ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನಲ್ಲಿ ಶೇ 85 ರಷ್ಟು ಬಿತ್ತನೆ ಪೂರ್ಣ

Last Updated 13 ಸೆಪ್ಟೆಂಬರ್ 2017, 6:39 IST
ಅಕ್ಷರ ಗಾತ್ರ

ಸಂಡೂರು: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ, ಕೃಷಿಗೆ ಚೇತರಿಕೆ ನೀಡಿದೆ. ಉತ್ತಮ ಮಳೆಯಾದ ಪರಿಣಾಮ ತಾಲ್ಲೂಕಿನಲ್ಲಿ ಶೇ 85 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ‘ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 30010 ಹೆಕ್ಟೇರ್ ಪ್ರದೇಶ ದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು.

ಸೆ.11ರವರೆಗೆ ತಾಲ್ಲೂಕಿನಲ್ಲಿ 25417 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ದರೋಜಿ ಕೆರೆ ನೀರು ಮತ್ತು ಕಾಲುವೆ ನೀರಿನ ಮೇಲೆ ಅವಲಂಬನೆಯಾಗಿ ಪ್ರತಿವರ್ಷ ಭತ್ತ ಬೆಳೆಯುತ್ತಿದ್ದ ಕುರೆಕುಪ್ಪ ಹಾಗೂ ದರೋಜಿ ಭಾಗದ ರೈತರು ಈ ಬಾರಿ ನೀರಿನ ಕೊರತೆಯಿಂದ ಪರ್ಯಾ ಯ ಬೆಳೆಗಳತ್ತ ಮುಖ ಮಾಡಿ ದ್ದಾರೆ’ ಎಂದು ಸಹಾಯಕ ಕೃಷಿ ನಿರ್ದೇಶಕಿ ಗೌರಾ ಮುಕುಂದರಾವ್ ತಿಳಿಸಿದರು.

ವಿವಿಧ ಬೆಳೆಗಳ ಬಿತ್ತನೆ ಪ್ರಮಾಣ (ಆವರಣದಲ್ಲಿರುವುದು ಗುರಿ, ಹೊರಗಿ ರುವುದು ಬಿತ್ತನೆ ಪ್ರಮಾಣ): ನೀರಿನ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಭತ್ತ, ಹತ್ತಿ, ಸೂರ್ಯಕಾಂತಿ, ಜೋಳದ ಬಿತ್ತನೆ ನಿಗದಿತ ಗುರಿಗಿಂತ ಕಡಿಮೆಯಾಗಿದ್ದರೆ, ಮೆಕ್ಕೆಜೋಳ, ರಾಗಿ, ಶೇಂಗಾ ಬಿತ್ತನೆ ಗುರಿಗಿಂತ ಹೆಚ್ಚಾಗಿದೆ.

ಭತ್ತ 300 ಹೆಕ್ಟೇರ್ (1150 ಹೆಕ್ಟೇರ್), ಜೋಳ 1667 ಹೆಕ್ಟೇರ್ (3750 ಹೆಕ್ಟೇರ್), ರಾಗಿ 700 ಹೆಕ್ಟೇರ್ (550 ಹೆಕ್ಟೇರ್), ಮೆಕ್ಕೆಜೋಳ 13170 ಹೆಕ್ಟೇರ್ (13000 ಹೆಕ್ಟೇರ್), ಸಜ್ಜೆ 2543 ಹೆಕ್ಟೇರ್ (2400 ಹೆಕ್ಟೇರ್), ತೊಗರಿ 770 ಹೆಕ್ಟೇರ್ (700 ಹೆಕ್ಟೇರ್), ಹೆಸರು 10 ಹೆಕ್ಟೇರ್ (55 ಹೆಕ್ಟೇರ್), ಅಲಸಂದಿ 10 ಹೆಕ್ಟೇರ್ ( 55 ಹೆಕ್ಟೇರ್), ಶೇಂಗಾ 2900 ಹೆಕ್ಟೇರ್ (1600 ಹೆಕ್ಟೇರ್), ಎಳ್ಳು 150 ಹೆಕ್ಟೇರ್ (550 ಹೆಕ್ಟೇರ್), ಗುರೆಳ್ಳು 50 ಹೆಕ್ಟೇರ್ (55 ಹೆಕ್ಟೇರ್), ಹತ್ತಿ 680 ಹೆಕ್ಟೇರ್ (4810 ಹೆಕ್ಟೇರ್). ಸೂರ್ಯಕಾಂತಿ 27 ಹೆಕ್ಟೇರ್ (500 ಹೆಕ್ಟೇರ್). ಆರಂಭದಲ್ಲಿ ನಿರೀಕ್ಷಿತ ಪ್ರಮಾಣ ದಲ್ಲಿ ಮಳೆ ಬೀಳದ ಕಾರಣ ರೈತರಲ್ಲಿ ಆತಂಕ ಉಂಟಾಗಿತ್ತು.

* * 

ಸಂಡೂರು ಭಾಗದಲ್ಲಿ ಸದ್ಯಕ್ಕೆ ಬೆಳೆಗೆ ಅಗತ್ಯವಿರುವಷ್ಟು ಮಳೆ ಬಂದಿದೆಯಾದರೂ, ಇನ್ನಷ್ಟು ಮಳೆ ಅಗತ್ಯವಾಗಿದೆ
ಧರ್ಮಾನಾಯ್ಕ್
ಅಧ್ಯಕ್ಷ, ರೈತ ಸಂಘ, ಸಂಡೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT