ಸಾಮಾಜಿಕ ಜಾಲತಾಣದಲ್ಲಿ ವೈರಲ್

ಜಾಹೀರಾತಿನಲ್ಲಿ ಜತೆಯಾಗಿ ಕಾಣಿಸಿಕೊಂಡ ಕೊಹ್ಲಿ, ಅನುಷ್ಕಾ!

ಅನುಷ್ಕಾ ಕ್ಯಾಮೆರಾ ನೋಡುತ್ತಾ ಹಸನ್ಮುಖದಲ್ಲಿದ್ದರೆ, ವಿರಾಟ್ ಅನುಷ್ಕಾ ಅವರ ಮೊಗವನ್ನೇ ನೋಡುತ್ತಿರುವ ಫೊಟೋ ವೈರಲ್ ಆಗಿದೆ.

ಜಾಹೀರಾತಿನಲ್ಲಿ ಜತೆಯಾಗಿ ಕಾಣಿಸಿಕೊಂಡ ಕೊಹ್ಲಿ, ಅನುಷ್ಕಾ!

ನವದೆಹಲಿ: ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜತೆಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಬಂಧದ ಚಿತ್ರವನ್ನು ವಿರಾಟ್ ಕೊಹ್ಲಿ ಅಭಿಮಾನಿ ಬಳಗ ಟ್ವೀಟ್ ಮಾಡಿದೆ.

ಈ ಚಿತ್ರದಲ್ಲಿ ಅನುಷ್ಕಾ ಗುಲಾಬಿ ಮತ್ತು ಬಂಗಾರ ಬಣ್ಣದ ಲೆಹೆಂಗಾ ತೊಟ್ಟು ಮಿಂಚುತ್ತಿದ್ದರೆ, ಕೊಹ್ಲಿ ಅವರು ಕಪ್ಪು ಮತ್ತು ಗುಲಾಬಿ ಬಣ್ಣದ ಪೈಜಾಮ ಧರಿಸಿದ್ದಾರೆ. ಇಬ್ಬರು ಸಾಂಪ್ರದಾಯಿಕ ಉಡುಗೆ ಧರಿಸಿ ಜಾಹೀರಾತಿನ ಚಿತ್ರೀಕರಣ ಮುಗಿಸಿದ್ದಾರೆ ಎನ್ನಲಾಗಿದೆ. 

ಈ ಜಾಹೀರಾತಿನ ಚಿತ್ರ ಅಭಿಮಾನಿಗಳಿಗೆ ದೊರೆತಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಜೋಡಿ ಯಾವ ಬಗೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಬಗ್ಗೆ ತಿಳಿದು ಬಂದಿಲ್ಲ.  ಅನುಷ್ಕಾ ಕ್ಯಾಮೆರಾ ನೋಡುತ್ತಾ ಹಸನ್ಮುಖದಲ್ಲಿದ್ದರೆ, ವಿರಾಟ್ ಅನುಷ್ಕಾ ಅವರ ಮೊಗವನ್ನೇ ನೋಡುತ್ತಿರುವ ಫೊಟೋ ವೈರಲ್ ಆಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
 ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯ: ಭಾರತ ತಂಡದ ಕನಸು ಭಗ್ನ

ಬ್ಯಾಸ್ಕೆಟ್‌ಬಾಲ್‌
ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯ: ಭಾರತ ತಂಡದ ಕನಸು ಭಗ್ನ

24 Feb, 2018
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮಹಾರಾಷ್ಟ್ರ ಸವಾಲು

ನವದೆಹಲಿ
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮಹಾರಾಷ್ಟ್ರ ಸವಾಲು

24 Feb, 2018

ಬೆಂಗಳೂರು
ಕರ್ನಾಟಕ ತಂಡಕ್ಕೆ ಕಂಚು

ಕರ್ನಾಟಕ ಪುರುಷರ ತಂಡ ಛತ್ತೀಸಗಡದ ಭಿಲಾಯ್‌ನಲ್ಲಿ ನಡೆದ ಅಖಿಲ ಭಾರತ ಅಂತರ ರಾಜ್ಯಗಳ ಪುರುಷರ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಪಡೆದಿದೆ

24 Feb, 2018
ಭಾರತ ತಂಡಕ್ಕೆ ರಾಣಿ ನಾಯಕಿ

ನವದೆಹಲಿ
ಭಾರತ ತಂಡಕ್ಕೆ ರಾಣಿ ನಾಯಕಿ

24 Feb, 2018
ಚಳಿಗಾಲದ ಒಲಿಂಪಿಕ್ಸ್‌:  ಅಲಿನಾಗೆ ಚಿನ್ನದ ಸಂಭ್ರಮ

ಕ್ರೀಡೆ
ಚಳಿಗಾಲದ ಒಲಿಂಪಿಕ್ಸ್‌: ಅಲಿನಾಗೆ ಚಿನ್ನದ ಸಂಭ್ರಮ

24 Feb, 2018