ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಮಹಾರ‍್ಯಾಲಿಗೆ ಜೇವರ್ಗಿಯಿಂದ 25ಸಾವಿರ ಮಂದಿ

Last Updated 14 ಸೆಪ್ಟೆಂಬರ್ 2017, 7:09 IST
ಅಕ್ಷರ ಗಾತ್ರ

ಜೇವರ್ಗಿ: ‘ಲಿಂಗಾಯತ ಧರ್ಮ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೆ. 24ರಂದು ಭಾನುವಾರ ಬೆಳಿಗ್ಗೆ 11 ಕಲಬುರ್ಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಹಮ್ಮಿಕೊಂಡ ಲಿಂಗಾಯತ ಮಹಾರ‍್ಯಾಲಿಯಲ್ಲಿ ಜೇವರ್ಗಿ ತಾಲ್ಲೂಕಿನಿಂದ 25ಸಾವಿರ ಮಂದಿ ಭಾಗವಹಿಸಲಿದ್ದಾರೆ’ ಎಂದು ಲಿಂಗಾಯತ ಧರ್ಮ ಸಮನ್ವಯ ಸಮಿತಿ ಮುಖಂಡ ಶರಣಬಸವ ಕಲ್ಲಾ ಹೇಳಿದರು.

ಬುಧವಾರ ಪಟ್ಟಣದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದಲ್ಲಿ ಲಿಂಗಾಯತ ಧರ್ಮ ಸಮನ್ವಯ ಸಮಿತಿ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಲಿಂಗಾಯತ ಧರ್ಮ ಜಾತ್ಯತೀತ ಧರ್ಮ. ವಿಶ್ವಗುರು ಬಸವಣ್ಣ ಧರ್ಮಗುರು. ವಚನ ಸಾಹಿತ್ಯ ಧರ್ಮಗ್ರಂಥ. ಬಸವಾದಿ ಶರಣರ ತತ್ವದ ತಳಹದಿಯಲ್ಲಿ ಲಿಂಗಾಯತ ಧರ್ಮ ಸ್ಥಾಪನೆಯಾಗಿದೆ. ಲಿಂಗಾಯತ ಧರ್ಮದವರು ಸ್ವಾಭಿಮಾನದಿಂದ ಬದುಕು ಸಾಗಿಸಲು ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರಕಿಸಿಕೊಳ್ಳವುದು ಅವಶ್ಯಕವಾಗಿದೆ ಎಂದರು.

ಆ ನಿಟ್ಟಿನಲ್ಲಿ ಸಮಾಜದವರು ಸಂಘಟಿತ ಹೋರಾಟ ನಡೆಸಬೇಕಾಗಿದೆ. ಮುಂದಿನ ಪೀಳಿಗೆಗೆ ಸಾಂವಿಧಾನಿಕ ಹಕ್ಕುಗಳನ್ನು ಕಲ್ಪಿಸಿಕೊಡಲು ಈ ಹೋರಾಟ ಅನಿವಾರ್ಯವಾಗಿದೆ. ಲಿಂಗಾಯತ ಧರ್ಮದಲ್ಲಿನ ಎಲ್ಲಾ ಒಳಪಂಗಡಗಳ ಜನತೆ ಲಿಂಗಾಯತ ಮಹಾರ‍್ಯಾಲಿಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಈ ಕುರಿತು ತಾಲ್ಲೂಕಿನ ಎಲ್ಲಾ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ವ್ಯಾಪಕ ಪ್ರಚಾರ ನಡೆಸಲಾಗುವುದು ಎಂದು ಅವರು ತಿಳಿಸಿದರು.

ತಾಲ್ಲೂಕಿನ ಅನೇಕ ಜನ ಲಿಂಗಾಯತ ಸಮಾಜದ ಮುಖಂಡರು ಲಿಂಗಾಯತ ಮಹಾರ‍್ಯಾಲಿ ಯಶಸ್ಸಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದ ಮುಖಂಡ ಗುರುಲಿಂಗಪ್ಪಗೌಡ ಮಾಲಿಪಾಟೀಲ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿವನಗೌಡ ಹಂಗರಗಿ, ಬಸವರಾಜ ಪಾಟೀಲ ಗಂವ್ಹಾರ್, ಎಸ್.ಎಸ್.ಸಲಗರ್, ಭೀಮರಾವ್ ಗುಜಗೊಂಡ, ಸಂಗಣ್ಣಗೌಡ ಗೂಗಿಹಾಳ, ಷಣ್ಮುಖಪ್ಪ ಹಿರೇಗೌಡ,
ಸಿದ್ದಣ್ಣಗೌಡ ಯಡ್ರಾಮಿ, ಅಣ್ಣಾರಾವ್ ನಿಷ್ಠಿ ದೇಶಮುಖ, ಬಾಪುಗೌಡ ಬಿರಾಳ, ಈರಣ್ಣ ಭೂತಪೂರ್, ನೀಲಕಂಠ ಅವಂಟಿ, ಬಂಡೆಪ್ಪ ಹಾಗರಗಿ, ಚಂದ್ರಶೇಖರ ಮಲ್ಲಾಬಾದ, ಸಾಹೇಬಗೌಡ ಕಡ್ಲಿ, ಶಿವರಾಜ್ ಘಂಟಿ, ಈರಣ್ಣ ಬುಟ್ನಾಳ, ಸಂಗಣ್ಣಗೌಡ ಆಂದೋಲಾ, ರವೀಂದ್ರ ಕೋಳಕೂರ,ವಿಶ್ವನಾಥರೆಡ್ಡಿ ರಾಜಳ್ಳಿ, ನಾಗಣ್ಣ ಹಾಗರಗುಂಡಗಿ, ಶಾಂತಗೌಡ ನರಿಬೋಳ, ಪ್ರಕಾಶ ಪುಲಾರಿ, ವಿಜಯಕುಮಾರ ನರಿಬೋಳ, ಚಂದ್ರಶೇಖರ ತುಂಬಗಿ, ಗುರುಶಾಂತಪ್ಪ ಚಿಂಚೋಳಿ, ಬಸಣ್ಣಗೌಡ ಹರನೂರ್,ಮಲ್ಲಣ್ಣಗೌಡ ಕಟ್ಟಿಸಂಗಾವಿ, ನಿಂಗಣ್ಣಗೌಡ ನಂದಿಹಳ್ಳಿ, ವಿರೇಶ ಪಾಟೀಲ ಯಡ್ರಾಮಿ, ರಾಜಶೇಖರ ಸಾಹು ವಾರದ, ರಾಮಣ್ಣ ತೊನಸಳ್ಳಿಕರ್, ನಿಂಗಣ್ಣ ಹಳಿಮನಿ ಸೇರಿದಂತೆ ತಾಲ್ಲೂಕಿನ ಲಿಂಗಾಯತ ಸಮಾಜದ ನೂರಾರು ಜನತೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT