ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈಯಲ್ಲೇ ಪ್ರವಾಸಿ ಗೈಡ್!

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ದಿನ ನಿತ್ಯದ ಬದುಕಿನ ಜಂಜಾಟ, ಒತ್ತಡ ಕಳೆಯುವುದಕ್ಕೆಂದು ಪ್ರವಾಸ ತೆರಳುತ್ತೇವೆ. ಆದರೆ, ಇದುವೇ ಪ್ರಯಾಸವಾದರೋ? ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ.

ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸುವುದರಿಂದ ತೊಡಗಿ ನಾವು ತೆರಳಲು ಮುಂದಾಗಿರುವ ಸ್ಥಳದ ವಿಶೇಷತೆಯೇನು? ಅಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇದೆಯೇ? ಆ ಊರಿನಲ್ಲಿ ನಮಗೆ ತಿಳಿದಿರುವ ಭಾಷೆ ಮಾತನಾಡಬಲ್ಲ ಜನ ಇದ್ದಾರೆಯೇ? ಮಾರ್ಗದರ್ಶಕರನ್ನು ಹುಡುಕುವುದು ಹೇಗೆ? ಇತ್ಯಾದಿ ಪ್ರಶ್ನೆಗಳು ಹೆಚ್ಚಿನವರನ್ನು ಕಾಡುವುದು ಸಾಮಾನ್ಯ. ಇದಕ್ಕಾಗಿ ಇನ್ನು ಚಿಂತಿಸಬೆಕಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಅಂಗೈಯಲ್ಲೇ ಪರಿಹಾರ ನೀಡಲು ಸಿದ್ಧವಾಗಿದೆ ಹೋಲಾ ಗೈಡ್ ಆ್ಯಪ್.

ಹೌದು, ಇನ್ನು ಮುಂದೆ ಕರ್ನಾಟಕದ ಎಲ್ಲ ಪ್ರವಾಸಿ ಸ್ಥಳಗಳಲ್ಲಿ ಸರ್ಕಾರದ ಮಾನ್ಯತೆ ಪಡೆದ ಮಾರ್ಗದರ್ಶಕರನ್ನು (ಗೈಡ್) ನಾವಿರುವಲ್ಲಿಂದಲೇ ಕಾಯ್ದಿರಿಸಬಹುದು. ನಮಗೆ ಬೇಕಾದ ಭಾಷೆಯ (ಭಾರತೀಯ ಮತ್ತು ವಿದೇಶಿ ಭಾಷೆಗಳ ಗೈಡ್‌ಗಳೂ ಲಭ್ಯವಿರಲಿದ್ದಾರೆ.) ಗೈಡ್‌ಗಳನ್ನೇ ನಾವು ಆಯ್ಕೆ ಮಾಡಬಹುದು. ಈ ಅವಕಾಶವನ್ನು ಒದಗಿಸಿಕೊಟ್ಟಿದೆ ವಿನೂತನ ಹೋಲಾ ಗೈಡ್ ಆ್ಯಪ್.

ಕಡಿಮೆಯಾಗಲಿದೆ ಖರ್ಚು
ಸಾಮಾನ್ಯವಾಗಿ ಯಾವುದಾದರೂ ಒಂದು ಪ್ರವಾಸಿ ಸ್ಥಳಕ್ಕೆ ತೆರಳುವ ಜನ, ಅಲ್ಲಿರುವ ಸ್ಥಳೀಯ ಮಾರ್ಗದರ್ಶಕರಿಗೆ ದುಬಾರಿ ದರ ತೆತ್ತು ಪ್ರವಾಸ ಮುಗಿಸಿ ಬರುತ್ತಾರೆ. ಆದರೆ, ಎಷ್ಟು ಗಂಟೆಗಳ ಮಟ್ಟಿಗೆ ನಮಗೆ ಮಾರ್ಗದರ್ಶಕರು ಬೇಕು ಎಂಬುದನ್ನು ನಿರ್ಧರಿಸಲು ಹೋಲಾ ಗೈಡ್ ಆ್ಯಪ್‌ನಲ್ಲಿ ಅವಕಾಶವಿದೆ. ಅರ್ಧ ದಿನ, ಒಂದು ದಿನ ಅಥವಾ ನಮ್ಮ ಆಯ್ಕೆಯ ಸಮಯಕ್ಕೆ ಪ್ರವಾಸಿ ಮಾರ್ಗದರ್ಶಕರನ್ನು ಕಾಯ್ದಿರಿಸಲು ಆ್ಯಪ್‌ನಲ್ಲಿ ಅವಕಾಶವಿದೆ. ಇದೆ ರೀತಿ, ನಮ್ಮ ಇಚ್ಛೆಯ ಪ್ರವಾಸಿ ತಾಣವನ್ನು ಮುಂಗಡವಾಗಿ ಆಯ್ಕೆ ಮಾಡಲೂ ಆ್ಯಪ್‌ನಲ್ಲಿ ಅವಕಾಶವಿದೆ.

ಮಾರ್ಗದರ್ಶಕರ ಸೇವೆಯ ಬಗ್ಗೆ ರೇಟಿಂಗ್ ನೀಡಲೂ ಆ್ಯಪ್‌ನಲ್ಲಿ ಅವಕಾಶವಿದೆ. ಗುಣಮಟ್ಟದ ಸೇವೆಗಾಗಿ ಈ ಆಯ್ಕೆಯನ್ನು ನೀಡಲಾಗಿದೆ. ಆನ್‌ಲೈನ್ ಪಾವತಿಗೂ ಅವಕಾಶ:ಮಾರ್ಗದರ್ಶಕರಿಗೆ ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಮಾಡಲೂ ಆ್ಯಪ್‌ನಲ್ಲಿ ಅವಕಾಶವಿದೆ. ಇಲ್ಲವಾದಲ್ಲಿ ನಗದು ರೂಪದಲ್ಲೂ ನೀಡಬಹುದಾಗಿದೆ.
ಪ್ಲೇ ಸ್ಟೋರ್‌ನಲ್ಲಿ ಲಭ್ಯ: ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್‌ಗಳಿಂದ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ವೃತ್ತಿಪರ ಸಾಫ್ಟ್‌ವೇರ್‌ ಎಂಜಿನಿಯರ್‌ಗಳನ್ನೊಳಗೊಂಡ ಬೆಂಗಳೂರಿನ ಮಲ್ಟಿ ಆ್ಯಪ್ಸ್ ಟೆಕ್ನಾಲಜೀಸ್ ಎಂಬ ಕಂಪೆನಿ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ವಿನೂತನ ಪ್ರಯತ್ನದ ಮೂಲಕ ಪ್ರವಾಸಿಗರಿಗೆ ನೆರವಾಗಬೆಕು ಎಂಬ ಉದ್ದೇಶ ಹೊಂದಿರುವ ಕಂಪೆನಿ ಈಗಾಗಲೇ ಕನೆಕ್ಟ್ (ConneKt) ಎಂಬ ಆ್ಯಪ್ ಅನ್ನೂ ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT