ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಸಿಗಾಗಿ ಕಾದು ಕಾದು ಸುಸ್ತಾದ ಜನ

Last Updated 13 ಸೆಪ್ಟೆಂಬರ್ 2017, 6:35 IST
ಅಕ್ಷರ ಗಾತ್ರ

ಹೊಸಪೇಟೆ: ಬಳ್ಳಾರಿಯಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಸಾರಿಗೆ ಸಂಸ್ಥೆಯ ಬಹುತೇಕ ಬಸ್‌ಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರಿಂದ ಜನ ತೊಂದರೆ ಪಡಬೇಕಾಯಿತು.

ತಾಲ್ಲೂಕು ಕೇಂದ್ರಗಳು ಹಾಗೂ ದೂರದ ಊರುಗಳಿಗೆ ಸಂಚರಿಸುವ ಬಸ್‌ಗಳು ಬೆಳಿಗ್ಗೆಯಿಂದಲೇ ರಸ್ತೆಗೆ ಇಳಿಯಲಿಲ್ಲ. ಇದರಿಂದ ಪ್ರಯಾಣಿಕರು ನಿಲ್ದಾಣದಲ್ಲೇ ಕಾದು ಕಾದು ಸುಸ್ತಾದರು. ಕೆಲವರು ಖಾಸಗಿ ವಾಹನಗಳಲ್ಲಿ ಊರಿಗೆ ಪ್ರಯಾಣ ಬೆಳೆಸಿದರೆ, ಕೆಲವರು ನಿಲ್ದಾಣ ದಲ್ಲಿಯೇ ತೂಕಡಿಸುತ್ತ ಕುಳಿತಿದ್ದರು. ಮತ್ತೆ ಕೆಲವರು  ವಿಚಾರಣೆ ಕೊಠಡಿಗೆ ಹೋಗಿ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಬೆರಳೆಣಿಕೆಯಷ್ಟು ಬಸ್ಸುಗಳು ಓಡಾಡಿದ ಕಾರಣ ಜನರಿಲ್ಲದೇ ಇಡೀ ನಿಲ್ದಾಣ ಬಿಕೋ ಎನ್ನುತ್ತಿತ್ತು.

‘ಹೊಸಪೇಟೆ ವಿಭಾಗಕ್ಕೆ ಸೇರಿದ 450 ಬಸ್ಸುಗಳ ಪೈಕಿ 250 ಬಸ್ಸುಗಳನ್ನು ಸಮಾವೇಶಕ್ಕಾಗಿ ಬಾಡಿಗೆ ಪಡೆಯಲಾಗಿದೆ. ಸಂಜೆ ಎಂದಿನಂತೆ ಸಂಚಾರ ಆರಂಭವಾಗಲಿದೆ’ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿ ‘ಪ್ರಜಾ ವಾಣಿ’ಗೆ ತಿಳಿಸಿದರು.

ಪ್ರಯಾಣಿಕರ ಪರದಾಟ
ಸಿರುಗುಪ್ಪ: ನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಬಸ್‌ ನಿಲ್ದಾಣ, ಹೋಟೆಲ್‌, ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಮಂಗಳವಾರ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶ ಹಿನ್ನೆಲೆಯಲ್ಲಿ ಬಸ್‌, ಟ್ರ್ಯಾಕ್ಸ್‌ ಗಳನ್ನು ಬಾಡಿಗೆಗೆ ಪಡೆದಿದ್ದ ಕಾರಣ ವಾಹನ ವ್ಯತ್ಯಯ ಉಂಟಾಯಿತು.

ರಾಜ್ಯ ರಸ್ತೆ ಸಾರಿಗೆ ನಿಗಮದ ಸಿರುಗುಪ್ಪ ಘಟಕದಿಂದ 75 ಬಸ್‌ಗಳನ್ನು ಒಪ್ಪಂದದ ಮೇರೆಗೆ ಕಳಿಸಲಾಗಿತ್ತು. ಹಾಗಾಗಿ 85 ಮಾರ್ಗಗಳಲ್ಲಿ ಸಂಚರಿಸ ಬೇಕಿದ್ದ ಬಸ್‌ಗಳು ಸೇವೆ ಸ್ಥಗಿತಗೊಳಿಸಿ ದ್ದವು. ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್‌ಗಳಿಲ್ಲದೇ ಪರದಾಡಿದರು.

ವಿದ್ಯಾರ್ಥಿನಿ ಮೀನಾಕ್ಷಿ ಮಾತನಾಡಿ, ‘ಬೆಳಗಿನ ಜಾವವೇ ಕಾಲೇಜಿಗೆ ಬಂದಿದ್ದೆ. ಮರಳಿ ಊರಿಗೆ ಹೋಗಲು ಬಸ್‌ ಇಲ್ಲ. ನಾವು ಹೋಗುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು. ಸಂಚಾರಿ ನಿಯಂತ್ರಕ ವಿ.ಶ್ರೀನಿ ವಾಸ್ ಪ್ರಯಾಣಿಕರಿಗೆ ಪ್ರತಿಕ್ರಿಯಿಸಿ ಸುಸ್ತಾಗಿ ದ್ದರು. ‘2 ದಿನಗಳ ಹಿಂದೆಯೇ ಬಸ್‌ ಅಲಭ್ಯತೆಯ ಕುರಿತು ನಿಲ್ದಾಣದ ಸೂಚನಾ ಫಲಕದಲ್ಲಿ ಪ್ರಕಟಿಸಿ ಪ್ರಯಾ ಣಿಕರಿಗೆ ಮಾಹಿತಿ ನೀಡಿದ್ದೆವು’ ಎಂದು ಹೇಳಿದರು.

ಬಸ್ಸೂ ಇಲ್ಲ, ಟ್ರ್ಯಾಕ್ಸೂ ಇಲ್ಲ
ಕೂಡ್ಲಿಗಿ: ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗಿಯಾಗಲು ತಾಲ್ಲೂಕಿನ ಜನರು ತೆರಳಿದ ಪರಿಣಾಮ ಪಟ್ಟಣದ ರಸ್ತೆಗಳೆಲ್ಲ ಬಿಕೋ ಎನ್ನುತ್ತಿ ದ್ದವು. ವ್ಯಾಪಾರ ವಹಿವಾಟು ಕುಂಟಿತವಾಗಿತ್ತು.

ಸಮಾವೇಶಕ್ಕೆ ಜನರನ್ನು ಕರೆದೊ ಯ್ಯಲು ಸ್ಥಳೀಯ ಘಟಕದ ಎಲ್ಲಾ ಬಸ್‌ಗಳು, ಟ್ರ್ಯಾಕ್ಸ್, ಖಾಸಗಿ ಬಸ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಇದರಿಂದ ತಾಲ್ಲೂ ಕಿನ ಗ್ರಾಮೀಣ ಭಾಗಕ್ಕೆ ಯಾವುದೇ ಬಸ್ ಸಂಚಾರ ಇಲ್ಲದೇ ಜನರು ಪರದಾಡಿ ದರು. ವಿದ್ಯಾರ್ಥಿಗಳು ಸಹ ಶಾಲಾ, ಕಾಲೇಜಿಗೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT