ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಸಾರ್ವಜನಿಕರ ಆರೋಪ

Last Updated 16 ಸೆಪ್ಟೆಂಬರ್ 2017, 8:56 IST
ಅಕ್ಷರ ಗಾತ್ರ

ಕುಣಿಗಲ್: ಪುರಸಭೆಯ 23ನೇ ವಾರ್ಡ್‌ನಲ್ಲಿ ಕಳಪೆ ಕಾಮಗಾರಿಯಿಂದಾಗಿ ವಾರದಲ್ಲಿ ಹಾಕಿದ ಡಾಂಬರ ರಸ್ತೆಯಲ್ಲಿಯೇ ಕುಸಿದಿದೆ’ ಎಂದು ಸಾರ್ವಜನಿಕರಾದ ರಮೇಶ್, ರವೀಂದ್ರ,ಕಿರಣ್ ಆರೋಪಿಸಿದ್ದಾರೆ.

ಈ ವಾರ್ಡಿನಲ್ಲಿ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು ಪೈಪ್‌ಗಳ ಜೋಡಣೆ ನಂತರ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿ ಹದಮಾಡಿ ಮಟ್ಟ ಮಾಡಬೇಕಾಗಿತ್ತು. ಆದರೆ ಒಳಚರಂಡಿ ಕಾಮಗಾರಿ ಕಾರ್ಯನಿರ್ವಹಿಸಿದ ಗುತ್ತಿಗೆದಾರರು ಗುಂಡಿಗಳನ್ನು ಹದಮಾಡಿ ಸಮತಟ್ಟು ಮಾಡಲು ವಿಫಲರಾಗಿದ್ದರು’ ಎಂದು ದೂರಿದರು.

‘ಅಧಿಕಾರಿಗಳು ಮತ್ತು ಈ ಭಾಗದ ಅನುಭವಿ ಸದಸ್ಯರು ಗಮನ ಹರಿಸಲ್ಲಿಲ್ಲ. ಕೆಲ ದಿನಗಳ ನಂತರ ಡಾಂಬರ್ ಹಾಕ್ಕುವ ಗುತ್ತಿಗೆದಾರರು ರಸ್ತೆಯನ್ನು ಗಮನಿಸದೆ ಡಾಂಬರ್ ಹಾಕಿ ಹೋಗಿದ್ದು, ವಾರದಲ್ಲಿ ರಸ್ತೆಯಲ್ಲಿ ಗುಂಡಿಬಿದ್ದು ಹಾಕಿದ್ದ ಡಾಂಬರ್ ಕಿತ್ತುಹೋಗಿ ರಸ್ತೆ ಹಾಳಾಗಿದೆ. ಕಾಮಗಾರಿ ಪರಿವೀಕ್ಷಣೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳಪೆ ಕಾಮಗಾರಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT