ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಕ್ಷನ್, ಕಟ್ ಜಗತ್ತಿನ ಹೊರಗೆ

Last Updated 13 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹಸಿರುಪ್ರೇಮಿ ಶ್ರದ್ಧಾ
ಶ್ರದ್ಧಾ ಕಪೂರ್‌ ಪರಿಸರಪ್ರಿಯೆ. ಹಸಿರು ವಾತಾವರಣವನ್ನು ತುಂಬಾ ಮೆಚ್ಚುವರಂತೆ. ಅದಕ್ಕಾಗಿ ಬಿಡುವು ಸಿಕ್ಕರೆ ಗಿಡಗಳ ಆರೈಕೆಯಲ್ಲೇ ಖುಷಿ ಪಡುವರು. ತೋಟದಲ್ಲಿ ಓಡಾಡುವುದು ಅವರನ್ನು ಉಲ್ಲಾಸದಾಯಕ ಆಗಿಸುತ್ತದೆಯಂತೆ. ಆದ್ದರಿಂದ ಶ್ರದ್ಧಾಗೆ ಗಾರ್ಡೆನಿಂಗ್‌ನಲ್ಲಿ ತುಂಬಾ ಆಸಕ್ತಿ.

*


ಅಡುಗೆ ಪ್ರಿಯೆ ಕಂಗನಾ
ಶೂಟಿಂಗ್‌ಗೆ ದೇಶ ವಿದೇಶ ಸುತ್ತುತ್ತಿರುವುದೇ ಹೆಚ್ಚು. ಆದರೂ ಆಗೊಮ್ಮೆ ಈಗೊಮ್ಮೆ ಬಿಡುವು ಅಂತೇನಾದರೂ ಸಿಕ್ಕರೆ ಕಂಗನಾ ಸೀದಾ ದಾಂಗುಡಿ ಇಡುವುದು ಅಡುಗೆ ಮನೆಗೇ. ಅಲ್ಲೇ ಅವರ ಠಿಕಾಣಿ. ಭಿನ್ನ ಭಿನ್ನ ರೀತಿಯ ಅಡುಗೆ ಮಾಡುವುದು, ಅದರಲ್ಲೂ ಪ್ರಯೋಗಿಸುವುದು, ಪ್ರೀತಿಯಿಂದ ಅಡುಗೆ ಮಾಡಿ ಬಡಿಸಿ, ತಿಂದವರು ತೇಗಿ ಆಹ್ ಎನ್ನುವುದನ್ನು ಕಾಯುವುದು ಕಂಗನಾಗೆ ಬಲು ಇಷ್ಟವಂತೆ. ಅಡುಗೆಯೇ ಅವರಿಗೆ ಪ್ರಿಯ ಹವ್ಯಾಸವಂತೆ.

*


ಪೇಂಟಿಂಗ್ ಪ್ರಿಯೆ ಅಲಿಯಾ
ಅಲಿಯಾ ಭಟ್‌ ನಟನೆ, ನೃತ್ಯ, ಹಾಡುಗಾರಿಕೆಯಲ್ಲಷ್ಟೇ ಮುಂದೆ ಇಲ್ಲ, ಈ ಚೆಲುವೆಗೆ ಪೇಂಟಿಂಗ್‌ಗಳೆಂದರೂ ತುಂಬಾ ಇಷ್ಟ. ಅವುಗಳನ್ನು ನೋಡುವುದಷ್ಟೇ ಅಲ್ಲ, ಸ್ವತಃ ತಾವೇ ಪೇಂಟಿಂಗ್ ಮಾಡುತ್ತಾರೆ. ಇದ್ದಿಲಿನ ಸ್ಕೆಚಿಂಗ್, ಪೇಂಟಿಂಗ್ ಅವರ ಮೆಚ್ಚಿನ ಮಾಧ್ಯಮ. ಅವರೇ ಬಿಡಿಸಿದ ಒಂದು ಸ್ಕೆಚಿಂಗ್ ಅನ್ನು ಅರ್ಜುನ್ ಕಪೂರ್‌ಗೂ ಉಡುಗೊರೆ ನೀಡಿದ್ದಾರೆ.

*


ಮಣ್ಣಿನೊಂದಿಗೆ ಕಲೆತ ದಿಯಾ
ದಿಯಾ ಮಿರ್ಜಾಗೆ ಬೋರ್ ಆದಾಗಲೆಲ್ಲಾ ಮಣ್ಣಿನೊಂದಿಗೆ ಆಡಲು ಹೋಗುತ್ತಾರೆ. ಅಂದರೆ ಮಣ್ಣಿನ ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಪಾಟೆರಿ ಎಂದರೆ ದಿಯಾಗೆ ಅತಿ ಹುಚ್ಚು. ಹೀಗೆ ಒಮ್ಮೆ 2011ರಲ್ಲಿ ಸಿನಿಮಾವೊಂದರ ಶೂಟಿಂಗ್ ವೇಳೆ ಮಡಕೆ ಮಾಡುವ ಸೀನ್ ಇತ್ತು. ಅಲ್ಲೇ ಇವರಿಗೆ ಮಣ್ಣಿನ ಮೇಲೆ ಸೆಳೆತ ಉಂಟಾಗಿದ್ದು. ನಂತರ ಅದು ಅವರನ್ನು ಬಿಡಲೇ ಇಲ್ಲ.

*


ಹಾಡುತ್ತೇನೆಂದ ಪ್ರಿಯಾಂಕಾ
ನಟನೆ, ಡಾನ್ಸ್, ಫೈಟ್ ಅಷ್ಟೇ ಅಲ್ಲ, ಪ್ರಿಯಾಂಕಾಗೆ ಸಂಗೀತವೆಂದರೆ ಬಲು ಇಷ್ಟ. ಹಾಡುತ್ತಾ ಹಾಡುತ್ತಾ ಮೈ ಮರೆಯುವುದು ಅವರಿಗೆ ನೆಚ್ಚಿನ ಸಂಗತಿ. ಸಮಯ ಸಿಕ್ಕರೆ ಗುನುಗುತ್ತಲೋ, ಹಾಡುತ್ತಲೋ ಕಾಲ ಕಳೆಯುತ್ತಾರೆ. ಪಾಶ್ಚಾತ್ಯ ಸಂಗೀತ ಅಭ್ಯಸಿಸಿರುವ ಪ್ರಿಯಾಂಕಾ ಅವರದ್ದೇ ಮ್ಯೂಸಿಕ್ ಆಲ್ಬಂ ಕೂಡ ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT