ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಪಬ್ಲಿಕ್ ಪ್ರಾಪರ್ಟಿ ಅಲ್ಲ

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನೀಳಕಾಯದ ಸುಂದರಿ ಇಲಿಯಾನ ಸದ್ಯ 'ಬಾದಶಾಹೊ' ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ಸಿನಿತಾರೆ ಎನ್ನುವ ಕಾರಣಕ್ಕೆ ಬೇಕೆಂದಲ್ಲಿ ಬೇಕಾದಂತೆ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆರು ಮಂದಿ ಅವರನ್ನು ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು ‘ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಗಿರುವುದರಿಂದ ನಾನು ಪಬ್ಲಿಕ್‌ ಫಿಗರ್‌ ಆಗಿರಬಹುದು. ಆದರೆ ಖಂಡಿತಾ ಪಬ್ಲಿಕ್‌ ಪ್ರಾಪರ್ಟಿ ಅಲ್ಲ. ಹೆಣ್ಣು ಮಗಳ ಜೊತೆ ಹೇಗೆ ವರ್ತಿಸಬೇಕು ಎನ್ನುವುದನ್ನು ಮೊದಲು ಕಲಿತುಕೊಳ್ಳಿ’ ಎಂದು ಆಕ್ಷೇಪಿಸಿದ್ದಾರೆ. ಪ್ರಿಯಕರ ಆಂಡ್ರ್ಯೂ ಜತೆಗಿದ್ದ ಚಿತ್ರವನ್ನೂ ಇಲಿಯಾನ ಈಚೆಗೆ ಹಂಚಿಕೊಂಡಿದ್ದರು. ಅದಕ್ಕೂ ಕೆಲವರು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದರು.

‘ಆಂಡ್ರ್ಯೂ ಎಂಥ ವ್ಯಕ್ತಿ ಎನ್ನುವುದನ್ನು ತಿಳಿದುಕೊಳ್ಳುವ ಬದಲು ಎಲ್ಲರೂ ಆತನ ಮೈಬಣ್ಣದ ಬಗೆಗೆ ಮಾತನಾಡಿದ್ದಾರೆ. ಬೆಳ್ಳಗಿರುವುದಕ್ಕೇ ನಾನು ಆತನೊಂದಿಗೆ ಸ್ನೇಹ ಬೆಳೆಸಿದ್ದೇನೆ ಎಂದೆಲ್ಲಾ ಬರೆದಿದ್ದಾರೆ. ಈ ಪ್ರತಿಕ್ರಿಯೆಗಳು ನನಗೆ ಬೇಸರವನ್ನುಂಟು ಮಾಡಿವೆ. ವೈಯಕ್ತಿಕ ಬದುಕಿನ ಬಗೆಗೆ ಹೇಳಿಕೊಂಡಷ್ಟು ಕೆಟ್ಟದ್ದನ್ನೇ ಕೇಳಬೇಕಾಗುತ್ತದೆ. ಹೀಗಾಗಿ ಸುಮ್ಮನಿರುವುದೇ ವಾಸಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಇಲಿಯಾನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT