ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂತಿಗೆ ಹಣದಲ್ಲಿ ಸ್ಥಳೀಯರಿಂದಲೇ ಕಾಮಗಾರಿ!

Last Updated 14 ಸೆಪ್ಟೆಂಬರ್ 2017, 6:49 IST
ಅಕ್ಷರ ಗಾತ್ರ

ಹೂವಿನಹಡಗಲಿ : ಜನವಸತಿ ಪ್ರದೇಶ ದಲ್ಲಿ ಸಂಗ್ರಹವಾಗಿರುವ ಚರಂಡಿ ತ್ಯಾಜ್ಯ ವನ್ನು ಬೇರೆಡೆ ಸಾಗಿಸುವಂತೆ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಶಾಸಕರು, ತಹಶೀಲ್ದಾರ ರನ್ನು ಸ್ಥಳಕ್ಕೆ ಆಹ್ವಾನಿಸಿ ಸಮಸ್ಯೆ ಹೇಳಿ ಕೊಂಡರೂ ಪ್ರಯೋಜನ ಆಗಿರಲಿಲ್ಲ. ಹೀಗಾಗಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತ ತಾಲ್ಲೂಕಿನ ಸೋಗಿ ಗ್ರಾಮದ ನಿವಾಸಿ ಗಳು ವಂತಿಗೆ ಸಂಗ್ರಹಿಸಿ ಸಮಸ್ಯೆಯನ್ನು ತಾವೇ ಪರಿಹರಿಸಿಕೊಂಡಿದ್ದಾರೆ.

ಗ್ರಾಮದ ಜುಮ್ಮಾ ಮಸೀದಿ ಬಳಿ ಚರಂಡಿ ಕಾಮಗಾರಿ ಅಪೂರ್ಣ ಗೊಂಡಿತ್ತು. ತ್ಯಾಜ್ಯದ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೇ ಜನವಸತಿ ಯಲ್ಲೇ ಸಂಗ್ರಹವಾಗಿ, ಸುತ್ತಲಿನ ಪರಿಸರ ಕಲುಷಿತಗೊಂಡಿತ್ತು. ಮಲೀನ ನೀರಿನ ದುರ್ವಾಸನೆ ಜತೆಗೆ ಸೊಳ್ಳೆ, ಕ್ರಿಮಿಕೀಟ ಗಳ ಕಾಟವೂ ಹೆಚ್ಚಾಗಿತ್ತು. ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನರು ಬದುಕುತ್ತಿ ದ್ದರು. ಈ ಕುರಿತು ‘ಸೋಗಿ ಗ್ರಾಮಸ್ಥರ ನರಕ ಸದೃಶ ಬದುಕು’ ಎಂಬ ಶೀರ್ಷಿಕೆ ಅಡಿ ಈಚೆಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಅಪೂರ್ಣಗೊಂಡಿರುವ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿ ಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿರಲಿಲ್ಲ. ಹಾಗಾಗಿ ವಂತಿಗೆ ಸಂಗ್ರಹಿಸಿ ಸಮಸ್ಯೆ ಯನ್ನು ತಾತ್ಕಾಲಿಕವಾಗಿ ಪರಿಹರಿಸಿ ಕೊಳ್ಳಲು ಮುಂದಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಸಾಮಾಜಿಕ ಕಾರ್ಯಕರ್ತ ಡಿ.ಚಂದ್ರಶೇಖರನಾಯ್ಕ, ಅಲ್ಲಿನ ನಿವಾಸಿಗಳ ಜತೆ ಚರ್ಚಿಸಿ, ಗ್ರಾಮ ಪಂಚಾಯ್ತಿ ಗಮನ ಸೆಳೆದಿದ್ದರು. ಪಿಡಿಒ ನಾಲ್ಕು ದಿನ ಕಾಲಾವಕಾಶ ಕೇಳಿದ್ದರು, ಆದರೆ 10 ದಿನ ಕಳೆದರೂ ಚರಂಡಿ ಸಮಸ್ಯೆ ಬಗೆಹರಿಯದ ಕಾರಣ ಈ ಕಾರ್ಯಕ್ಕೆ ಗ್ರಾಮಸ್ಥರು ಮುಂದಾದರು. ನಿವಾಸಿಗಳೆಲ್ಲರೂ ಸೇರಿ ಸಿ.ಸಿ. ರಸ್ತೆಯ ಪಕ್ಕದಲ್ಲಿ ಜೆಸಿಬಿ ಯಂತ್ರದಿಂದ 10 ಅಡಿ ಆಳದ ಎರಡು ಗುಂಡಿಗಳನ್ನು ತೋಡಿಸಿ ಸಿಮೆಂಟ್‌ ರಿಂಗ್ ಅಳವಡಿಸಿ ದ್ದಾರೆ. ಮೇಲಿನಿಂದ ಹರಿದು ಬರುವ ಚರಂಡಿ ತ್ಯಾಜ್ಯವು ಗುಂಡಿಯೊಳಗೆ ಸೇರುವಂತೆ ಕೇಸಿಂಗ್‌ ಪೈಪ್‌ ಹಾಕ ಲಾಗಿದೆ. ತ್ಯಾಜ್ಯದ ಗುಂಡಿ ತುಂಬಿದರೆ ಅದನ್ನು ಮೋಟಾರ್‌ನಿಂದ ತೆರವುಗೊಳಿ ಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ನಿವಾಸಿಗಳು ಹಾಗೂ ನೆರೆಹೊರೆಯ ವರಾದ  ಸುಧಾಕರ, ಶಫಿಸಾಬ್, ಮುಕ್ತಿ ಯಾರ್, ಗೌರಮ್ಮ, ಜ್ಯೋತೆಪ್ಪ, ವೀರ ಭದ್ರಪ್ಪ, ಜಮಾಲ್, ರಷೀದ್‌ ನೆರವು ನೀಡಿದ್ದಾರೆ. ವಾರ್ಡಿನ ಸದಸ್ಯ ದಯಾಕರ ರೆಡ್ಡಿ ಜೆಸಿಬಿ ಯಂತ್ರವನ್ನು ಉಚಿತವಾಗಿ ನೀಡಿದ್ದು ಬಿಟ್ಟರೆ ಸಂಬಂಧಿಸಿದವರು ಸಹಾಯಕ್ಕೆ ಬಂದಿಲ್ಲ. ಸಿಮೆಂಟ್‌ ರಿಂಗ್‌ ಕೊರತೆಯಾಗಿದ್ದು, ಗುಂಡಿ ಯನ್ನು ಭದ್ರ ವಾಗಿ ಸಿಮೆಂಟ್‌ ಕಾಂಕ್ರಿಟ್‌ ನಿಂದ ಮುಚ್ಚಲು ಹಣಕಾಸಿನ ಸಮಸ್ಯೆ ಎದ ರಾಗಿದೆ. ಕೂಲಿಯಿಂದ ಜೀವನ ಸಾಗಿ ಸುವ ಇಲ್ಲಿನ ಜನರು ಖರ್ಚುಗಳಿ ಗಾಗಿ ಹೆಚ್ಚುವರಿ ವಂತಿಗೆ ನೀಡಲು ಸಜ್ಜಾಗಿದ್ದಾರೆ. ‘ಶಾಸಕರು, ಅಧಿಕಾರಿಗಳ ಬಳಿ ಸಮಸ್ಯೆ ಹೇಳಿಕೊಂಡರೂ ಯಾರೂ ಸ್ಪಂದಿಸಲಿಲ್ಲ. ಬರೀ ₹40 ಸಾವಿರ ವೆಚ್ಚ ದಲ್ಲಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಿಕೊಳ್ಳಲು ಮುಂದಾಗಿದ್ದೇವೆ. ನಮಗೂ ಒಂದು ಕಾಲ ಬರತೈತಿ. ಅಲ್ಲಿವರೆಗೂ ಸುಮ್ನೇ ಇರ್ತೇವೆ’ ಎಂದು ಖಾಜಿ ಜಬೀವುಲ್ಲಾ ನೋವಿನಿಂದ ಹೇಳಿದರು.

‘ಪ್ರಜಾವಾಣಿ’ ಪ್ರೇರಣೆ
‘ಚರಂಡಿ ತ್ಯಾಜ್ಯದ ಸಮಸ್ಯೆ ಕುರಿತು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಚುನಾಯಿತ ಪ್ರತಿನಿಧಿಗಳು ಸ್ಪಂದಿಸಬಹುದು ಎಂದು ಕೆಲದಿನ ಕಾದೆವು. ಯಾರೂ ಈ ಕಡೆ ಸುಳಿಯಲಿಲ್ಲ, ಕ್ಷೇತ್ರದ ಶಾಸಕರು ಉಡಾಫೆ ಉತ್ತರ ನೀಡಿದ್ದಾರೆ. ಇದೀಗ ನಿವಾಸಿಗಳಿಂದಲೇ ವಂತಿಗೆ ಸಂಗ್ರಹಿಸಿ ಕಾಮಗಾರಿ ಕೈಗೊಂಡಿದ್ದೇವೆ’ ಎಂದು ಸಾಮಾ ಜಿಕ ಕಾರ್ಯಕರ್ತ ಡಿ.ಚಂದ್ರ ಶೇಖರನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT