ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಮಕ್ಕಳಿಗೆ ಕನ್ನಡ ಶಾಲೆ ಕಡ್ಡಾಯ

Last Updated 12 ಸೆಪ್ಟೆಂಬರ್ 2017, 6:06 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಾಡಿನ ಎಲ್ಲ ಮಕ್ಕಳು ಸಮಾನ ಗುಣಮಟ್ಟದ ಶಿಕ್ಷಣ ಪಡೆ ಯುವ ಮೂಲಹಕ್ಕನ್ನು ಸಾಕಾರಗೊಳಿಸ ಬೇಕಿದೆ ಎಂಬುವುದನ್ನು ಕನ್ನಡ ಅಭಿ ವೃದ್ದಿ ಪ್ರಾಧಿಕಾರ ಎತ್ತಿ ಹಿಡಿಯುತ್ತಿದೆ ಎಂದು ಪ್ರಾಧಿಕಾರದ ಸದಸ್ಯ ಪ್ರಕಾಶ ಜೈನ್‌ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ  ಮಾತನಾಡಿದ ಅವರು,  ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಲ್ಲಿರುವ ಸರ್ಕಾರಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗಳ ಸಬಲೀಕರ ಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ತಜ್ಞರ ತಂಡ ಸಂಪೂರ್ಣ ವರದಿ ತಯಾರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ. ಪ್ರಾಧಿಕಾರ ಸಲ್ಲಿಸಿದ ವರದಿಗೆ ಸರ್ಕಾರ ಕಾನೂನಿನ ಸ್ವರೂಪ ನೀಡಿ ಕೂಡಲೇ ಜಾರಿಗೆ ತರಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದರು.

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜ ರಾತಿ ಕಡಿಮೆಯಾಗಲು ಕಾರಣವಾದ ಎಲ್ಲ ಸಂಗತಿ ವರದಿಯಲ್ಲಿ ನಮೂದಿಸ ಲಾಗಿದೆ. ಮಕ್ಕಳ ಜೀವ ರಕ್ಷಣೆಯ ದೃಷ್ಟಿ ಯಿಂದ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ನಿರಾಳವಾಗಿ ಕಳುಹಿಸುವ ವಾತಾವರಣ ಸೃಷ್ಟಿಯ ಅಗತ್ಯ, ದುಃಸ್ಥಿಯಲ್ಲಿರುವ ಶಾಲಾ ಕೊಠಡಿ ತುರ್ತಾಗಿ ನವೀಕರಣ, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಕ್ರಮ ವಹಿಸಬೇಕು.  

ಸರ್ಕಾರಿ ಶಾಲೆ ಮುಚ್ಚುವ, ವಿಲೀನ ಮಾಡುವ ಪ್ರಕ್ರಿಯೆಯನ್ನು ತಡೆದು ಮುಚ್ಚಿರುವ ಎಲ್ಲ ಸರ್ಕಾರಿ ಶಾಲೆ ಪುನಾ ತೆರೆಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಕಿರಿಯ–ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸಬೇಕು. ಇಂಗ್ಲಿಷ್‌ ವಿಷಯ ತರಬೇತಿ ಪಡೆದ ಶಿಕ್ಷಕ ರಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಒಂದು ಭಾಷೆ ಯನ್ನು ಪರಿಣಾಮಕಾರಿಯಾಗಿ ಕಲಿಸ ಬೇಕು ಎಂದು ಒತ್ತಾಯಿಸಲಾಗಿದೆ ಎಂದರು.

ಸರ್ಕಾರಿ ಶಾಲೆಗಳ ಸಬಲೀಕರಣ ಕ್ಕಾಗಿ ಆರ್‌ಟಿಇ ಶೇ 25 ರಷ್ಟು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿ ಅವರ ಶುಲ್ಕ ವನ್ನು ಸರ್ಕಾರ ಭರಿಸುತ್ತಿರುವುದನ್ನು ನಿಲ್ಲಿಸಬೇಕು. ಅದೇ ಹಣವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬೇಕು,  ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಆಯಾ ಖಾಸಗಿ ಶಾಲೆಗಳ ಸಾಮಾಜಿಕ ಜವಾಬ್ದಾರಿಯಾಗಬೇಕು.  ಹೀಗಾಗಿ ಆರ್‌ಟಿಇ ಕಾಯ್ದೆಯ 39 ಅಂಶ ಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿ ಸಬೇಕು ಎಂದರು.

ಇಂಗ್ಲಿಷ್‌ ಮಾಧ್ಯಮ ಖಾಸಗಿ ಶಾಲೆಗಳು ಮಾನ್ಯತಾ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರದಿಂದ ಪಡೆಯುವುದು ಕಡ್ಡಾಯ. ಪ್ರತಿವರ್ಷ ನವೀಕರಣಗೊಳಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ನೀಡಲಾಗಿದೆ.

ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಪಾಲನಾ ಕೇಂದ್ರವಾಗಿಸಲು ಬೇಕಾದ ಮೂಲ ಸೌಲಭ್ಯ ವ್ಯವಸ್ಥಿತ ಗೊಳಿಸಬೇಕು. ಪ್ರತಿ ಗ್ರಾಮಗಳಲ್ಲಿ ಶಿಶು ಪಾಲನಾ ಕೇಂದ್ರ ತೆರೆದು ಅಲ್ಲಿ 1ರಿಂದ 3+ವರೆಗಿನ ಮಗು ಪ್ರವೇಶ ಪಡೆಯಬೇಕು. ಅಲ್ಲಿ ತರಬೇತಿ ಪಡೆದ ಶಿಕ್ಷಕಿ ಹಾಗೂ ಒಬ್ಬ ಸಹಾಯಕರ ನೇಮಕ ಮಾಡಬೇಕು. ಆರೋಗ್ಯ ಕಾರ್ಯಕರ್ತರ ಸೇವೆ ಸಂದರ್ಭಾನುಸಾರ ನಿಯಮಿತವಾಗಿ ದೊರಕುವಂತಿರ ಬೇಕು. ಅಂಗನವಾಡಿ ಕೇಂದ್ರಗಳನ್ನು ಪುನ ಶ್ಚೇತನಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ವಿವರಿಸಿದರು.

ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ ಸಮಿತಿ 21 ಶಿಫಾರಸು ಗಳನ್ನು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮತ್ತು ಸಮಾನ ಶಿಕ್ಷಣ ನೀತಿ ಅನುಷ್ಠಾನ ಕಡ್ಡಾಯವಾಗುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಗೆ ಹೆಚ್ಚು ಅವಕಾಶ ನೀಡಲಾಗಿದೆ ಎಂದು ಜೈನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT