಗತಿಪರ ಚಿಂತನೆಯನ್ನು ಬಿತ್ತುತ್ತಿದ್ದ ದಿಟ್ಟ ಮಹಿಳೆ ಗೌರಿ ಲಂಕೇಶ ಹತ್ಯೆ ಖಂಡನೀಯ. ಅದರಲ್ಲೂ ಕನ್ನಡನಾಡು ಶಾಂತಿ–ಸೌಹಾರ್ದತೆಗೆ, ಅಹಿಂಸೆಗೆ ಹೆಸರುವಾಸಿ. ಇಂತಹ ನಾಡಿನಲ್ಲಿ ಸತ್ಯದ ಕೊಲೆ ನಡೆಯುತ್ತಿದೆ.

ವೈಚಾರಿಕ ಚಿಂತಕರಾದ ಕಲ್ಬುರ್ಗಿ ಅವರ ಹತ್ಯೆಯಾಗಿ ಎರಡು ವರ್ಷ ತುಂಬುವುದರೊಳಗೆ ಮತ್ತೊಂದು ವೈಚಾರಿಕದ ಹತ್ಯೆ ನಡೆದಿದೆ. ಈ ಅವಧಿಯಲ್ಲಿ ಇಬ್ಬರು ವಿಚಾರವಾದಿಗಳನ್ನು ನಾಡು ಕಳೆದು ಕೊಂಡಿದೆ. ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಹಂತಕರನ್ನು ಪತ್ತೆ ಹಚ್ಚಿ ಹತ್ಯೆಯಾದವರ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ. ಪ್ರಗತಿಪರ ಚಿಂತನೆಯಲ್ಲಿ ತೊಡಗಿರುವವರು ನಿರ್ಭಯವಾಗಿ ಬದುಕುವಂತಾಗಲಿ.

– ಸಾ.ಮ. ಶಿವಮಲ್ಲಯ್ಯ, ಸಾಸಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT