ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಯರಿಗೆ ಸಮಾನ ಸ್ಥಾನಮಾನ ಅಗತ್ಯ

Last Updated 14 ಸೆಪ್ಟೆಂಬರ್ 2017, 5:29 IST
ಅಕ್ಷರ ಗಾತ್ರ

ಗದಗ: ‘12ನೇ ಶತಮಾನದಲ್ಲಿ ಸ್ತ್ರೀಯ ರಿಗೆ ಸಮಾನ ಸ್ಥಾನಮಾನ ನೀಡಲಾಗಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಸುಮಾರು 60 ವಚನಗಾರ್ತಿಯರ 1,155 ವಚನಗಳು ಲಭ್ಯವಾಗಿವೆ’ ಎಂದು ಬಸವೇಶ್ವರ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಬಿ.ಎಂ.ಪ್ರಭಾ ಕುಮಾರಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಂದ ನಡೆದ ವಾರದ ಸಾಹಿತ್ಯ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ‘12ನೇ ಶತಮಾನದ ವಚನಗಾರ್ತಿಯರ’ ಕುರಿತು ಅವರು ಉಪನ್ಯಾಸ ನೀಡಿದರು.

‘ಶರಣರ ಜೀವನಾನುಭವ ವಚನ ಗಳಾಗಿ ಹೊರಹೊಮ್ಮಿವೆ. ಅಕ್ಕಮಹಾ ದೇವಿಯ ಬದುಕು ನಮಗೆಲ್ಲ ಆದರ್ಶ ಪ್ರಾಯ. ಶರಣರು ಪ್ರತಿಪಾದಿಸಿದ ವಿಚಾರ ಗಳ ಮೂಲಕ ಸಾಮಾಜಿಕ ಬದಲಾವಣೆ ಹಾಗೂ ಸಮಾನತೆ ತರಲು ಸಾಧ್ಯವಾಗು ತ್ತದೆ’ ಎಂದರು.

‘ದುಗ್ಗಳೆ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಮುಕ್ತಾಯಕ್ಕ, ಗಂಗಾಂಬಿಕೆ, ಅಮ್ಮುಗೆ ರಾಯಮ್ಮ, ರೇಮಮ್ಮ, ಅಕ್ಕಮ್ಮ, ಅಕ್ಕ ನಾಗಮ್ಮ, ಗೊಗ್ಗವ್ವೆ ಸೇರಿ ಅನೇಕ ವಚನ ಗಾರ್ತಿಯರು ಬದುಕಿನ ಸಾರ್ಥಕತೆಯ ವಿಚಾರಗಳನ್ನು ಸುಲಭವಾಗಿ, ಸುಲಲಿತ ವಾಗಿ ಜನಮಾನಸಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹೇಳಿದರು.

‘ಕಲ್ಯಾಣದ ವಚನಕ್ರಾಂತಿಗೂ ಮುನ್ನ ಮಹಿಳೆಯ ಸ್ಥಿತಿಗತಿಗಳು ಶೋಚನೀಯ ವಾಗಿದ್ದವು. ಅನೇಕ ಕಟ್ಟುಪಾಡುಗಳ ಹೇರಿಕೆಯಿಂದ ಮಹಿಳೆ ಜರ್ಜರಿತರಾ ಗಿದ್ದಳು. ಅಲ್ಲದೇ ಸ್ವಾತಂತ್ರವನ್ನು ಕಳೆದು ಕೊಂಡಿದ್ದಳು. ಆದರೆ, ಬಸವಣ್ಣನವರು ಮಹಿಳೆಯರಿಗೆ ಸಮಾನತೆ ಒದಗಿಸಿಕೊ ಟ್ಟರು. ಅನುಭವ ಮಂಟಪದ ಚರ್ಚೆ ಯಲ್ಲಿ ಪಾಲ್ಗೊಂಡು ಪುರುಷರೊಂದಿಗೆ ಸಂವಾದ ನಡೆಸಿರುವುದನ್ನು ಕಾಣಬ ಹುದು’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಗೇರಿ ಹೇಳಿದರು.

ಮರುಳಸಿದ್ದಪ್ಪ ದೊಡ್ಡಮನಿ ಕವನ ವಾಚನ ಮಾಡಿದರು. ವೀರಣ್ಣ ಅಂಗಡಿ ವಚನಗಾಯನ ಪ್ರಸ್ತುತಪಡಿಸಿದರು. ಕೋಶಾಧ್ಯಕ್ಷ ಎಚ್.ಬಿ.ರಡ್ಡೇರ, ಪ್ರಕಾಶ ಮಂಗಳೂರ, ಜಯಶ್ರೀ ಶ್ರೀಗಿರಿ, ಎಂ.ಕೆ. ಲಮಾಣಿ, ಕೆ.ವಿ.ಕುಂದಗೋಳ, ರತ್ನಕ್ಕ ಪಾಟೀಲ, ವೆಂಕಟೇಶ ಕುಲಕರ್ಣಿ, ಎಸ್.ಎಲ್.ಮುಳಗುಂದ, ಸಿ.ಕೆ.ಕೇಸರಿ, ಜೆ.ವಿ.ಪಾಟೀಲ, ಡಿ.ಟಿ.ಮೇರವಾಡೆ, ಕೆ.ಎಸ್.ಬೆನಕನವಾರಿ, ಎಸ್.ಸಿ.ಚವಡಿ, ವನಮಾಲಾ ಮಾನಶೆಟ್ಟಿ, ಮಂಜುಳಾ ಅಕ್ಕಿ, ಶಂಕ್ರಣ್ಣ ಅಂಗಡಿ, ಎಸ್.ಬಿ. ಮೆಣ ಸಗಿ, ಆರ್.ಡಿ.ಕಪ್ಪಲಿ, ಕಿಶೋರಬಾಬು ನಾಗರಕಟ್ಟಿ, ಪ್ರಸನ್ನಕುಮಾರಿ, ಶರಣಪ್ಪ ಹೊಸಂಗಡಿ, ಬಿ.ಬಿ.ಕುಲಕರ್ಣಿ, ವೈ.ಎಚ್. ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT