ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಭದಲ್ಲಿ ತರಕಾರಿ ಬೆಳೆಯಿರಿ

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮನೆಯಲ್ಲಿಯೇ ಸುಲಭವಾಗಿ ತರಕಾರಿ ಬೆಳೆಯಬಹುದು. ಇದಕ್ಕೆ ಬೇಕಿರುವುದು ಒಂದಿಷ್ಟು ಸಮಯ. ಫಲ ಕಂಡಾಗ ನೀವೇ ಬೆಳೆದ ತರಕಾರಿ ಎಂಬ ಹೆಮ್ಮೆಯೂ ಇರುತ್ತದೆ. ದುಬಾರಿ ಬೆಲೆ ಕೊಟ್ಟು ತರಕಾರಿ ತರುವುದರ ಜೊತೆಗೆ ತರಕಾರಿ ತಾಜವಿಲ್ಲ ಎಂಬ ಕೊರಗು ಇರುವುದಿಲ್ಲ.

ಬೆಂಡೆಕಾಯಿ: ಶೇ 20 ತೆಂಗಿನನಾರು, ಶೇ 10 ಕಾಂಪೊಸ್ಟ್‌, ಶೇ 10 ಕೆಂಪು ಮರಳು, ಶೇ 60 ಮರಳು ಮಣ್ಣನ್ನು ಮಿಶ್ರಣ ಮಾಡಿಕೊಳ್ಳಿ. ಉದ್ದದ ಪಾಟ್‌ನಲ್ಲಿ ಸರಿ ಅರ್ಧಕ್ಕೆ ಸ್ವಲ್ಪ ಗುಂಡಿ ಮಾಡಿ, ಅದರೊಳಗೆ ಬೆಂಡೆಕಾಯಿಯ ಬೀಜ ಇಡಿ, ತೆಳುವಾಗಿ ಮಣ್ಣು ಮುಚ್ಚಿ. ಮೇಲೆ ನೀರು ಚಿಮುಕಿಸಿ. ಮೂರು ದಿನಗಳ ನಂತರ ಬೀಜ ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ. ದಿನಕ್ಕೆರಡು ಸಲ ನೀರು ಹಾಕಲು ಮರೆಯದಿರಿ. ಇದರ ಜೊತೆಗೆ ಚಹಾದ ಗರಟ, ಮೊಸರು, ತರಕಾರಿ ಸಿಪ್ಪೆಗಳನ್ನು ಹಾಕುತ್ತಿದ್ದರೆ ಫಲವತ್ತಾದ ಬೆಂಡೆಕಾಯಿ ಬೆಳೆಯುತ್ತದೆ.

ಟೊಮೆಟೊ: ಕುಂಡದಲ್ಲಿ ಮುಕ್ಕಾಲು ಭಾಗ ಮಣ್ಣು ಹಾಕಿ. ಟೊಮೆಟೊ ಬೀಜದ ಇಟ್ಟು, ತೆಳುವಾಗಿ ಮಣ್ಣು ಮುಚ್ಚಿ. ನೀರು ಚಿಮುಕಿಸಿ, ಹದಿನೈದು ದಿನಗಳ ನಂತರ ಸಸಿ ಬೆಳೆಯಲು ಪ್ರಾರಂಭವಾಗುತ್ತದೆ.

ಹಸಿರು ಮೆಣಸಿನಕಾಯಿ: ಶೇ 20 ಕಾಂಪೊಸ್ಟ್‌, ಶೇ 60 ಮಣ್ಣು , ಶೇ 20 ಮರಳು ಮೂರನ್ನು ಮಿಶ್ರಣ ಮಾಡಿ. ಹಣ್ಣಾದ ಮೆಣಸಿನಕಾಯಿಯನ್ನು ಸಮ ಅರ್ಧ ಭಾಗ ಕತ್ತರಿಸಿ, ಮಣ್ಣಿನ ಮೇಲೆ ‌ಇರಿಸಿ. ಅದರ ಮೇಲೆ ತೆಳುವಾಗಿ ಮಣ್ಣು ಮುಚ್ಚಿ. ಎಂಟು ದಿನಗಳ ನಂತರ ಗಿಡ ಬೆಳೆಯಲು ಪ್ರಾರಂಭವಾಗುತ್ತದೆ.

ಮೂಲಂಗಿ: ಕುಂಡದಲ್ಲಿ ಮಣ್ಣು ತುಂಬಿ, ಅದರ ಮೇಲೆ ಮೂಲಂಗಿ ಬೀಜ ಹಾಕಿ. ಅದರ ಮೇಲೆ ತೆಳುವಾಗಿ ಮಣ್ಣು ಹಾಕಿ. ನೀರು ಚಿಮುಕಿಸಿ. ಮೂಲಂಗಿ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಮಣ್ಣಿನಲ್ಲಿ ತೇವಾಂಶವಿರಬೇಕು. ಹಾಗಂತ ಹೆಚ್ಚು ನೀರು ಹಾಕಬಾರದು. ಬಿಸಿಲು ಬೀಳುವ ಸ್ಥಳದಲ್ಲಿ ಕುಂಡ ಇರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT