ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ, 17–9–1967

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಾಥುಲಾ ಘಟನೆಗಳ ಬಗ್ಗೆ ಆತಂಕ ಬೇಡ: ವಿರೋಧ ಪಕ್ಷಗಳಿಗೆ ಇಂದಿರಾ ಆಶ್ವಾಸನೆ

ನವದೆಹಲಿ, ಸೆ. 16– ಸಿಕ್ಕಿಂ–ಟಿಬೆಟ್ ಗಡಿಯಲ್ಲಿನ ನಾಥುಲಾ ಬಳಿ ಇತ್ತೀಚೆಗೆ ನಡೆದ ಘರ್ಷಣೆಗಳು ‘ಸ್ಥಳೀಯ ಸ್ವರೂಪ’ದ್ದಾಗಿವೆಯೆಂದೂ ಅದರಿಂದ ಯಾವ ಕಳವಳಕ್ಕೂ ಕಾರಣವಿಲ್ಲವೆಂದೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಪಾರ್ಲಿಮೆಂಟಿನಲ್ಲಿನ ವಿರೋಧ ಪಕ್ಷಗಳ ನಾಯಕರಿಗೆ ತಿಳಿಸಿದರು.

ನಮ್ಮ ಸೈನಿಕರ ಮನೋಸ್ಥೈರ್ಯ ಅತ್ಯುತ್ತಮ ರೀತಿಯಲ್ಲಿದೆಯೆಂದೂ ಅವರು ಹೇಳಿದರು.

ನಾಥುಲಾ ಪ್ರದೇಶದಲ್ಲಿ ನಮ್ಮ ಸೈನಿಕರು ಮತ್ತು ಅಧಿಕಾರಿಗಳು ಪ್ರದರ್ಶಿಸುತ್ತಿರುವ ದಿಟ್ಟತನದ ಬಗ್ಗೆ ವಿರೋಧ ಪಕ್ಷಗಳ ನಾಯಕರು ತಮ್ಮ ತೃಪ್ತಿ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

**

ಚೀನದಿಂದ ಸದಾಕಾಲ ಅಪಾಯ

ಕೊಲಂಬೊ, ಸೆ. 16– ಪ್ರಸಕ್ತ ಸಿಕ್ಕಿಂ ಗಡಿ ಘಟನೆಗಳು ಸ್ಥಳೀಯ ಪ್ರಕರಣಗಳಾಗಿರಬಹುದೆಂದೂ ಆದರೆ ಭಾರತಕ್ಕೆ ಚೀನದ ಬೆದರಿಕೆ ಸದಾಕಾಲವೂ ಇರುವುದೆಂದೂ ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ತಿಳಿಸಿದ್ದಾರೆ.

ಸಿಂಹಳದ ದಿನಪತ್ರಿಕೆಯೊಂದರ ದೆಹಲಿ ವರದಿಗಾರನಿಗೆ ನೀಡಿದ ಪತ್ರಿಕಾ ಸಂದರ್ಶನದಲ್ಲಿ ಶ್ರೀಮತಿ ಗಾಂಧಿ ಅವರು ಹೇಳಿದ ಈ ವಿಷಯವನ್ನು ಇಂದು ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.

**

ರಾಷ್ಟ್ರದ ಆರ್ಥಿಕ ಪ್ರಗತಿಗೆ ಕುಟುಂಬ ಯೋಜನೆ ಮುಖ್ಯ: ಇಂದಿರಾ

ನವದೆಹಲಿ, ಸೆ. 16– ‘ಕುಟುಂಬ ಯೋಜನೆಯ ಕಾರ್ಯಕ್ರಮದ ಯಶಸ್ಸು ಭಾರತದ ಆರ್ಥಿಕ ಅಭಿವೃದ್ಧಿಗೆ ಮೂಲಾಧಾರ’ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಂಧಿ ಅವರು ಇಂದು ರಾತ್ರಿ ತಿಳಿಸಿದರು.

‘ರಾಷ್ಟ್ರೀಯ ಕುಟುಂಬ ಯೋಜನಾ ಪಕ್ಷ’ ದ ಸಂದರ್ಭದಲ್ಲಿ ನೀಡಿದ ಆಕಾಶವಾಣಿ ಸಂದೇಶವೊಂದರಲ್ಲಿ ‘ಬಿಡಿ ಕುಟುಂಬಗಳು ಚಿಕ್ಕದಾಗಿಯೂ ನೆಮ್ಮದಿಯಾಗಿಯೂ ಇದ್ದರೆ ರಾಷ್ಟ್ರವು ಪ್ರಗತಿಯನ್ನೂ ಅಭ್ಯುದಯವನ್ನೂ ಸಾಧಿಸುತ್ತದೆ’ ಎಂದು ತಿಳಿಸಿದರು.

**

ಭಾಷಾ ಕಾನೂನು ತಿದ್ದುಪಡಿ ತಮಿಳುನಾಡಿಗೆ ತೃಪ್ತಿ ತರದೆಂದು ಅಣ್ಣಾದೊರೈ

ಮದರಾಸ್, ಸೆ. 16– ‘ಕೇಂದ್ರದ ಅಧಿಕೃತ ಭಾಷೆಯಾಗಿ ಇಂಗ್ಲೀಷ್ ಮುಂದುವರಿಕೆ ಬಗ್ಗೆ ತಿದ್ದುಪಡಿಯನ್ನು ಅಂಗೀಕರಿಸುವುದರಿಂದ ಸಮಾಜದ ಗಣನೀಯ ಸಂಖ್ಯೆಯ ಜನಕ್ಕೆ ತೃಪ್ತಿಯುಂಟಾಗಬಹುದು. ಆದರೆ ಡಿ.ಎಂ.ಕೆ. ಮತ್ತು ತಮಿಳುನಾಡಿನ ವಿದ್ಯಾರ್ಥಿಗಳಿಗೆ ಅಲ್ಲ’ ಎಂದು ಪ್ರಧಾನಮಂತ್ರಿಯವರಿಗೆ ತಾವು ತಿಳಿಸಿರುವುದಾಗಿ ಮುಖ್ಯಮಂತ್ರಿ ಶ್ರೀ ಅಣ್ಣಾದೊರೈ ಅವರು ಇಂದು ಇಲ್ಲಿ ತಿಳಿಸಿದರು.

**

ವಿಮಾನದಲ್ಲಿ 2ಕೋಟಿ ರೂ. ಬೆಲೆಯ ಚಿನ್ನದ ಕಳ್ಳಸಾಗಣೆ

ನವದೆಹಲಿ, ಸೆ.16– ಲಂಡನ್‌ನಿಂದ ಹಾಂಕಾಂಗ್‌ಗೆ ತೆರಳುತ್ತಿದ್ದ ಬಿ.ಓ.ಎ.ಸಿ ವಿಮಾನದಿಂದ ಸುಮಾರು ಎರಡು ಕೋಟಿ ರೂಪಾಯಿಗಳ ಬೆಲೆಯ ಚಿನ್ನವನ್ನು ತಾವು ವಶಪಡಿಸಿಕೊಂಡಿರುವುದಾಗಿ ದೆಹಲಿಯ ಸುಂಕದ ಅಧಿಕಾರಿಗಳು ಇಂದು ಇಲ್ಲಿ ಪ್ರಕಟಿಸಿದರು.

ಚೀನಕ್ಕೆ ತಲುಪಿಸಲು ಈ ಚಿನ್ನವನ್ನು ಹಾಂಕಾಂಗ್‌ಗೆ ಸಾಗಿಸಲಾಗುತ್ತಿತ್ತೆಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT