ತಂತ್ರೋಪನಿಷತ್ತು

ಪೆನ್‌ಡ್ರೈವ್‌ ತೆಗೆಯುವ ಮುನ್ನ

ಯುಎಸ್‌ಬಿ ಪೋರ್ಟ್‌ನಿಂದ ನೇರವಾಗಿ ಪೆನ್‌ಡ್ರೈವ್‌ ತೆಗೆಯುವುದೇ ಅಥವಾ Safely Remove Hardware ನೋಟಿಫಿಕೇಷನ್‌ ಐಕಾನ್‌ ಮೇಲೆ ಕ್ಲಿಕ್ಕಿಸಿ ಬಳಿಕ ಪೆನ್‌ಡ್ರೈವ್‌ ತೆಗೆಯುವುದೇ ಎಂಬ ಗೊಂದಲ ಇದು.

ಪೆನ್‌ಡ್ರೈವ್‌ ತೆಗೆಯುವ ಮುನ್ನ

ಕಂಪ್ಯೂಟರ್‌ ಬಳಸುವವರ ಬಳಿಯಲ್ಲೆಲ್ಲಾ ಕನಿಷ್ಠ ಒಂದಾದರೂ ಪೆನ್‌ಡ್ರೈವ್‌ ಇರುವುದು ಸಾಮಾನ್ಯ. ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಿಕೊಂಡ ಪೆನ್‌ಡ್ರೈವ್‌ ಅನ್ನು ಬಳಸಿಯಾದ ಮೇಲೆ ಯುಎಸ್‌ಬಿ ಪೋರ್ಟ್‌ನಿಂದ ಪೆನ್‌ಡ್ರೈವ್‌ ತೆಗೆಯುವ ವೇಳೆ ಹಲವರು ಸಣ್ಣ ಗೊಂದಲಕ್ಕೆ ಒಳಗಾಗುತ್ತಾರೆ.

ಯುಎಸ್‌ಬಿ ಪೋರ್ಟ್‌ನಿಂದ ನೇರವಾಗಿ ಪೆನ್‌ಡ್ರೈವ್‌ ತೆಗೆಯುವುದೇ ಅಥವಾ Safely Remove Hardware ನೋಟಿಫಿಕೇಷನ್‌ ಐಕಾನ್‌ ಮೇಲೆ ಕ್ಲಿಕ್ಕಿಸಿ ಬಳಿಕ ಪೆನ್‌ಡ್ರೈವ್‌ ತೆಗೆಯುವುದೇ ಎಂಬ ಗೊಂದಲ ಇದು.

ಹಲವರು ಪೆನ್‌ಡ್ರೈವ್‌ ಅನ್ನು ಯುಎಸ್‌ಬಿ ಪೋರ್ಟ್‌ ನಿಂದ ನೇರವಾಗಿ ತೆಗೆದ ಬಳಿಕ ಪೆನ್‌ಡ್ರೈವ್‌ನಲ್ಲಿರುವ ಕಡತಗಳು ಹಾಳಾಗುತ್ತವೆ ಎಂಬ ಕಾರಣಕ್ಕೆ ಪ್ರತಿ ಬಾರಿ ಪೆನ್‌ ಡ್ರೈವ್‌ ತೆಗೆಯುವಾಗಲೂ Safely Remove Hardware ನೋಟಿಫಿಕೇಷನ್‌ ಐಕಾನ್‌ ಮೇಲೆ ಕ್ಲಿಕ್ಕಿಸಿ ಪೆನ್‌ಡ್ರೈವ್‌ ತೆಗೆಯುತ್ತಾರೆ.

ಇದು ಒಳ್ಳೆಯ ಅಭ್ಯಾಸವೇ. ಆದರೆ, ಪೆನ್‌ಡ್ರೈವ್‌ ಅನ್ನು ಯುಎಸ್‌ಬಿ ಪೋರ್ಟ್‌ನಿಂದ ತೆಗೆಯುವಾಗಲ್ಲೆಲ್ಲಾ Safely Remove Hardware ನೋಟಿಫಿಕೇಷನ್‌ ಐಕಾನ್‌ ಮೇಲೆ ಕ್ಲಿಕ್ಕಿಸುವ ಅಗತ್ಯವಿಲ್ಲ. ನೀವು ನಿಮ್ಮ ಪಿಸಿಯಲ್ಲಿ ಕೆಲವು ಸೆಟ್ಟಿಂಗ್ಸ್‌ ಬದಲಾವಣೆ ಮಾಡಿಕೊಂಡರೆ ಯುಎಸ್‌ಬಿ ಪೋರ್ಟ್‌ನಿಂದ ನೇರವಾಗಿ ಪೆನ್‌ ಡ್ರೈವ್‌ ತೆಗೆಯಬಹುದು.

ನಿಮ್ಮ ಪಿಸಿಯ ಯುಎಸ್‌ಬಿ ಪೋರ್ಟ್‌ಗೆ ಪೆನ್‌ಡ್ರೈವ್‌ ಹಾಕಿ ಅದು ಡಿವೈಸ್‌ ರೆಕಗ್ನೈಸ್‌ ಆದ ಬಳಿಕ ಕಂಟ್ರೋಲ್‌ ಪಾನಲ್‌ಗೆ ಹೋಗಿ. ಕಂಟ್ರೋಲ್ ಪ್ಯಾನಲ್‌ನಲ್ಲಿ ಕಾಣುವ Device Manager ಮೇಲೆ ಕ್ಲಿಕ್‌ ಮಾಡಿ. ಇಲ್ಲಿ ಕಾಣುವ Disk Drivesನ ಎಡಭಾಗದಲ್ಲಿರುವ ಆಯ್ಕೆಯ ಮೂಲಕ ಈ ಆಯ್ಕೆಯನ್ನು ಎಕ್ಸ್‌ ಪ್ಯಾಂಡ್‌ ಮಾಡಿ.

ಈಗ Disk Drivesನ ಕೆಳಗೆ ಕಾಣುವ ನಿಮ್ಮ ಪೆನ್‌ಡ್ರೈವ್‌ (ಯುಎಸ್‌ಬಿ ಡ್ರೈವ್‌) ಹೆಸರಿನ ಮೇಲೆ ರೈಟ್‌ ಕ್ಲಿಕ್‌ ಮಾಡಿ ಬಳಿಕ Properties ಕ್ಲಿಕ್‌ ಮಾಡಿ. ಈಗ ತೆರೆದುಕೊಳ್ಳುವ ವಿಂಡೋದಲ್ಲಿ Policies ಮೇಲೆ ಕ್ಲಿಕ್ಕಿಸಿ.

Policies ಆಯ್ಕೆಯ ಕೆಳಗೆ ಕಾಣುವ Removal policy ಕೆಳಗಿನ Quick removal ಆಯ್ಕೆಯನ್ನು ಗಮನಿಸಿ. ಸಿಸ್ಟಮ್‌ ಅಪ್‌ಡೇಟ್‌ ಆಗಿರುವ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಈ ಆಯ್ಕೆ default ಆಗಿರುತ್ತದೆ. ನಿಮ್ಮ ಪಿಸಿಯಲ್ಲಿ ಒಂದು ವೇಳೆ ಈ ಆಯ್ಕೆ default ಆಗಿಲ್ಲದಿದ್ದರೆ ಈ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. OK ಒತ್ತಿ. ಈಗ ನಿಮ್ಮ ಸಿಸ್ಟಮ್‌ ರಿಸ್ಟಾರ್ಟ್‌ ಆಗಲು ಅನುಮತಿ ಕೇಳುತ್ತದೆ. ಇಲ್ಲಿ Yes ಕ್ಲಿಕ್‌ ಮಾಡಿ.

Comments
ಈ ವಿಭಾಗದಿಂದ ಇನ್ನಷ್ಟು
ಮದರ್‌ಬೋರ್ಡ್‌ನಲ್ಲಿದೆ ಚಿನ್ನ

ಡೆಲ್‌ ಕಂಪನಿ
ಮದರ್‌ಬೋರ್ಡ್‌ನಲ್ಲಿದೆ ಚಿನ್ನ

18 Jan, 2018
ರೀಸ್ಟಾರ್ಟ್‌ ಪರಿಹಾರ

ತಂತ್ರೋಪನಿಷತ್ತು
ರೀಸ್ಟಾರ್ಟ್‌ ಪರಿಹಾರ

18 Jan, 2018
ಸ್ವಯಂ ಚಾಲಿತ ವಾಹನಕ್ಕೆ ಮೆದುಳು

ಪ್ರೊಸೆಸರ್ ಬಳಕೆ
ಸ್ವಯಂ ಚಾಲಿತ ವಾಹನಕ್ಕೆ ಮೆದುಳು

18 Jan, 2018
ಬದುಕು ಬದಲಿಸುವ ತಂತ್ರಜ್ಞಾನ

ಹೊಸತುಗಳ ಸಡಗರ
ಬದುಕು ಬದಲಿಸುವ ತಂತ್ರಜ್ಞಾನ

18 Jan, 2018
ಬರಲಿವೆ ಹೊಸ ತಂತ್ರಜ್ಞಾನಗಳು

ಮಾಹಿತಿ
ಬರಲಿವೆ ಹೊಸ ತಂತ್ರಜ್ಞಾನಗಳು

10 Jan, 2018