ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಮೆಂಟ್ಸ್‌ ಬ್ಯಾಂಕ್‌ ಸೇವೆ ಅಂಚೆ ಇಲಾಖೆಯ ಸಿದ್ಧತೆ

Last Updated 16 ಸೆಪ್ಟೆಂಬರ್ 2017, 20:36 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಅಂಚೆ ಇಲಾಖೆಯು 2018ರ ಹೊತ್ತಿಗೆ ತನ್ನೆಲ್ಲ 1.55 ಲಕ್ಷ ಅಂಚೆ ಕಚೇರಿಗಳ ಮೂಲಕ ಪೇಮೆಂಟ್ಸ್‌ ಬ್ಯಾಂಕ್‌ ಸೇವೆ ಒದಗಿಸಲು ಕಾರ್ಯೋನ್ಮುಖವಾಗಿದೆ.

ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌, ದೇಶದಾದ್ಯಂತ ಪೇಮೆಂಟ್ಸ್‌ ಬ್ಯಾಂಕ್ ಸೇವೆ ಸಲ್ಲಿಸುವ ಅತಿದೊಡ್ಡ ಬ್ಯಾಂಕಿಂಗ್ ವ್ಯವಸ್ಥೆಯಾಗಿರಲಿದೆ. ಪೇಮೆಂಟ್ಸ್‌ ಬ್ಯಾಂಕ್‌ನ ಪ್ರತಿಯೊಂದು ಖಾತೆಯಲ್ಲಿ ವ್ಯಕ್ತಿಗಳು ಮತ್ತು ಸಣ್ಣ ಉದ್ದಿಮೆದಾರರು ₹ 1 ಲಕ್ಷದವರೆಗೆ ಠೇವಣಿ ಇರಿಸಬಹುದಾಗಿದೆ. ಇಲ್ಲಿ ಗ್ರಾಹಕರಿಗೆ ಜಿಡಿಟಲ್‌ ಪಾವತಿ ಸೌಲಭ್ಯವೂ ದೊರೆಯಲಿದೆ.

‘2018ರ ಮಾರ್ಚ್‌ ಹೊತ್ತಿಗೆ ಪ್ರತಿಯೊಂದು ಜಿಲ್ಲೆಯಲ್ಲಿ ಅಂಚೆ ಕಚೇರಿ ಬ್ಯಾಂಕ್‌ ಸೇವೆಗೆ ಚಾಲನೆ ನೀಡಲಾಗುತ್ತಿದೆ. ಕ್ಯಾಲೆಂಡರ್‌ ವರ್ಷದ ಅಂತ್ಯದ ಹೊತ್ತಿಗೆ ಎಲ್ಲ 1.55 ಲಕ್ಷ ಅಂಚೆ ಕಚೇರಿಗಳು, ಪ್ರತಿಯೊಬ್ಬ ಪೋಸ್ಟ್‌ಮನ್‌ ಮತ್ತು ಗ್ರಾಮೀಣ ಅಂಚೆ ಸೇವಕರಿಗೆ ಪೇಮೆಂಟ್ಸ್‌ ಸೇವೆ ಒದಗಿಸುವ ಸಾಧನ ಒದಗಿಸಲಾಗುವುದು’ ಎಂದು ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನ (ಐಪಿಪಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ. ಪಿ. ಸಿಂಗ್‌ ಅವರು ಹೇಳಿದ್ದಾರೆ.

‘ಹಣ ಪಾವತಿಗೆ ಆಧಾರ್‌ ಅನ್ನು ವಿಳಾಸ ದೃಢೀಕರಣಕ್ಕೆ ಬಳಸಿಕೊಳ್ಳಲಾಗುವುದು. ಇದರಿಂದ ಹಣ ವರ್ಗಾವಣೆ ತುಂಬ ಅಗ್ಗವಾಗಲಿದೆ. ಉದಾಹರಣೆಗೆ ₨ 10 ವರ್ಗಾಯಿಸಲು ಕೇವಲ 1 ಪೈಸೆ ವೆಚ್ಚವಾಗಲಿದೆ’ ಎಂದು ಸಿಂಗ್ ಹೇಳಿದ್ದಾರೆ.

**

ಠೇವಣಿ ಬಡ್ಡಿ ದರ (₹ ಗಳಲ್ಲಿ) (ಶೇಕಡಾವಾರು)
₹ 25 ಸಾವಿರದವರೆಗೆ 4.5
₹ 25 ರಿಂದ ₹ 50 ಸಾವಿರದವರೆಗೆ 5
₹ 50 ಸಾವಿರದಿಂದ ₹ 1 ಲಕ್ಷದವರೆಗೆ 5.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT