ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಮ್ಹಾರಿ ಸುಲು’ನಲ್ಲಿ ವಿದ್ಯಾ ಹೊಸ ಸ್ಟೈಲು

Last Updated 14 ಸೆಪ್ಟೆಂಬರ್ 2017, 12:00 IST
ಅಕ್ಷರ ಗಾತ್ರ

ಬೆಂಗಳೂರು: ಸರಳ ಸುಂದರಿ ವಿದ್ಯಾ ಬಾಲನ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ, ತಮ್ಮ ಹೊಸ ಚಿತ್ರ ‘ತುಮ್ಹಾರಿ ಸುಲು’ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫಸ್ಟ್‌ ಲುಕ್‌ ಹಾಕಿಕೊಂಡು ಸುದ್ದಿಯ ಕೇಂದ್ರವಾಗಿದ್ದರು. ಇದೀಗ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿರುವುದು ಮತ್ತೊಮ್ಮೆ ವಿದ್ಯಾ ಅವರ ಬಗ್ಗೆ ಚಿತ್ರಪ್ರೇಮಿಗಳು ಕಣ್ಣರಳಿಸುವಂತೆ ಮಾಡಿದೆ. ಇದರ ಬೆನ್ನಲ್ಲೇ, ಬುಧವಾರಷ್ಟೇ ಯೂಟ್ಯೂಬ್‌ಗೆ ಬಿಡುಗಡೆಯಾಗಿರುವ ಅಧಿಕೃತ ಟೀಸರ್‌ ಅಭಿಮಾನಿಗಳ ಕಾತರ ಇನ್ನಷ್ಟು ಹೆಚ್ಚುವಂತೆ ಮಾಡಿದೆ.

‘ತುಮ್ಹಾರಿ ಸುಲು’ ಚಿತ್ರದಲ್ಲಿ ವಿದ್ಯಾ ಪಕ್ಕಾ ಭಾರತೀಯ ಗೃಹಿಣಿಯ ಪಾತ್ರ ಮಾಡಿದ್ದಾರೆ. ಸುಲೋಚನಾ ಎಂಬ ಈ ಗೃಹಿಣಿಗೆ ಎದುರಾಗುವ ಯಾವುದೋ ಒಂದು ಸನ್ನಿವೇಶ ಅವರನ್ನು ಆರ್‌ಜೆ ಆಗುವಂತೆ ಮಾಡುತ್ತದೆ. ನಂತರ ಅವರು ‘ಆರ್‌ಜೆ ಸುಲು’ ಆಗಿ ಮನೆ ಮಾತಾಗುತ್ತಾರೆ. ಈ ಹಿಂದೆ, ಸಂಜಯ್‌ ದತ್‌ ಅಭಿನಯದ ‘ಲಗೇ ರಹೋ ಮುನ್ನಾಬಾಯ್‌’ ಚಿತ್ರದಲ್ಲಿ ಆರ್‌ಜೆಯಾಗಿ ನಟಿಸಿದ್ದ ವಿದ್ಯಾ ‘ಗುಡ್‌ಮಾರ್ನಿಂಗ್‌ ಮುಂಬೈ’ ಎಂದು ಹೇಳಿದ್ದರು. ಆದರೆ ಈ ಬಾರಿ ‘ಸುಲು’ ಪಾತ್ರದಲ್ಲಿ ಮಾದಕವಾಗಿ ‘ಹಲೋ’ ಅಂದಿದ್ದಾರೆ ವಿದ್ಯಾ.

ಆರ್‌ಜೆ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ವಿದ್ಯಾ, ಸೀರೆ ಮತ್ತು ಉದ್ದನೆಯ ಜಡೆಯಲ್ಲಿ ಮಿಂಚುತ್ತಿದ್ದಾರೆ. ವಿದ್ಯಾ, ಚರ್ಚೆಯ ಕೇಂದ್ರವಾಗಿರುವುದು ಆರ್‌ಜೆ ಗೆಟಪ್ಪಿಗೂ ಅಲ್ಲ, ಸೀರೆ ಮತ್ತು ಜಡೆಯ ಕಾರಣಕ್ಕೂ ಅಲ್ಲ. ಮೈಕ್‌ನೊಂದಿಗೆ ಆಕಾಶದೆತ್ತರಕ್ಕೆ ಹಾರಿದ ಆರ್‌ಜೆ ಸುಲುವಿನ ಪಕ್ಕದಲ್ಲೇ ಸೀಟಿಯೊಂದಿಗೆ ಕುಕ್ಕರ್‌ ಕೂಡಾ ಹಾರಿದೆ! ಈ ನೋಟವೇ ‘ತುಮ್ಹಾರಿ ಸುಲು’ವಿನ ಕತೆಯ ಸುಳಿವುಗಳು ನೋಡುಗನ ತಲೆಯಲ್ಲಿ ಓಡುತ್ತವೆ. ಈ ಗೆಟಪ್ಪಿಗಾಗಿ ವಿದ್ಯಾ ಅವರನ್ನು ‘ಸೂಪರ್‌ವುಮನ್’ ಎಂದೇ ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ.

ಸುರೇಶ್‌ ತ್ರಿವೇಣಿ ನಿರ್ದೇಶನದ ಈ ಚಿತ್ರದಲ್ಲಿ ಮಾನವ್‌ ಕೌಲ್‌, ನೇಹಾ ಧೂಪಿಯಾ ಮತ್ತು ಆರ್‌ಜೆ ಮಾಲಿಷ್ಕಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಹಿಂದೆ, ಸಂಜಯ್ ದತ್‌ ಅಭಿನಯದ ‘ಲಗೇ ರಹೋ ಮುನ್ನಾಭಾಯ್‌’ನಲ್ಲಿ ವಿದ್ಯಾ ಬಾಲನ್‌ ಆರ್‌ಜೆ ಪಾತ್ರ ಮಾಡಿದ್ದರು. ಸುಲು ಪಾತ್ರಕ್ಕಾಗಿ ವಿದ್ಯಾ ಆರು ತಿಂಗಳಿಂದ ತಯಾರಿ ನಡೆಸಿದ್ದಾರೆ. ಮುಂಬೈ ಮೂಲದ ಕೊರಿಯೊಗ್ರಾಫರ್‌ ಸ್ಟುಡಿಯೊದಲ್ಲಿ ಹಿಪ್‌ಹಾಪ್‌ ನೃತ್ಯ ಕಲಿಯುತ್ತಿರುವ ಸಂಗತಿಯನ್ನು ಸ್ವತಃ ವಿದ್ಯಾ ಈಗಾಗಲೇ ಹಂಚಿಕೊಂಡಿದ್ದರು.

‘ಸುಲು’, ಡಿಸೆಂಬರ್‌ ಒಂದರಂದು ತರೆಕಾಣುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT