ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗಳ ಘರ್ಜನೆಗೆ ಹೃದಯಾಘಾತವಾಗಿ 12 ಕೋತಿಗಳು ಸಾವು!

Last Updated 13 ಸೆಪ್ಟೆಂಬರ್ 2017, 10:59 IST
ಅಕ್ಷರ ಗಾತ್ರ

ಲಖನೌ: ಹುಲಿಗಳ ಘರ್ಜನೆಗೆ ಹೃದಯಾಘಾತವಾಗಿ 12 ಕೋತಿಗಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ.

ಇಲ್ಲಿನ ಕೊತ್ವಾಲಿ ಮೊಹಮ್ಮದಿ ಪ್ರದೇಶದ ಆರಣ್ಯದಲ್ಲಿ ಕೋತಿಗಳು ಸಾವನ್ನಪಿವೆ.

ಕಳೆದ ಸೋಮವಾರ ಸತ್ತು ಬಿದ್ದಿರುವ ಕೋತಿಗಳನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಮೃತದೇಹಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಶವ ಪರೀಕ್ಷೆಗಾಗಿ ಆಸ್ಟತ್ರೆಗೆ ರವಾನಿಸಿದ್ದರು.

ಶವ ಪರೀಕ್ಷೆ  ನಡೆಸಿದ ಪಶುವೈದ್ಯರು ಹುಲಿಗಳ ಘರ್ಜನೆಯಿಂದ ಕೋತಿಗಳಿಗೆ ಹೃದಯಾಘಾತವಾಗಿ ಅವುಗಳು ಮೃತಪಟ್ಟಿವೆ ಎಂದು ಪಶು ವೈದ್ಯರು  ತಿಳಿಸಿದ್ದಾರೆ.

‘ಆರಣ್ಯ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಸಂಚರಿಸುವುದರಿಂದ ಅವುಗಳ ಘರ್ಜನೆ ಕೇಳಿ ಕೋತಿಗಳಿಗೆ ಹೃದಯಾಘಾತವಾಗಿರಬಹುದು’ ಎಂದು ಪಶುವೈದ್ಯ ಡಾ. ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

‘ಕೋತಿಗಳಿಗೆ ಒಂದೇ ಬಾರಿ ಹೃದಯಾಘಾತವಾಗಿದೆ ಎಂಬ ಅಂಶವನ್ನು ವನ್ಯಜೀವಿ ತಜ್ಞರು ತಳ್ಳಿ ಹಾಕಿದ್ದು, ಯಾವುದಾದರೂ ಸೋಂಕಿನಿಂದ ಕೋತಿಗಳು ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದಿದ್ದಾರೆ.

‘ಕೋತಿಗಳು ಕಾಡು ಪ್ರಾಣಿಗಳು. ಅವು ಏಕಕಾಲಕ್ಕೆ ಈ ರೀತಿ ಮೃತಪಡಲು ಸಾಧ್ಯವಿಲ್ಲ.  ಅವು  ಸೋಂಕಿನಿಂದ ಬಳಲಿ ಮೃತಪಟ್ಟಿರಬಹುದು ಎಂದು ಪಶುವೈದ್ಯ ಡಾ. ಬ್ರಿಜೇಂದ್ರ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT