ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿರುತೆರೆ ನಟರಿಗೇ ಹೆಚ್ಚು ಸಂಭಾವನೆ ಸಿಗಬೇಕು’

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಚಿತ್ರಕ್ಕಾಗಿ ಬಣ್ಣ ಹಚ್ಚುವುದು, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ, ಸಿನಿಮಾ ಪ್ರಚಾರಗಳಲ್ಲಿ ತೊಡಗುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಟೀವಿ ಪರದೆ ಮೇಲೆ ಅಕ್ಷಯ್‌ ಕುಮಾರ್‌ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

ಕಿರುತೆರೆಯಲ್ಲಿನ ತಮ್ಮ ಅನುಭವದ ಮೇಲೆ ‘ಸಿನಿಮಾದಲ್ಲಿ ಅಭಿನಯಿಸುವ ನಟ ನಟಿಯರಿಗಿಂತ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ನಟನಟಿಯರಿಗೇ ಹೆಚ್ಚು ಸಂಭಾವನೆ ಸಿಗಬೇಕು. ಸಿನಿ ಮಂದಿಗಿಂತ ಹೆಚ್ಚು ಪರಿಶ್ರಮ ವಹಿಸಿ ಕೆಲಸ ಮಾಡುವವರು ಅವರೇ’ ಎಂದಿದ್ದಾರೆ ಅಕ್ಷಯ್‌.

ಟಿ.ವಿ., ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವವರು ದಿನದ ಹೆಚ್ಚಿನ ಭಾಗ ಕೆಲಸ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಉತ್ತಮ ನಟನೆಯೊಂದಿಗೆ, ಡೈಲಾಗ್‌ಗಳನ್ನೂ ನೆನಪಿಟ್ಟುಕೊಳ್ಳಬೇಕಾಗುತ್ತದೆ. ಆ ಕೆಲಸವೇ ಹೆಚ್ಚು ಕಷ್ಟಕರ ಎಂಬುದು ಅಕ್ಷಯ್‌ ವಾದ.

‘ಸಿನಿ ಕ್ಷೇತ್ರದ ಎಲ್ಲಾ ಕೆಲಸಗಳಿಗಿಂತ ಟಿ.ವಿ.ಯಲ್ಲಿ ಕೆಲಸ ಮಾಡುವವರ ಕೆಲಸ ಕಷ್ಟ. ನಾವು ನಟರು ಅವರ ಕಾಲು ಭಾಗದಷ್ಟೂ ಪರಿಶ್ರಮ ವಹಿಸುವುದಿಲ್ಲ. ಹೀಗಾಗಿಯೇ ಆ ನಟ ನಟಿಯರ ಬಗೆಗೆ ನನಗೆ ಹೆಚ್ಚು ಗೌರವವಿದೆ. ಅವರಿಗೆ ನಮಗೆ ಸಿಗುವುದಕ್ಕಿಂತ ಹೆಚ್ಚಿನ ಸಂಭಾವನೆ ಸಿಗಬೇಕು. ಹೆಚ್ಚು ಸಿಕ್ಕಿಲ್ಲ ಎಂದರೆ ಕನಿಷ್ಠ ನಮಗೆ ಸಿಗುವಷ್ಟು ಹಣವನ್ನಾದರೂ ಅವರಿಗೆ ನೀಡಬೇಕು’ ಎಂದು ಅಭಿಪ್ರಾಯಿಸಿದ್ದಾರೆ.

ಅಂದಹಾಗೆ ಸೆ.30ರಿಂದ ಟಿ.ವಿ. ಪರದೆಯ ಮೇಲೆ ಬರಲಿರುವ ‘ಇಂಡಿಯನ್‌ ಲಾಫರ್‌ ಚಾಲೆಂಜ್‌’ ರಿಯಾಲಿಟಿ ಶೋನಲ್ಲಿ ಅಕ್ಷಯ್‌ ತೀರ್ಪುಗಾರರಾಗಿ ಇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT