ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 16–9–1967

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವ್ಯಾಟಿಕನ್ ನಗರದಲ್ಲಿ ತುಂಡುಲಂಗ ನಿಷೇಧ

ವ್ಯಾಟಿಕನ್‌ನಗರ, ಸೆ. 15– ಪೋಪ್‌ರ ವಾಸ ಪ್ರದೇಶವಾದ ವ್ಯಾಟಿಕನ್ ನಗರದ ಕೆಲ ಭಾಗಗಳಿಗೆ ತುಂಡು ಲಂಗ ಧರಿಸಿದ ಮಹಿಳೆಯರಿಗೆ ನಿನ್ನೆಯಿಂದ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ತುಂಡು ಲಂಗ ಧರಿಸುವುದನ್ನು ಕೆಲವು ರೋಮನ್ ಕ್ಯಾಥೊಲಿಕ್‌ ಪಾದ್ರಿಗಳು ಹಾಗೂ ವ್ಯಾಟಿಕನ್‌ನ ಕೆಲ ಪತ್ರಿಕೆಗಳು ಕೆಲಕಾಲದಿಂದ ವಿರೋಧಿಸುತ್ತಾ ಬಂದಿದ್ದರೂ ಈವರೆಗೆ ಅದರ ವಿರುದ್ಧ ಯಾವ ನಿರ್ಬಂಧವನ್ನು ವಿಧಿಸಲಾಗಿರಲಿಲ್ಲ.

ಲಂಡನ್‌ನಲ್ಲಿರುವ ಸ್ಕಾಟ್ಲೆಂಡ್‌ ಯಾರ್ಡ್ ಪೋಲೀಸ್ ದಳದ ಮಹಿಳಾ ಪೋಲಿಸರಿಗೆ ಮೊಣಕಾಲು ಕಾಣಿಸುವಂತಹ ತುಂಡುಲಂಗಗಳನ್ನು ಧರಿಸಲು ಅನುಮತಿ ನೀಡಲಾಗಿದೆ.

**

ಮತೀಯ ಗಲಭೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಚವಾಣ್ ಸಲಹೆ (ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಸೆ. 15– ಕೋಮುವಾರು ಗಲಭೆಗಳು ಉಂಟಾಗದಂತೆ ನೋಡಿಕೊಳ್ಳಲು ಕೂಡಲೇ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರದ ಗೃಹಸಚಿವ ಶ್ರೀ ವೈ.ಬಿ. ಚವಾಣ್ ಅವರು ಎಲ್ಲ ಮುಖ್ಯಮಂತ್ರಿಗಳಿಗೂ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.

ರಾಂಚಿಯಲ್ಲಿ ಸಂಭವಿಸಿದ ಪ್ರಕರಣಗಳನ್ನು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವ ಶ್ರೀ ಚವಾಣರು ಅಂತಹ ದುರಂತಮಯ ಘರ್ಷಣೆಗಳು ಪುನಃ ಸಂಭವಿಸದಂತೆ ಖಚಿತಪಡಿಸುವುದರ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.

**

ಜನವರಿ 10 ರಿಂದ ಖೆಡ್ಡ

ಹೊಸಪೇಟೆ, ಸೆ. 15– ವಿಶ್ವವಿಖ್ಯಾತ ಖೆಡ್ಡ 1968ರ ಜನವರಿ 10 ರಿಂದ ನಡೆಯವುದು. 1967ರ ಅಕ್ಟೋಬರ್ 4 ರಿಂದ 10ರ ವರೆಗೆ ರಾಜ್ಯದಲ್ಲಿ ‘ಅಂತರರಾಷ್ಟ್ರೀಯ ಪ್ರವಾಸಿ ಸಪ್ತಾಹ’ವನ್ನು ಆಚರಿಸಲಾಗುವುದು.

**

ಶಿಕ್ಷಣ ಮಾಧ್ಯಮ ಪ್ರಶ್ನೆ: ರಾಜಕಾರಣಿಗಳ ಹಸ್ತಕ್ಷೇಪ ಸಲ್ಲದು: ಅತುಲ್ಯ ಘೋಷ್

ಮುಂಬೈ, ಸೆ. 15– ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಶಿಕ್ಷಣ ಮಾಧ್ಯಮವಾಗಿ ಪ್ರಾದೇಶಿಕ ಭಾಷೆಗಳನ್ನು ಜಾರಿಗೆ ತರುವುದಕ್ಕೆ ಐದು ವರ್ಷಗಳ ಕಾಲಮಿತಿ ಏನೇನೂ ಸಾಲದೆಂದು ಏ.ಐ.ಸಿ.ಸಿ. ಖಜಾಂಚಿ ಶ್ರೀ ಅತುಲ್ಯ ಘೋಷ್ ಅವರು ಇಂದು ಇಲ್ಲಿ ತಿಳಿಸಿದರು.

ಈ ಪ್ರಶ್ನೆಯನ್ನು ಶಿಕ್ಷಣ ತಜ್ಞರು ಇತ್ಯರ್ಥಪಡಿಸಬೇಕೆ ಹೊರತು ರಾಜಕಾರಣಿಗಳಲ್ಲ ಎಂದರು ಅವರು.

**

ಶರಾವತಿ ಪ್ರದೇಶದ ಸೌಂದರ್ಯವರ್ಧನೆಗೆ 1 ಕೋಟಿ ರೂ. ವೆಚ್ಚ: ರಾಜ್ಯದ ಆಲೋಚನೆ

ಹೊಸಪೇಟೆ, ಸೆ. 15– ನೀರಾವರಿ ಯೋಜನೆಗಳ ಅಂದಾಜು ವೆಚ್ಚದಲ್ಲಿ ಶೇಕಡ 1 ರಿಂದ 2 ರಷ್ಟು ಭಾಗವನ್ನು ಆ ಯೋಜನೆಗಳ ಪ್ರದೇಶದಲ್ಲಿ ಉದ್ಯಾನಗಳ ನಿರ್ಮಾಣ್ಕಕೂ, ಸ್ಥಳ ಸೌಂದರ್ಯ ಸಂವರ್ಧನೆಗೂ ಮೀಸಲಾಗಿಡಬೇಕೆಂದು ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT