ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಡತಕ್ಕಷ್ಟೇ ಠರಾವು ಸೀಮಿತ’

Last Updated 15 ಸೆಪ್ಟೆಂಬರ್ 2017, 6:09 IST
ಅಕ್ಷರ ಗಾತ್ರ

ವಿಜಯಪುರ: ‘ ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಸಾಮಾನ್ಯ ಸಭೆ ನಿಗದಿತ ಅವಧಿಗೆ ಒಮ್ಮೆಯೂ ನಡೆದಿಲ್ಲ. ಈ ಸಭೆಗಳಲ್ಲಿ ತೆಗೆದುಕೊಂಡ ಸರ್ವಾನು ಮತದ ‘ಠರಾವು’ಗಳಿಗೆ ಕಿಮ್ಮತ್ತಿಲ್ಲ....’

‘ಸಾರ್ವಜನಿಕ ಹಿತಾಸಕ್ತಿಯ ವಿಷಯ ವಿರಬಹುದು. ಅಭಿವೃದ್ಧಿ, ಆಡಳಿತಾತ್ಮಕ ಸೇರಿದಂತೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ವಾನುಮತದಿಂದ ತೆಗೆದುಕೊಂಡ ಠರಾವುಗಳು ಒಮ್ಮೆ ಯೂ ಅನುಷ್ಠಾನಗೊಂಡಿಲ್ಲ. ಸದಸ್ಯರು ಒಮ್ಮತದಿಂದ ತೆಗೆದು ಕೊಂಡ ನಿರ್ಣಯಗಳಿಗೆ ಸಭೆಯಲ್ಲಿ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿ ಸಿರುವುದಿಲ್ಲ. ಸಭೆಯ ಪ್ರೊಸಿಡಿಂಗ್ಸ್‌ ಗಳಲ್ಲೂ ಇದು ನಮೂದಾಗಿರುತ್ತದೆ. ಆದರೆ ಕಡತದಿಂದ ಜಾರಿಯಾಗುವುದೇ ಇಲ್ಲ...’

ಮಹಾನಗರ ಪಾಲಿಕೆಯ ಬಹುತೇಕ ಸದಸ್ಯರ ದೂರಿದು. ‘ಸಾಮಾನ್ಯ ಸಭೆಯಲ್ಲಿನ ಠರಾವಿಗೆ ಕಿಮ್ಮತ್ತಿಲ್ಲ ಎಂದರೆ ಇನ್ಯಾರ ಬಳಿ ನಾವು ಸಮಸ್ಯೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂಬ ಪ್ರಶ್ನೆ ಪಾಲಿಕೆ ಸದಸ್ಯರದ್ದು.

ಮೂರು ಬಾರಿ ಠರಾವು: ‘ವಾರ್ಡ್‌ ನಂ. 1ರ ವ್ಯಾಪ್ತಿಯಲ್ಲಿನ ಗ್ಯಾಂಗ್‌ ಬಾವಡಿ ಯಲ್ಲಿರುವ ಖಾಸಗಿ ಲೇಔಟ್‌ (ಹೇರಲಗಿ) ವಿಷಯಕ್ಕೆ ಸಂಬಂಧಿಸಿದಂತೆ  ಪಾಲಿಕೆಯ ಸಾಮಾನ್ಯ ಸಭೆ ಯಲ್ಲಿ ಮೂರು ಬಾರಿ ಠರಾವು ಅಂಗೀಕರಿಸ ಲಾಗಿದೆ. ಈ ಲೇಔಟ್‌ ಎಲ್ಲ ನಿಯಮಾವಳಿ ಗಾಳಿಗೆ ತೂರಿದೆ. ಅನುಮತಿ ರದ್ದು ಪಡಿಸಬೇಕು ಎಂಬ ಪ್ರಸ್ತಾಪಕ್ಕೆ ಎಲ್ಲ ಸದಸ್ಯರು ಒಕ್ಕೊರಲ ಅನುಮತಿ ನೀಡಿದ್ದಾರೆ. 2016ರ ಜನವರಿ 8ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತಂತೆ ಮೊದಲ ಠರಾವು ಅಂಗೀಕರಿಸಲಾಗಿತ್ತು’ ಎಂದು ಪಾಲಿಕೆ ಸದಸ್ಯ ಆನಂದ ಧುಮಾಳೆ ಹೇಳಿದರು.

‘ಇದಕ್ಕೆ ಆಡಳಿತ ಸ್ಪಂದಿಸದ ಕಾರಣ ಡಿಸೆಂಬರ್‌ 15ರಂದು ನಡೆದ ಸಭೆಯಲ್ಲಿ ಮತ್ತೊಮ್ಮೆ ಇದೇ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸ ಲಾಯಿತು. ಇದಕ್ಕೆ ಸಂಬಂಧಿಸಿದಂತೆ ಪಾಲಿಕೆ, ವಿಡಿಎ, ಜಿಲ್ಲಾಡಳಿತದ ಹಂತ ದಲ್ಲಿ ಹಲವು ಪತ್ರ ವ್ಯವಹಾರ ನಡೆದರೂ, ಯಾವ ನಿರ್ಧಾರ ತೆಗೆದು ಕೊಳ್ಳಲಾಯಿತು ಎಂಬುದನ್ನು ಇದುವರೆಗೂ ಪಾಲಿಕೆಯ ಸಾಮಾನ್ಯ ಸಭೆಗೆ ಮಾಹಿತಿ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇದರಿಂದ 2017ರ ಮೇ 11ರಂದು ನಡೆದ ಸಭೆಯಲ್ಲಿ ಮೂರನೇ ಬಾರಿಗೆ ಮತ್ತೊಮ್ಮೆ ಠರಾವು ಅಂಗೀಕ ರಿಸಿದೆವು. ಬರೋಬ್ಬರಿ ನಾಲ್ಕು ತಿಂಗಳು ಕಳೆದರೂ ಯಾವೊಂದು ಕ್ರಮ ಜರುಗಿಸಿಲ್ಲ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿ ಯಿಂದ, ಪಾಲಿಕೆಗೆ ಆಗುವ ಆರ್ಥಿಕ ನಷ್ಟ ತಪ್ಪಿಸಲು ಸ್ಥಳೀಯರ ವಿರೋಧದ ನಡುವೆಯೂ ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದರೂ, ಪ್ರಯೋಜನ ವಾಗದಾಗಿದೆ. ಈ ವಿಷಯಕ್ಕೆ ಪಾಲಿಕೆ ಆಡಳಿತ ತಾರ್ಕಿಕ ಅಂತ್ಯ ಕಂಡುಕೊಳ್ಳುವುದಿಲ್ಲ ಎಂಬುದು ಇದೀಗ ಮನದಟ್ಟಾಗಿದ್ದು, ಶೀಘ್ರದಲ್ಲೇ ಪರಿಹಾರ ದೊರಕಿಸದಿದ್ದರೆ, ಲೋಕಾ ಯುಕ್ತ, ಎಸಿಬಿಗೆ ದೂರು ಸಲ್ಲಿಸುವ ಜತೆಗೆ, ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗುವುದು’ ಎಂದು ಧುಮಾಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಳಜಿಯೇ ಇಲ್ಲ: ‘ನಾಲ್ಕು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಎರಡು ಪ್ರಮುಖ ವಿಷಯಗಳ ಕುರಿತಂತೆ ಠರಾವು ಅಂಗೀಕರಿಸಲಾಗಿತ್ತು. ಆದರೆ ಈ ಎರಡೂ ನಿರ್ಣಯಗಳು ಅನುಷ್ಠಾನಕ್ಕೆ ಬಂದಿಲ್ಲ’ ಎಂದು ಪಕ್ಷೇತರ ಸದಸ್ಯ ರವೀಂದ್ರ ಲೋಣಿ ದೂರಿದರು.

‘ಡೆಂಗಿ ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಿ. ಸಮರ್ಪಕವಾಗಿ ಕಾರ್ಯ ನಿರ್ವಹಿಸದ, ಕೆಲ ಪ್ರಕರಣಗಳಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ದೂರಿರುವ ಪಾಲಿಕೆಯ ಪರಿಸರ ಎಂಜಿನಿಯರ್‌ ವಿರುದ್ಧ ತನಿಖೆ ನಡೆಸಿ. ಪೌರ ಕಾರ್ಮಿಕ ರಿಗೆ ಮೂಲ ಸೌಕರ್ಯ ಒದಗಿಸಿ. ಪ್ಲಾಸ್ಟಿಕ್‌ ನಿಯಂತ್ರಿಸಿ’ ಎಂಬ ವಿಷಯಗಳ ಕುರಿತಂತೆ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿತ್ತು.

ಆದರೆ ಈ ಪ್ರಮುಖ ನಿರ್ಣಯ ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಪಾಲಿಕೆ ಆಡಳಿತ ವಿಫಲವಾಗಿರುವುದರಿಂದ ನಗರ ವ್ಯಾಪ್ತಿಯಲ್ಲಿ ಡೆಂಗಿ ಹಾವಳಿ ಹೆಚ್ಚಿದೆ. ಪ್ಲಾಸ್ಟಿಕ್‌ ಮಾರಾಟ ಎಗ್ಗಿಲ್ಲದೆ ನಡೆದಿದೆ’ ಎಂದು ಲೋಣಿ ತಿಳಿಸಿದರು.

* * 

ಹೇರಲಗಿ ಲೇಔಟ್‌ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಬಾರಿ ಅಂಗೀಕರಿಸಿದ ಠರಾವು ಇನ್ನೂ ಅನುಷ್ಠಾನಗೊಂಡಿಲ್ಲ. ಈ ಸಂಬಂಧ ಹೈಕೋರ್ಟ್‌ ಮೊರೆ ಹೋಗುವೆ
ಆನಂದ ಧುಮಾಳೆ
ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT