ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ನೀರು ಹಂಚಿಕೆ ವಿವಾದ: ಒಪ್ಪಂದಕ್ಕೆ ಬಾರದ ಭಾರತ–ಪಾಕ್‌

Last Updated 16 ಸೆಪ್ಟೆಂಬರ್ 2017, 20:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸಿಂಧೂ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಇಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಹೊಸದಾಗಿ ಯಾವುದೇ ಒಪ್ಪಂದಗಳನ್ನು ಕೈಗೊಂಡಿಲ್ಲ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ.

ಕಿಶನ್‌ಗಂಗಾ ಮತ್ತು ರಾಟ್ಲೆಯಲ್ಲಿ ಭಾರತವು ಕೈಗೊಳ್ಳಲು ಉದ್ದೇಶಿಸಿರುವ ಜಲವಿದ್ಯುತ್‌ ಯೋಜನೆಗೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದ್ದು, ಈ ವಿವಾದ ಬಗೆಹರಿಸಲು ಸೆ.14 ಹಾಗೂ 15ರಂದು ವಿಶ್ವಬ್ಯಾಂಕ್‌ ವಾಷಿಂಗ್ಟನ್‌ನಲ್ಲಿ ‌ಸಭೆ ಆಯೋಜಿಸಿತ್ತು.

ಸಭೆಯು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ವಿಶ್ವಬ್ಯಾಂಕ್ ತಿಳಿಸಿದೆ. ಎರಡೂ ರಾಷ್ಟ್ರಗಳು ಸಿಂಧೂ ನದಿಯ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿ ಹಾಗೂ ನದಿ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿರುವುದು ಶ್ಲಾಘನೀಯ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT