ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಗಳ ನೇಮಕಕ್ಕೆ ಎಬಿವಿಪಿ ಆಗ್ರಹ

Last Updated 14 ಸೆಪ್ಟೆಂಬರ್ 2017, 5:52 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿನ ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡದಿರುವುದನ್ನು ಖಂಡಿಸಿ, ಎಬಿವಿಪಿ ನೇತೃತ್ವದಲ್ಲಿ ರಾಜ್ಯದ ಎಲ್ಲೆಡೆ ಬುಧವಾರ ನಡೆಸಿದ ಹೋರಾಟಕ್ಕೆ ಬೆಂಬಲವಾಗಿ ವಿಜಯಪುರ ನಗರದಲ್ಲೂ ಎಬಿವಿಪಿ ಕಾರ್ಯಕರ್ತರು ಪ್ರತಿಭಟನಾ ಜಾಥಾ ನಡೆಸಿದರು.

‘ರಾಜ್ಯದಲ್ಲಿ ಸರ್ಕಾರಿ, ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿ ದಂತೆ ಒಟ್ಟಾರೆ 54 ವಿಶ್ವವಿದ್ಯಾಲಯ ಗಳಿದ್ದು, ಈ ಪೈಕಿ ಬೆಂಗಳೂರು, ಮೈಸೂರು, ರಾಜೀವ್‌ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ತುಮಕೂರು ವಿಶ್ವ ವಿದ್ಯಾಲಯ, ಜನಪದ ವಿಶ್ವ ವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕಾತಿ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ಖಂಡನೀಯ’ ಎಂದು ಪ್ರತಿಭಟನಾ ನಿರತರು ದೂರಿದರು.

‘ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸುವ ಜತೆಗೆ, ಚಿಂತಕರು, ಅಧ್ಯಾಪಕರು, ಸಂಶೋಧಕ ರನ್ನು ಸೃಷ್ಟಿಸುವ ವಿಶ್ವವಿದ್ಯಾಲಯಗಳ ಪರಿಸ್ಥಿತಿಯೇ ಈ ರೀತಿಯಾಗಿರುವುದು ಕಳವಳಕಾರಿಯಾಗಿದೆ. ಇದರ ಜತೆಗೆ ರಾಜ್ಯದ ಒಟ್ಟಾರೆ ವಿಶ್ವವಿದ್ಯಾಲಯದಲ್ಲಿ ಶೇ 50ರಷ್ಟು ಕಾಯಂ ಉಪನ್ಯಾಸಕರ ಕೊರತೆಯಿದೆ.

ಕೆಲ ವಿ.ವಿ.ಗಳಲ್ಲಿ ಮೂಲ ಸೌಕರ್ಯ ಗಳ ಕೊರತೆಯಿಂದಾಗಿ ಉನ್ನತ ಶಿಕ್ಷಣದ ಗುಣಮಟ್ಟ ಕ್ಷೀಣಿಸುವ ವಾತಾವರಣದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಅನೇಕ ಖಾಸಗಿ ವಿಶ್ವವಿದ್ಯಾಲಯಗಳು ಆಧುನಿಕ ತಂತ್ರಜ್ಞಾನದೊಂದಿಗೆ ತಲೆ ಎತ್ತುತ್ತಿರುವ ಸಂದರ್ಭದಲ್ಲಿ ಸರ್ಕಾರಿ ವಿ.ವಿ.ಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ’ ಎಂದರು.

ಶಿಕ್ಷಣ ಮತ್ತು ಜ್ಞಾನ ಕೇಂದ ್ರಗಳಾಬೇಕಿರುವ ವಿಶ್ವವಿದ್ಯಾಲಯಗಳು ಇಂದು ಜಾತಿ, ರಾಜಕೀಯ ತಿಕ್ಕಾಟ, ಭ್ರಷ್ಟಾಚಾರದ ಕೇಂದ್ರಗಳಾಗಿ ಮಾರ್ಪ ಟ್ಟಿವೆ. ಇದನ್ನು ಮೊದಲು ತಡೆಯಬೇಕು. ಖಾಲಿಯಿರುವ ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕ ಮಾಡಬೇಕು. ಮೂಲ ಸೌಕರ್ಯ ವಂಚಿತ ವಿ.ವಿ.ಗಳ ಸಮಸ್ಯೆ ಬಗೆಹರಿಸಬೇಕು. ಖಾಲಿಯಿರುವ ಕಾಯಂ ಉಪನ್ಯಾಸಕರ ಹುದ್ದೆ ಭರ್ತಿ ಮಾಡಬೇಕು’ ಎಂದು ಪ್ರತಿಭಟ ನಾನಿರತರು ಒತ್ತಾಯಿಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವರಾಜ ಪಾಟೀಲ, ನಗರ ಕಾರ್ಯದರ್ಶಿ ಚೇತನ ಮಠ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

ಬಸವನಬಾಗೇವಾಡಿ: ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡದಿರುವ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಬುಧವಾರ ತಹಶೀಲ್ದಾರ ಎಂ.ಎನ್‌. ಚೋರಗಸ್ತಿ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆ ಮುಖಂಡ ರಾದ ರವಿ ಹಿಟ್ನಳ್ಳಿ, ಯಲ್ಲಪ್ಪ ರತ್ತಾಳ, ಸುರೇಶ ಜಂಗೋಣಿ, ರವಿ ನಾಲತವಾಡ, ಅಸ್ಲಾಂ ಜೈನಾಪೂರ, ರಫೀಕ ಮಾಮಳ್ಳಿ, ದಾವಲಸಾಬ ಪಟೇಲ ಇತರರು ಇದ್ದರು.

ಚಡಚಣ: ಪಟ್ಟಣದಲ್ಲಿ ಎಬಿವಿಪಿ ಕಾರ್ಯಕರ್ತರು ವಿಶೇಷ ತಹಶಿಲ್ದಾರ್ ಸಂಗಮೇಶ ಮೆಳ್ಳಿಗೇರಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. ಸಂಘಟನೆಯ ಮುಖಂಡ ಅಮರನಾಥ ಪಾಂಡ್ರೆ,  ಸಂಘಟನೆಯ ನಗರ ಕಾರ್ಯದರ್ಶಿ ಚೇತನ ನಿರಾಳೆ  ಕಾರ್ಯಕರ್ತರಾದ ಅನಿಲ ಸಾಳುಂಕೆ, ಅನಿಲ ಹಿರೇಮಠ, ದುಂಡೇಶ ಬಡಿಗೇರ, ಅನಿಲ ಉಗಾಡೆ, ಮಧುಸೂದನ ಉಪಾಸೆ, ಗಿರೀಶ ಅವಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT