ಇಂದು ಎಎಫ್‌ಸಿ ಕಪ್‌ ಅಂತರ ವಲಯ ಎರಡನೇ ಸೆಮಿಫೈನಲ್‌ ಪಂದ್ಯ

ಬಿಎಫ್‌ಸಿಗೆ ಫೈನಲ್‌ ಪ್ರವೇಶದ ಕನಸು

ಹೋದ ತಿಂಗಳು ತವರಿನಲ್ಲಿ ನಡೆದಿದ್ದ ಮೊದಲ ಹಂತದ ಸೆಮಿಫೈನಲ್‌ನಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಎಎಫ್‌ಸಿ ಕಪ್‌ ಅಂತರ ವಲಯ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸುವ ಕನವರಿಕೆಯಲ್ಲಿದ್ದಾರೆ.

ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದ ಆಟಗಾರರು ಅಭ್ಯಾಸ ನಡೆಸಿದ ಕ್ಷಣ

ಪ್ಯೊಂಗ್‌ಯಾಂಗ್‌: ಹೋದ ತಿಂಗಳು ತವರಿನಲ್ಲಿ ನಡೆದಿದ್ದ ಮೊದಲ ಹಂತದ ಸೆಮಿಫೈನಲ್‌ನಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಎಎಫ್‌ಸಿ ಕಪ್‌ ಅಂತರ ವಲಯ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸುವ ಕನವರಿಕೆಯಲ್ಲಿದ್ದಾರೆ.

ಬುಧವಾರ ನಡೆಯುವ ಎರಡನೇ ಹಂತದ ಸೆಮಿಫೈನಲ್‌ನಲ್ಲಿ ಸುನಿಲ್‌ ಚೆಟ್ರಿ ಬಳಗ ಉತ್ತರ ಕೊರಿಯಾದ 4.25 ಎಫ್‌ಸಿ ತಂಡದ ವಿರುದ್ಧ ಸೆಣಸಲಿದೆ.

ಬಲಿಷ್ಠರ ನಡುವಣ ಈ ಹೋರಾಟಕ್ಕೆ ಮೇ ಡೆ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಆಗಸ್ಟ್‌ 23ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬಿಎಫ್‌ಸಿ 3–0 ಗೋಲುಗಳಿಂದ ಜಯಭೇರಿ ಮೊಳಗಿಸಿತ್ತು. ಈ  ಹೋರಾಟದಲ್ಲಿ ಮುಂಚೂಣಿ ವಿಭಾಗದ ಆಟಗಾರ ಚೆಟ್ರಿ, ಉದಾಂತ್‌ ಸಿಂಗ್‌ ಮತ್ತು ಲೆನ್ನಿ ರಾಡ್ರಿಗಸ್‌ ಅವರು ತಲಾ ಒಂದು ಗೋಲು ಬಾರಿಸಿ ಮಿಂಚಿದ್ದರು.

ಉತ್ತಮ ಲಯದಲ್ಲಿರುವ ಇವರು ಮತ್ತೊಮ್ಮೆ ಮೋಡಿ ಮಾಡಲು ಕಾಯುತ್ತಿದ್ದಾರೆ.

ಅಲ್ಬರ್ಟೊ ರೋಕಾ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಬೆಂಗಳೂರಿನ ತಂಡ ಹಿಂದಿನ ಕೆಲ ಪಂದ್ಯಗಳಲ್ಲಿ ಆರಂಭದಲ್ಲೇ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟು ಸಂಕಷ್ಟ ಅನುಭವಿಸಿತ್ತು. ಬುಧವಾರ ಚೆಟ್ರಿ ಬಳಗ ಈ ತಪ್ಪನ್ನು ತಿದ್ದಿಕೊಂಡು ಆಡಬೇಕಿದೆ.

ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ನಲ್ಲಿ ಆಡಿದ ಅನುಭವ ಹೊಂದಿರುವ ಸ್ಪೇನ್‌ನ ಡಿಮಾಸ್‌ ಡೆಲ್‌ಗಾಡೊ ಅವರು ತಂಡದಲ್ಲಿರುವುದು ಬಿಎಫ್‌ಸಿಯ ಬಲ ಹೆಚ್ಚಿಸಿದೆ.

ಹರ್ಮನ್‌ಜೋತ್‌ ಖಾಬ್ರಾ, ರಕ್ಷಣಾ ವಿಭಾಗದ ಆಟಗಾರರಾದ ಜಾನ್‌ ಜಾನ್ಸನ್‌ ಮತ್ತು ನಿಶುಕುಮಾರ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ.

‘4.25 ಎಫ್‌ಸಿ ತಂಡದಲ್ಲಿ ಬಲಿಷ್ಠ ಆಟಗಾರರಿದ್ದಾರೆ. ತವರಿನಲ್ಲಿ ಆ ತಂಡವನ್ನು ಮಣಿಸುವುದು ಅಷ್ಟು ಸುಲಭವಲ್ಲ. ನಾವು 3–0ರ ಮುನ್ನಡೆ ಹೊಂದಿದ್ದೇವೆ. ಹಾಗಂತ ಮೈಮರೆತರೆ ಅಪಾಯ ತಪ್ಪಿದ್ದಲ್ಲ. ಮಂಗಳವಾರ ಸಂಜೆ ಇಲ್ಲಿಗೆ ಬಂದಿರುವುದರಿಂದ ಸರಿಯಾಗಿ ಅಭ್ಯಾಸ ನಡೆಸಲೂ ಆಗಿಲ್ಲ. ಹೀಗಿದ್ದರೂ ನಮ್ಮ ಆಟಗಾರರು ದಿಟ್ಟ ಹೋರಾಟ ನಡೆಸುವ ಭರವಸೆ ಇದೆ’ ಎಂದು ಬಿಎಫ್‌ಸಿ ಕೋಚ್‌ ರೋಕಾ ತಿಳಿಸಿದ್ದಾರೆ.

ತಿರುಗೇಟು ನೀಡಲು ಕಾತರ: ಎಎಫ್‌ಸಿ ಕಪ್‌ನಲ್ಲಿ ಮೊದಲ ಬಾರಿಗೆ ಆಡುತ್ತಿರುವ 4.25 ಎಫ್‌ಸಿ ತಂಡ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಕಣಕ್ಕಿಳಿಯಲಿದ್ದು, ಜಯದ ಮಂತ್ರ ಜಪಿಸುತ್ತಿದೆ.

ಈಸ್ಟ್‌ ಏಷ್ಯಾ ವಲಯದಲ್ಲಿ ಪ್ರಶಸ್ತಿ ಗೆದ್ದಿದ್ದ ಈ ತಂಡ ಫೈನಲ್‌ ಪ್ರವೇಶಿಸಬೇಕಾದರೆ 4–0 ಗೋಲುಗಳ ಅಂತರದಿಂದ ಗೆಲ್ಲಬೇಕು. ಬೊಮ್‌ ಪಡೆ ಹಿಂದಿನ ಪಂದ್ಯದಲ್ಲಿ ಗೋಲಿನ ಖಾತೆ ತೆರೆಯಲು ವಿಫಲವಾಗಿತ್ತು.

ಕಿಮ್‌ ಯು ಸೊಂಗ್‌ ಮತ್ತು ನಾಯಕ ಆ್ಯನ್‌ ಅಲ್‌ ಬೊಮ್‌ ಅವರು ಆತಿಥೇಯರ ಶಕ್ತಿ ಎನಿಸಿದ್ದಾರೆ.

ಕಿಮ್‌ ಅವರು ಟೂರ್ನಿಯಲ್ಲಿ ಹೆಚ್ಚು ಗೋಲು ಗಳಿಸಿದ ಹಿರಿಮೆ ಹೊಂದಿದ್ದಾರೆ. ಅವರ ಖಾತೆಯಲ್ಲಿ ಒಂಬತ್ತು ಗೋಲುಗಳಿವೆ.

ಪಂದ್ಯದ ಆರಂಭ: ಮಧ್ಯಾಹ್ನ 2ಕ್ಕೆ.

Comments
ಈ ವಿಭಾಗದಿಂದ ಇನ್ನಷ್ಟು
 ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯ: ಭಾರತ ತಂಡದ ಕನಸು ಭಗ್ನ

ಬ್ಯಾಸ್ಕೆಟ್‌ಬಾಲ್‌
ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯ: ಭಾರತ ತಂಡದ ಕನಸು ಭಗ್ನ

24 Feb, 2018
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮಹಾರಾಷ್ಟ್ರ ಸವಾಲು

ನವದೆಹಲಿ
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮಹಾರಾಷ್ಟ್ರ ಸವಾಲು

24 Feb, 2018

ಬೆಂಗಳೂರು
ಕರ್ನಾಟಕ ತಂಡಕ್ಕೆ ಕಂಚು

ಕರ್ನಾಟಕ ಪುರುಷರ ತಂಡ ಛತ್ತೀಸಗಡದ ಭಿಲಾಯ್‌ನಲ್ಲಿ ನಡೆದ ಅಖಿಲ ಭಾರತ ಅಂತರ ರಾಜ್ಯಗಳ ಪುರುಷರ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಪಡೆದಿದೆ

24 Feb, 2018
ಭಾರತ ತಂಡಕ್ಕೆ ರಾಣಿ ನಾಯಕಿ

ನವದೆಹಲಿ
ಭಾರತ ತಂಡಕ್ಕೆ ರಾಣಿ ನಾಯಕಿ

24 Feb, 2018
ಚಳಿಗಾಲದ ಒಲಿಂಪಿಕ್ಸ್‌:  ಅಲಿನಾಗೆ ಚಿನ್ನದ ಸಂಭ್ರಮ

ಕ್ರೀಡೆ
ಚಳಿಗಾಲದ ಒಲಿಂಪಿಕ್ಸ್‌: ಅಲಿನಾಗೆ ಚಿನ್ನದ ಸಂಭ್ರಮ

24 Feb, 2018