ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗರ ಕೆರೆಗೆ ನೀರು ತುಂಬಿಸಲು ಕ್ರಮ - ಶಾಸಕ

Last Updated 13 ಸೆಪ್ಟೆಂಬರ್ 2017, 8:25 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಅಗರ ಗ್ರಾಮದ ಕೆರೆಗೆ ನೀರು ತುಂಬಿಸಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಶಾಸಕ ಎಸ್. ಜಯಣ್ಣ ತಿಳಿಸಿದರು.ಮಂಗಳವಾರ ಅಗರ ಕೆರೆ, ಇದಕ್ಕೆ ಸಂಪರ್ಕ ಕಲ್ಪಿಸುವ ಕಾಲುವೆ ಮತ್ತು ಗೇಟ್‌ಗಳ ಅಳವಡಿಕೆಯ ಬಗ್ಗೆ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ವ್ಯಾಪ್ತಿಯ 7 ಗ್ರಾಮಗಳ ಮುಖಂಡರೊಂದಿಗೆ ಪರಿಶೀಲಿಸಿ ಮಾತನಾಡಿದರು.

ಸಂತೆಮರಹಳ್ಳಿಯ 42ನೇ ವಿತರಣಾ ನಾಲೆಯಿಂದ ಹೊನ್ನೂರು ಮಾರ್ಗವಾಗಿ ನೀರು ತುಂಬಿಸಲಾಗುತ್ತದೆ. ಕೆರೆಯ ಅಭಿವೃದ್ಧಿಗೆ 2016-17 ನೇ ಸಾಲಿನಲ್ಲಿ ₹ 1.60 ಕೋಟಿ ಬಿಡುಗಡೆಯಾಗಿದೆ ಎಂದು ಹೇಳಿದರು.

ಅಲ್ಲದೆ, ಗಣಿಗನೂರು ಕೆರೆಯ ಸೋರಿಕೆ ನೀರು ತಡೆಗಟ್ಟಲು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಮುಖಂಡರಾದ ಗುರುಸ್ವಾಮಿ, ಗ್ರಾ.ಪಂ. ಸದಸ್ಯ ಪುಟ್ಟಸುಬ್ಬಣ್ಣ, ಗುರುಸ್ವಾಮಿ, ಶಿವಣ್ಣ, ಕಿನಕಹಳ್ಳಿ ಬಸವಣ್ಣ, ನಾಗಸುಂದರ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜು, ಗೋಪಾಲಯ್ಯ, ಮುಡಿಗುಂಡ ಶಾಂತರಾಜು, ಇಇ ಮಂಜುನಾಥ್, ಎಇಇ ರಘು ಜೆಇ ರಾಮಕೃಷ್ಣ, ಶಿವಕುಮಾರ್ ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT