ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಗಾಗಿ ಸಿಗರೇಟ್‌ ಬಿಟ್ಟ ಶಾಹಿದ್‌

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರೀತಿಯೇ ಹಾಗೆ. ಅದಕ್ಕೆ ನೋವನ್ನು ಮರೆಸುವ ಶಕ್ತಿಯಿದೆ. ಆದರೆ ಕೆಲವೊಮ್ಮೆ ಈ ಪ್ರೀತಿಯೇ ಮುಳುವಾಗುತ್ತದೆ. ಹೀಗೆ ಹಿಂದೊಮ್ಮೆ ಪ್ರೀತಿಯ ಬಲೆಯಲ್ಲಿ ಬಿದ್ದು ಅದರಿಂದ ನೋವುಂಡ ಶಾಹಿದ್‌ ಸಿಗರೇಟಿನ ದಾಸರಾದರು. ಚೈನ್‌ ಸ್ಮೋಕರ್‌ ಎನ್ನುವಷ್ಟರ ಮಟ್ಟಿಗೆ ಸಿಗರೇಟು ಸೇದುತ್ತಿದ್ದರು ಮೂವತ್ತಾರು ಪ್ರಾಯದ ಶಾಹಿದ್‌.

ಇವರ ಸಿಗರೇಟಿನ ಸಂಗ ಹಲವರಿಗೆ ಇರಿಸು ಮುರಿಸು ಮಾಡಿತ್ತು. ಕೆಲವರು ಸಿಟ್ಟಾದರೆ, ಮತ್ತೆ ಕೆಲವರು ಬುದ್ಧಿವಾದವನ್ನು ಹೇಳಿದರು. ಕರೀನಾ ಕಪೂರ್‌ ದೂರಾದ ಕಾರಣಕ್ಕೆ ಶಾಹಿದ್‌ ಹೀಗಾಗಿದ್ದಾನೆ ಎಂಬ ಸುದ್ದಿ ಬಾಲಿವುಡ್‌ ಗಲ್ಲಿಯಲ್ಲಿ ಹರಿದಾಡಿತು. ಅಂತೆ, ಕಂತೆಗಳು ಶಾಹಿದ್ ಅನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತು. ಚಿತ್ರೀಕರಣ ಸ್ಥಳ, ಮನೆ, ಪಾರ್ಟಿ ... ಹೀಗೆ ಎಲ್ಲೆಂದರಲ್ಲಿ ಶಾಹಿದ್‌ ಸೇದುವ ಸಿಗರೇಟುಗಳ ಸಂಖ್ಯೆ ಏರುತ್ತಲೇ ಹೋಯಿತು.

ಈ ಹುಡುಗ ಸರಿ ಹೋಗುವುದಿಲ್ಲ ಎಂದು ಹತ್ತಿರದವರೆಲ್ಲ ಕೈಚೆಲ್ಲಿದರು. ಹೀಗಿದ್ದ ಶಾಹಿದ್‌ ಈಗ ಅಚ್ಚರಿ ಎನ್ನುವಷ್ಟು ಬದಲಾಗಿದ್ದಾರೆ. ಇದಕ್ಕೆ ಕಾರಣ ಪ್ರೀತಿಯ ಮಡದಿ ಮೀರಾ. ಮನದನ್ನೆಯ ಪ್ರೀತಿಯ ಬೇಡಿಕೆಗೆ ಇಲ್ಲವೆನ್ನಲಾಗದೆ ಸೀಗರೇಟು ಸೇದುವುದನ್ನು ಬಿಟ್ಟಿದ್ದಾರೆ.

ಪತ್ನಿಯ ಅಣತಿಯಂತೆ ಇವರು ಸ್ವಭಾವದಲ್ಲಿಯೂ ಸಾಕಷ್ಟು ಬದಲಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿ, ಮಗುವಿನ ಚಿತ್ರ ಹಾಕುತ್ತಲೇ ಇರುವ ಶಾಹಿದ್‌, ತಾನ್ನೊಬ್ಬ ಒಳ್ಳೆಯ ಪತಿ ಎಂಬುದನ್ನು ಸಾಬೀತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT