ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ ಹತ್ಯೆ: ಪ್ರಜಾಶಕ್ತಿ ಉತ್ತರಿಸಲಿ

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಜೈಲಿನೊಳಗಿರುವ ನನಗೆ, ಗೌರಿ ಲಂಕೇಶ್‌ ಹತ್ಯೆಯಾಗಿರುವ ವಿಚಾರ ಪತ್ರಿಕೆಗಳ ಮೂಲಕ ತಿಳಿದು ಬಹಳ ದುಃಖವಾಯಿತು. ಮಾನವಪ್ರೇಮಿಯೂ, ಪ್ರಜಾತಂತ್ರವಾದಿಯೂ ಆದ ಗೌರಿ, ನನ್ನ ಸ್ನೇಹಿತರೂ ಹೌದು. ಕರ್ನಾಟಕದಲ್ಲಿ 70ರ ದಶಕದಲ್ಲಿ ಲಂಕೇಶ್‌ ಅವರು ಆರಂಭಿಸಿದ ರಾಜಕೀಯ, ಸಾಮಾಜಿಕ ವಿಮರ್ಶಾತ್ಮಕ ಪತ್ರಿಕಾಸ್ತ್ರವನ್ನು ಗೌರಿ ಮುಂದುವರಿಸಿದ್ದರು. ಅವರು ಅನೇಕ ಚಿಂತಕರು ಹಾಗೂ ಪ್ರಗತಿಪರರನ್ನು ಸಾಹಿತ್ಯಲೋಕಕ್ಕೆ ನೀಡಿದರು.

ಮಾವೊವಾದಿಗಳನ್ನು ಎನ್‌ಕೌಂಟರ್‌ ಮೂಲಕ ನಿರ್ನಾಮ ಮಾಡುವುದು, ಕೋಮು ಗಲಭೆಗಳು, ಹಿಂದುತ್ವ ಫ್ಯಾಸಿಸ್ಟ್‌ ಶಕ್ತಿಗಳ ಮೇಲಾಟ, ಮಹಿಳೆಯರ ದಮನದ ವಿರುದ್ಧ ಚೈತನ್ಯಶೀಲ ಸಮರ ನಡೆಸಿದ್ದರು. ಅವರೊಬ್ಬ ಪತ್ರಕರ್ತೆಯಷ್ಟೇ ಅಲ್ಲ ಸಾಮಾಜಿಕ ಹೋರಾಟಗಾರರೂ ಆಗಿದ್ದರು ಎಂಬುದಕ್ಕೆ ಇವೆಲ್ಲ ಸಾಕ್ಷಿ. ಇಂಥ ಹೋರಾಟದಲ್ಲಿ ತೊಡಗಿದ್ದ ಮಹಿಳೆಯ ಹತ್ಯೆ ಅಮಾನವೀಯ.

ಕರ್ನಾಟಕದಲ್ಲಿ ಪ್ರಗತಿಪರ ಸಾಹಿತಿಗಳ ಮೇಲೆ ದಾಳಿ ನಡೆಸುವ ಮತ್ತು ಅವರನ್ನು ಹತ್ಯೆ ಮಾಡುವ ಮೂಲಕ ಪ್ರಜಾತಾಂತ್ರಿಕ ಧ್ವನಿಯನ್ನು ದಮನಿಸುವ ಪ್ರಯತ್ನ ನಡೆಯುತ್ತಿದೆ. ಈ ಕ್ಲಿಷ್ಟಕರ ಸ್ಥಿತಿಯಲ್ಲಿ ಕರ್ನಾಟಕದ ಮಾನವಪ್ರೇಮಿ ಜನರು ಹಾಗೂ ಸಂಘಟನೆಗಳು ದೃಢ ಹೆಜ್ಜೆ ಇಟ್ಟು, ಬಸವಣ್ಣನವರ ಕಾಯಕಜೀವಿ ಚಳವಳಿಯನ್ನು ಸ್ಮರಿಸಿ ಏಕತೆಯಿಂದ ಹೋರಾಟಕ್ಕೆ ಮುಂದಾಗಬೇಕು. ಜನರ ಪ್ರತಿರೋಧ ಎಂಥ ನಿರಂಕುಶತ್ವವನ್ನೂ ಹಿಮ್ಮೆಟ್ಟಿಸಬಲ್ಲದು. ಫ್ಯಾಸಿಸ್ಟ್‌ ಶಕ್ತಿಗಳನ್ನು ಸೋಲಿಸಲು ಪ್ರಜಾಶಕ್ತಿಯಿಂದ ಮಾತ್ರ ಸಾಧ್ಯ.
–ಸಿ.ವೀರಮಣಿ, ಮಾವೊವಾದಿ, ಕೇಂದ್ರ ಕಾರಾಗೃಹ, ಕೊಯಮತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT