ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಾಗಿ ಇವಿಷ್ಟು

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಾಯಿ ಸಾಕುವುದು ಹಲವರಿಗೆ ಇಷ್ಟ. ಅವುಗಳೊಂದಿಗೆ ವಾಕಿಂಗ್‌ ಹೋಗುವುದು ಅನೇಕರ ರೂಢಿ. ನಾಯಿ ಸಾಕುವುದು ನಿಮಗೂ ಇಷ್ಟವೇ? ಮನೆಗೆ ಮತ್ತೊಂದು ಜೀವ ಬರುವ ಮೊದಲು ನೀವೇನು ಸಿದ್ಧತೆ ಮಾಡಿಕೊಳ್ಳಬೇಕು ಗೊತ್ತೆ?

* ಸರಿಯಾಗಿ ವಿಶ್ರಾಂತಿ ಸಿಗದೇ ಹೋದಲ್ಲಿ ಅವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿಹೋಗುತ್ತವೆ. ಅವು ವಿಶ್ರಾಂತಿ ಪಡೆಯುವಾಗ ತೊಂದರೆ ಕೊಡಬೇಡಿ.

* ಪ್ರತ್ಯೇಕ ಗೂಡೊಂದನ್ನು ಮಾಡಿಕೊಡಿ. ಆಗ ಮಳೆ, ಬಿಸಿಲಿನಿಂದ ಅವು ತಪ್ಪಿಸಿಕೊಳ್ಳಬಹುದು. ಅಲ್ಲದೆ ನಿಶ್ಚಿಂತೆಯಾಗಿ ಗೂಡಲ್ಲಿ ವಿಶ್ರಾಂತಿ ಪಡೆಯುತ್ತವೆ.

* ಸದಾ ಕಟ್ಟಿಹಾಕುವುದು ಸರಿಯಲ್ಲ. ಆರಾಮವಾಗಿ, ಓಡಾಡಿಕೊಂಡಿದ್ದಷ್ಟೂ ಅವು ಖುಷಿಯಾಗಿರುತ್ತವೆ. ನೈಸರ್ಗಿಕ ವಾತಾವರಣವೇ ಅವುಗಳಿಗೆ ಹೆಚ್ಚು ಇಷ್ಟವಾಗುವುದರಿಂದ ಕೈತೋಟವಿದ್ದರೆ ಅಲ್ಲಿ ಆಟವಾಡಲೂ ಬಿಡಿ.

* ನಿಯಮಿತವಾಗಿ ಶುಚಿಗೊಳಿಸುತ್ತಿರಿ. ಇಲ್ಲವಾದರೆ ವಾಸನೆ ಬರುವುದಲ್ಲದೆ, ಎಲ್ಲೆಂದರಲ್ಲಿ ಅವುಗಳ ಕೂದಲು ಉದುರುತ್ತವೆ.

* ಎಣ್ಣೆ ಪದಾರ್ಥಗಳು ಅವುಗಳಿಗೆ ಅಪಾಯಕಾರಿ. ಚಿತ್ರಾನ್ನ, ಪುಳಿಯೋಗರೆ, ಎಣ್ಣೆ ಹಾಕಿದ ಅಥವಾ ಕರಿದ ಯಾವುದೇ ಪದಾರ್ಥಗಳನ್ನು ಅವುಗಳಿಗೆ ನೀಡಬೇಡಿ. ರೆಡಿಮೇಡ್‌ ಫುಡ್‌ಗಳಿಗಿಂತ ಮನೆಯಲ್ಲಿಯೇ ತಯಾರಿಸಿದ ಆಹಾರ ಹೆಚ್ಚು ಸೂಕ್ತ.

* ಆದಷ್ಟು ಬೇಯಿಸಿದ ಪದಾರ್ಥಗಳನ್ನೇ ಕೊಡಿ. ಮೊಟ್ಟೆ ಮಾಂಸಗಳನ್ನೂ ಹಸಿಯಾಗಿ ಕೊಡುವುದು ಉಚಿತವಲ್ಲ.

* ಆರೋಗ್ಯ ಕಾಪಾಡಿಕೊಳ್ಳಲು ಅವುಗಳಿಗೂ ನಿಯಮಿತ ವ್ಯಾಯಾಮ ಅಗತ್ಯ. ಬೇಸರ ಕಳೆದುಕೊಳ್ಳಲು ಇದು ಉತ್ತಮ ವಿಧಾನ. ಬೇಸರ ಕಾಡಿದಷ್ಟೂ ಅವುಗಳ ವರ್ತನೆ ಕೆಟ್ಟದಾಗುತ್ತದೆ.

* ನಾಯಿಗಳಿಗೆ ನಿಯಮಿತವಾಗಿ, ಕಡ್ಡಾಯವಾಗಿ ಚುಚ್ಚುಮದ್ದುಗಳನ್ನು ಹಾಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT