ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾ ಮುಸ್ಲಿಮರ ಪರ ನಿಂತವರು ಎಡಬಿಡಂಗಿಗಳು

Last Updated 12 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಕ್ರಮವಾಗಿ ದೇಶದೊಳಗೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರ ಗಡಿಪಾರು ವಿಷಯ ಕುರಿತು ಚರ್ಚೆ ಆರಂಭವಾಗಿದೆ. ಯಥಾಪ್ರಕಾರ ಕೆಲವು ಎಡಬಿಡಂಗಿಗಳು ಅವರ ಪರವಾಗಿ ನಿಂತಿದ್ದಾರೆ. ಇದು ದುರದೃಷ್ಟಕರ.

125 ಕೋಟಿ ಜನರಿರುವ ಈ ದೇಶದಲ್ಲಿ ಎಲ್ಲರಿಗೂ ಕುಡಿಯಲು ಶುದ್ಧ ನೀರು ಪೂರೈಸಲು ನಮಗೆ ಸಾಧ್ಯವಾಗಿಲ್ಲ. ಅಪೌಷ್ಟಿಕತೆಯಿಂದ ಲಕ್ಷಾಂತರ ಮಕ್ಕಳು ನರಳುತ್ತಿವೆ. ಅವರಿಗೆ ಪೌಷ್ಟಿಕ ಆಹಾರ ಪೂರೈಸಲಾಗಿಲ್ಲ. ವಸತಿ ಸೌಲಭ್ಯ ಮರೀಚಿಕೆಯಾಗಿದೆ. ನಮ್ಮ ಕಾಶ್ಮೀರಿ ಪಂಡಿತರಿಗೇ ಇನ್ನೂ ಪುನರ್ವಸತಿ ಕಲ್ಪಿಸಲಾಗಿಲ್ಲ. ಇಂತಹ ಸಂದರ್ಭದಲ್ಲಿ ಅಕ್ರಮ ವಲಸಿಗರ ಪರವಾಗಿ ಕೆಲವರು ವಾದಿಸುತ್ತಿರುವುದು ನಿಜಕ್ಕೂ ಸೋಜಿಗ.

ಈ ಅಕ್ರಮ ವಲಸಿಗರು, ಭಯೋತ್ಪಾದಕರ ಹಾಗೂ ದೇಶವಿರೋಧಿ ಶಕ್ತಿಗಳ ಪ್ರಲೋಭನೆಗೆ ಮತ್ತು ಆಮಿಷಗಳಿಗೆ ಒಳಗಾಗುವ ಅಪಾಯ ಇದೆ. ಇವರನ್ನು ನಿರ್ದಾಕ್ಷಿಣ್ಯವಾಗಿ ಗಡಿಪಾರು ಮಾಡಿ, ದೇಶದ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ.

–ಡಾ. ಜ್ಞಾನೇಶ್ವರ ಕೆ.ಬಿ., ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT