ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಪರೀಕ್ಷಗೆ ಹೇಗೆ ತಯಾರಿ ನಡೆಸಬೇಕು?

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1. ನಾನು ದ್ವಿತೀಯ ಪಿಯುಸಿ ಕಾಮರ್ಸ್ ಓದುತಿದ್ದೇನೆ. ನನಗೆ ಮುಂದೆ ಸರ್ಕಾರಿ ಕೆಲಸ ಪಡೆಯುವ ಹಂಬಲವಿದೆ.  ನಾನು ಪಿಯುಸಿಯಲ್ಲಿ ಎಷ್ಟು ಅಂಕ ಗಳಿಸಿದರೆ ಯಾವ ಯಾವ ಕೆಲಸ ಪಡೆಯಬಹುದು, ತಿಳಿಸಿಕೊಡಿ. ನಂತರ ನಾನು ಬಿಕಾಂ ಮಾಡಬೇಕು ಎಂದುಕೊಂಡಿದ್ದೇನೆ. ಬಿಕಾಂ ನಲ್ಲಿ ಎಷ್ಟು ಅಂಕ ತೆಗೆದರೆ ಯಾವ ಯಾವ ಕೆಲಸಕ್ಕೆ ಅರ್ಜಿ ಹಾಕಬಹುದು.

ಉತ್ತರ: ಪಿಯುಸಿ ಆದ ನಂತರ ಕೆಲಸದ ಕಡೆ ಗಮನ ಕೊಡದೆ, ಡಿಗ್ರಿ ಮಾಡುವುದು ಉತ್ತಮ. ಪಿಯುಸಿ ನಂತರ ಕೆಲಸಕ್ಕೆ ಸೇರಿದರೆ, ನಿಮ್ಮ ವಿದ್ಯಾರ್ಹತೆಗೆ ತಕ್ಕ ಸಂಬಳ ಸಿಗುತ್ತದೆ. ಡಿಗ್ರಿ ಮುಗಿಸಿ ಕಾಂಪಿಟೇಟಿವ್‌ ಏಕ್ಸಾಂ ತೆಗೆದುಕೊಂಡು ಕೆಲಸಕ್ಕೆ ಪ್ರಯತ್ನ ಮಾಡಿ.

ಸರ್ಕಾರಿ ನೌಕರಿ ಹಲವಾರು ಕ್ಷೇತ್ರಗಳಲ್ಲಿ ಲಭ್ಯವಿದೆ. ಯುಪಿಎಸ್‌ಸಿ ಕಾಂಪಿಟೇಶನ್ಸ್‌, ಎಸ್‌ಎಸ್‌ಸಿ ಕಾಂಪಿಟೇಶನ್ಸ್‌, ಬ್ಯಾಂಕ್‌ ಕಾಂಪಿಟೇಶನ್ಸ್‌, ರೈಲ್ವೇಸ್‌ ಕಾಂಪಿಟೇಶನ್ಸ್‌, ಇನ್ಶೂರೆನ್ಸ್‌ ಕಾಂಪಿಟೇಶನ್ಸ್‌, ಡಿಫೆನ್ಸ್‌ ಕಾಂಪಿಟೇಶನ್ಸ್‌, ಪೊಲೀಸ್‌, ಸೆಕ್ಯೂರಿಟಿ ಸರ್ವೀಸಸ್‌ ಇನ್ನೂ ಅನೇಕ. ಪ್ರತಿಯೊಂದಕ್ಕೂ ಅರ್ಹತೆ  ಬೇರೆ ಬೇರೆ ಇರುತ್ತದೆ. ವಯಸ್ಸು, ವಿದ್ಯಾರ್ಹತೆ, ನ್ಯಾಶನಾಲಿಟಿಗಳ ಮೇರೆಗೆ ಪರೀಕ್ಷೆ ಬರೆಯಬೇಕು. ಇದರಲ್ಲಿ ಕಟ್‌ ಆಫ್‌ ಮಾರ್ಕ್ಸ್‌ ಅಂತ ಇಲ್ಲ. ಡಿಗ್ರಿ ಪಾಸ್‌ ಆಗಿರಬೇಕು, ಪರೀಕ್ಷೆ ಪಾಸಾದ ನಂತರ ತರಬೇತಿ ಇರುತ್ತದೆ. ನೀವು ಎಷ್ಟು ಚೆನ್ನಾಗಿ ಮಾಡುತ್ತೀರ ಅನ್ನುವುದು, ನಿಮ್ಮ ಶ್ರದ್ಧೆ, ಪರಿಶ್ರಮ ಮತ್ತು ಗುರಿಯನ್ನು ಯಶಸ್ವಿಯಾಗಿ ಮುಟ್ಟುವ ಹಂಬಲದ ಮೇಲೆ ತೀರ್ಮಾನವಾಗುತ್ತದೆ. ಹೆಚ್ಚಿನ ವಿವರವನ್ನು ಡೈರೆಕ್ಟರಿ ಆಫ್‌ ಕಾಂಪಿಟೇಟಿವ್‌ ಏಕ್ಸಾಂ ಅನ್ನು ಪುಸ್ತಕವನ್ನು ಖರೀದಿಸಿ ಓದಿ. ಎಂಪ್ಲಾಯಿಮೆಂಟ್‌ ನ್ಯೂಸ್‌ ಅನ್ನುವ ಪೇಪರ್‌ನಲ್ಲಿ ಸಹ ಸರ್ಕಾರಿ ನೌಕರಿಯ ಬಗ್ಗೆ ಮಾಹಿತಿ ಸಿಗುತ್ತದೆ. ಚೆನ್ನಾಗಿ ಓದಿ ಮುಂದೆ ಬನ್ನಿ.

2. ನನ್ನ ಹೆಸರು ಸುನೀಲ್ ಕುಮಾರ್‌. ನಾನು ಪಿಎಸ್ಐ ಪರೀಕ್ಷೆಗೆ ಓದುತ್ತಿದ್ದೇನೆ. ಈ ಪರೀಕ್ಷೆಗೆ ಯಾವ ರೀತಿ ತಯಾರಿ ನಡೆಸಬೇಕು ಮತ್ತು ಯಾವ ಯಾವ ಪುಸಕ್ತಗಳನ್ನು ಓದಬೇಕು ಎಂಬುದನ್ನು ತಿಳಿಸಿ. ನನಗೆ ಭಾಷಾಂತರ ಮಾಡುವುದು ಸ್ವಲ್ಪ ಕಷ್ಟವಾಗುತ್ತಿದೆ. ಅದಕ್ಕೆ ಹೇಗೆ ತಯಾರಿ ನಡೆಸಬೇಕು.

ಉತ್ತರ: ಎಂಪಿಎಸ್‌ಸಿ–ಪಿಎಸ್‌ಐ, ಮಹಾರಾಷ್ಟ್ರ ಪಬ್ಲಿಕ್‌ ಸರ್ವೀಸ್‌ ಕಮಿಷನ್‌ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಎಕ್ಸಾಮಿನೇಶನ್‌ ಇದು ಪೇಪರ್‌ ಬೇಸ್ಡ್‌ ಪರೀಕ್ಷೆ. ಇದನ್ನು ಪಾಸ್‌ ಮಾಡಿದರೆ, ಮಹಾರಾಷ್ಟ್ರ ಪೊಲೀಸ್‌ನಲ್ಲಿ ಕೆಲಸ. ವಯಸ್ಸು 19–28 ವರ್ಷಗಳು, ವಿದ್ಯಾರ್ಹತೆ: ಡಿಗ್ರಿ ಬೇರಾವ ಮರಾಠಿ ಭಾಷೆ ಕಂಪಲ್ಸರಿ ಇದ್ದು 3 ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ರಿಟನ್‌ ಟೆಸ್ಟ್‌, ಫಿಸಿಕಲ್‌ ಫಿಟ್‌ನೆಸ್‌ ಟೆಸ್ಟ್‌ ಮತ್ತು ಇಂರ್ಟವ್ಯೂ. ರಿಟನ್‌ ಟೆಸ್ಟ್‌ ಎರಡು ಹಂತದಲ್ಲಿ ಪ್ರಿಲಿಮಿನರಿ, ಇದನ್ನು ಪಾಸ್‌ ಮಾಡಿದವರು ಮೈನ್‌ ಎಕ್ಸಾಮಿನೇಶನ್‌, ನೆಕ್ಸ್ಟ್ ಫಿಸಿಕಲ್‌ ಟೆಸ್ಟ್‌ ಮತ್ತು ಇನ್‌ರ್ಟವ್ಯೂ.

ನಿಮ್ಮ ಅರ್ಜಿಯನ್ನು ಆನ್‌ಲೈನ್‌ನಲ್ಲಿ www.mahaonline.gov.inಗೆ ಕಳಿಸಿ. ಪ್ರಶ್ನಪತ್ರಿಕೆ ಮರಾಠಿ ಮತ್ತು ಇಂಗ್ಲಿಷ್‌ನಲ್ಲಿ ಇರುತ್ತದೆ.

ಸಿಲೆಬಸ್‌: ಕರೆಂಟ್‌ ಅಫೇರ್ಸ್‌, ಸಿವಿಕ್ಸ್‌,  ಹಿಸ್ಟರಿ ಆಫ್ ಮಹಾರಾಷ್ಟ್ರ, ಜಿಯಾಗ್ರಾಫಿ, ಎಕಾನಾಮಿಕ್ಸ್, ಸೈನ್ಸ್‌, ಲಾಜಿಕಲ್‌ ಮತ್ತು ನ್ಯೂಮರಿಕಲ್‌ ರಿಸನಿಂಗ್‌ (ಪ್ರಿಲಿಮಿನರಿ ಪರೀಕ್ಷೆಗೆ) ಮೈನ್‌ ಏಕ್ಸಾಂನಲ್ಲಿ ಮರಾಠಿ (60 ಅಂಕಗಳು) ಇಂಗ್ಲಿಷ್‌ (40 ಅಂಕಗಳು), ಜನರಲ್‌ ನಾಲೆಡ್ಜ್‌, ಮೆಂಟಲ್‌ ಎಬಿಲಿಟಿ ಮತ್ತು ಸಬ್ಜೆಕ್ಟ್‌ ನಾಲೆಡ್ಜ್ (100 ಅಂಕಗಳು).

ಫಿಸಿಕಲ್‌ ಟೆಸ್ಟ್‌: ಗಂಡಸರಿಗೆ – ಐರ್‌ನ್‌ ಬಾಲ್‌ ತ್ರೋಯಿಂಗ್‌, ಪುಲ್‌ಅಪ್ಸ್‌,  ಲಾಂಗ್‌ ಜಂಪ್‌, 800 ಮೀಟರ್‌ ರೇಸ್‌.

ಹೆಂಗಸರಿಗೆ– ಐರನ್‌ ಬಾಲ್‌ ತ್ರೋಯಿಂಗ್‌,  ರೇಸ್‌ 100 ಮೀಟರ್ಸ್‌, ಬ್ರಿಸ್ಕ್ ವಾಕ್‌ 3 ಕಿ.ಮೀ.

ಪುಸ್ತಕಗಳು ನೀವು ಹೆಸರಾಂತ  ಪುಸ್ತಕ ಮಳಿಗೆ ಅಥವಾ ಅಮೆಜಾನ್ ಆನ್‌ಲೈನ್‌ ಸೈಟ್‌ನಲ್ಲೂ ದೊರೆಯುತ್ತವೆ.

3. ನನ್ನ ಹೆಸರು ವಿನಯ್, ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ನಾನು ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದೆ. ಆದರೆ 3ನೇ ವರ್ಷದಲ್ಲಿದ್ದಾಗ ಆಸಕ್ತಿ ಇಲ್ಲದೇ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದ್ದೆ. ಇತ್ತೀಚಿಗೆ ಸುದ್ದಿಯಾಗುತ್ತಿರುವ ಹೈಡ್ರೋಫೋನಿಕ್ಸ್‌, ಸಾಯಿಲ್‌ಲೆಸ್ ಫಾರ್ಮಿಂಗ್‌ನಲ್ಲಿ ಮುಂದುವರಿಯಬೇಕು ಅಂದುಕೊಂಡಿದ್ದೇನೆ. ಈ ಹೈಡ್ರೋಪೋನಿಕ್ಸ್ ಬಗ್ಗೆ ಯಾವ ಕಾಲೇಜು ಶಿಕ್ಷಣ ನೀಡುತ್ತದೆ. ಇದಕ್ಕೆ ಸ್ಕೋಪ್‌ ಇದೆಯೇ. ದಯವಿಟ್ಟು ನನಗೆ ಮಾರ್ಗದರ್ಶನ ನೀಡಿ.

ಉತ್ತರ: ನವೀನ ರೀತಿಯಲ್ಲಿ ಮಣ್ಣನ್ನು ಬಳಸದೆ  ನ್ಯೂಟ್ರಿಯೆಂಟ್‌ ಏನ್‌ರಿಚ್ಡ್‌ ನೀರಿನಲ್ಲಿ  ಗಿಡಗಳನ್ನು ಬೆಳೆಸುವುದಕ್ಕೆ ಹೈಡ್ರೋಫೋನಿಕ್‌ ಫಾರ್ಮಿಂಗ್‌ ಅನ್ನುತ್ತಾರೆ. ಈ ರೀತಿ ಬೆಳೆಸುವುದರಿಂದ ಹಲವಾರು ಅನುಕೂಲಗಳಿವೆ.

1. ಏನೂ ದಂಡವಾಗದಂತೆ, ನೀರಿನಲ್ಲಿರುವ ನ್ಯೂಟ್ರಿಯೆಂಟ್‌ ಅನ್ನು ಪೂರ್ತಿಯಾಗಿ ಗಿಡಗಳು ಪಡೆಯುತ್ತವೆ.

2. ಮಣ್ಣಿನಲ್ಲಿ ಬೆಳೆಸುವಾಗ ಬೇಕಾಗುವ ನೀರಿಗಿಂತ ಕಡಿಮೆ ನೀರು ಬೇಕಾಗುತ್ತದೆ.

3. ಬೆಳೆವಣಿಗೆಯ ವೇಗ ಹೆಚ್ಚುತ್ತದೆ.

4. ಕಡಿಮೆ ಜಾಗದಲ್ಲಿ ಬೆಳೆಯಬಹುದು.

5. ಪ್ರಾಡಕ್ಟ್‌ ಕ್ವಾಲಿಟಿ ತುಂಬಾ ಉತ್ತಮವಾಗಿರುತ್ತದೆ.

ಬಿಎಸ್ಸಿ (ಹಾರ್ಟಿಕಲ್ಚರ್‌) ಎಂಎಸ್ಸಿ (ಹಾರ್ಟಿಕಲ್ಚರ್‌) ಪಿ.ಎಚ್‌ಡಿ ಮತ್ತು ಪೋಸ್ಟ್‌  ಡಾಕ್ಟರಲ್ ಫೆಲೋಶಿಫ್ ಫಾರ್‌ ರೀಸರ್ಚ್‌, ಭಾರತ ದೇಶದ ಅನೇಕ ವಿಶ್ವವಿದ್ಯಾಲಯಗಳಲ್ಲಿ ದೊರೆಯುತ್ತದೆ.

ಬಿಎಸ್ಸಿ(ಹಾರ್ಟಿ) 4 ವರ್ಷದ ಕೋರ್ಸ್‌, ಅರ್ಹತೆ +2 ಜೊತೆಗೆ ಪಿಸಿಬಿ.

ದಿ ಅಗ್ರಿ–ಹಾರ್ಟಿಕಲ್ಚರ್‌ ಸೊಸೈಟಿ ಆಫ್‌ ಇಂಡಿಯಾ ಇವರು ಶಾರ್ಟ್‌ಟರ್ಮ್‌ ಕೋರ್ಸ್‌ ನಡೆಸುತ್ತಾರೆ. ನೀವು ಡಿಗ್ರಿಯ ನಂತರ ಸ್ಪೆಷಲೈಸೆಶನ್‌ ಇನ್‌ ಹೈಡ್ರೊಫೋನಿಕ್‌ ಮಾಡಿದರೆ ನಿಮ್ಮದೇ ಸ್ವಂತ ಫಾರಂ ಮಾಡಿ ಸೇಲ್ಸ್ ಅಂಡ್‌ ಎಕ್ಸ್‌ಫೋರ್ಟ್‌ನಲ್ಲೂ ತಜ್ಞರಾಗಬಹುದು.

ನೋಟ್‌: ನೀವು ಈಗಾಗಲೇ 3 ವರ್ಷ ದಂಡ ಮಾಡಿದ್ದೀರಿ. ಹಾರ್ಟಿಕಲ್ಚರ್‌ಗೆ ಅಪ್ಲೈ ಮಾಡುವ ಮುನ್ನ ನಿಮಗೆ ತೀವ್ರ ಆಸಕ್ತಿ ಇದೆಯಾ ಅಂತ ಗಮನಿಸಿ.

4. ನನ್ನ ಹೆಸರು ಶಾರದಾ,ಬೆಂಗಳೂರು(35). ನಾನು ಎಂಎಸ್ಸಿ (ಸ್ಪೆಷಲೈಜೇಷನ್ ಇನ್ ಫಿಸಿಕಲ್ ಕೆಮಿಸ್ಟ್ರಿ) ಮುಗಿಸಿ 2 ವರ್ಷ ಟೀಚಿಂಗ್ (ಪಿಯುಸಿ)ಮಾಡಿದ್ದೇನೆ. ಆದರೆ ಟೀಚಿಂಗ್‌ನಲ್ಲಿ ಆಸಕ್ತಿ ಇಲ್ಲದ ಕಾರಣ ಬೇರೆ ಯಾವ ಜಾಬ್ ಮಾಡಬಹುದು? ( ನೋ ಸ್ಕೋಪ್ ಫಾರ್ ಫಿಸಿಕಲ್ ಕಿಮಿಸ್ಟ್ರಿ ಇನ್ ಕಂಪೆನೀಸ್‌). ಕಂಪೆನಿಯಲ್ಲಿ ಕೆಲಸ ಮಾಡಲು ಬೇರೆ ಏನಾದರೂ ಕಲಿಯಬೇಕಾ? ದಯವಿಟ್ಟು ತಿಳಿಸಿ..

ಉತ್ತರ: ನಿಮಗೆ ಯಾವುದರಲ್ಲಿ ಆಸಕ್ತಿ ಇದೆ ಅನ್ನುವುದನ್ನು ಗುರುತಿಸಿ ಈಗಿನ ಕೆಲಸಗಳಲ್ಲಿ ಕ್ವಾಲಿಫೀಕೇಶನ್‌ ಅಂಡ್‌ ಸ್ಕಿಲ್ಸ್‌ನಲ್ಲಿ ಸಂಬಂಧವೇ ಇಲ್ಲ (ಎಷ್ಟೋ ಕಡೆ). ಟೀಚಿಂಗ್‌ ಇಷ್ಟವಿಲ್ಲದಿದ್ದರೆ, ಡಿಸೈನಿಂಗ್‌, ಇಂಟಿರಿಯರ್‌ ಡೆಕೊರೇಶನ್‌, ಮೆಡಿಕಲ್ ಟ್ರಾನ್ಸ್‌ಕ್ರಿಪಷನ್‌, ಕ್ರಿಯೆಟಿವ್ ರೈಟಿಂಗ್‌, ಆ್ಯಕರಿಂಗ್‌, ಅಡ್‌ಮಿನಿಸ್ಟ್ರೇಷನ್‌, ಪಬ್ಲಿಕ್ ರಿಲೇಶನ್‌,  ವೆಬ್‌ ಡಿಸೈನಿಂಗ್‌ ಹೀಗೆ ಯಾವುದು ನೀವು ಮಾಡಬಲ್ಲಿರಿ ಅನ್ನುವುದನ್ನು ನಿರ್ಧರಿಸಿದರೆ, ಅದಕ್ಕೆ ತಕ್ಕ ತರಬೇತಿಯನ್ನು ಪಡೆಯಬಹುದು. ಡಿಸೈನಿಂಗ್‌ ಸೀರೆ ಮತ್ತು ಬ್ಲೌಸ್‌ಗಳನ್ನು ಮಾಡಲು ಬುಟಿಕ್‌ ತೆಗೆಯಬಹುದು. ಬ್ಲೌಸ್‌ನ ಎಕ್ಸ್‌ಪೋರ್ಟ್‌ ಮಾಡುವುದು ಸಹ ಒಂದು ದೊಡ್ಡ ಬಿಸಿನೆಸ್‌ ಆಗಿದೆ.

5. ನನ್ನ ಹೆಸರು ನಾಗರಾಜ್‌ ಈಳಗೇರ. ನಾನು 2010ರಲ್ಲಿ ಪದವಿ ಮುಗಿಸಿದ್ದೇನೆ. ಅನಾನುಕೂಲದ ಕಾರಣ ವೃತ್ತಿ ಶಿಕ್ಷಣವನ್ನು ಮುಂದುವರೆಸಲಿಲ್ಲ. ಸಧ್ಯ ನಾನು ಮದುವೆ ಆಗಿದ್ದೇನೆ. ಲಾಡ್ಜ್‌ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದೀನಿ. ನನಗೆ ಕೆಲಸದ ಜೊತೆಗೆ  ಓದನ್ನು ಮುಂದುವರೆಸಬೇಕೆಂಬ ಆಸಕ್ತಿ ಇದೆ. ಕವಿವಿಯಿಂದ ನಾನ್ ಸೆಮ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನಿಸಿದ್ದಾರೆ. ಅದಕ್ಕೆ ನಾನು ಎಂಎ ಇತಿಹಾಸ ಮಾಡಬೇಕು ಅಂದುಕೊಂಡಿದ್ದೇನೆ. ಈ ಕೋರ್ಸ್‌ನಿಂದ ನನಗೆ ಆಗುವ ಅನುಕೂಲಗಳೇನು? ಈ ವಿಭಾಗದಲ್ಲಿ ನನಗೆ ಉಪನ್ಯಾಸನಾಗುವ ಅವಕಾಶ ಇದೆಯಾ? ತಿಳಿಸಿ.

ಉತ್ತರ: ನೀವು ಡಿಗ್ರಿ ಪಡೆದು ಆಗಲೇ 7 ವರ್ಷವಾಯಿತು. ನಿಮ್ಮ ವಯಸ್ಸು 28 ಇರಬೇಕು. ಯಾವ ಕೋರ್ಸ್‌ಗೆ ಅಪ್ಲೈ ಮಾಡಿದರೂ, ನಿಮಗೆ ಏಜ್‌ ಲಿಮಿಟ್‌ ಇದೆಯಾ? ನೋಡಿಕೊಳ್ಳಿ.

ನಿಮಗೆ ಎಂಎ (ಹಿಸ್ಟರಿ) ಬಗ್ಗೆ ಆಸಕ್ತಿ ಹೇಗೆ ಬಂತು? ನಿಮ್ಮ ಬೇಸಿಕ್‌ ಪದವಿಯಲ್ಲಿ ಯಾವ ಸಬ್ಜೆಕ್ಟ್‌ ಓದಿದ್ದೀರಾ? ಎಂಎ (ಹಿಸ್ಟರಿ) ಮಾಡಿದರೆ ಎಲ್ಲಿ ಕೆಲಸ ಸಿಗುತ್ತದೆ ಅನ್ನುವುದನ್ನು ಯೋಚಿಸಬೇಕು. ಪಬ್ಲಿಕ್‌ ರಿಲೇಶನ್ಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಬಿಸನೆಸ್‌ ಆನಾಲಿಸ್ಟ್ ಆಗಿ, ಡಾಕ್ಯೂಮೆಂಟೇಶನ್‌ ಸ್ಪಷಲಿಸ್ಟ್‌, ಲೈಬ್ರರಿಯನ್‌, ರೀಸರ್ಚ್‌ ಅಸಿಸ್ಟೆಂಟ್‌, ಟೀಚರ್‌, ಎಡಿಟರ್‌ ಇನ್‌ ಜರ್ನಲಿಸ್ಟ್‌ ಹಲವಾರು ಕಡೆ ಕೆಲಸ ಮಾಡಬಹುದು. ಟೂರಿಸಂ, ಟೆಲಿವಿಶನ್‌, ಪ್ರಿಸರ್ವೇಶನ್ ಪಾಲಿಟಿಕ್ಸ್‌,  ಮ್ಯೂಸಿಯಮ್‌, ಹಿಸ್ಟಾರಿಕಲ್‌ ಪಾರ್ಕ್ಸ್‌ ಈ ಕ್ಷೇತ್ರದಲ್ಲೂ ಉದ್ಯೋಗ ಅವಕಾಶಗಳಿವೆ. ಪ್ರತಿ ಸ್ಟೇಟ್‌ನಲ್ಲೂ ಅವರದೇ ಆದ ಟೀಚರ್ ಎಬಿಲಿಟಿ ಟೆಸ್ಟ್‌ಗಳು ಇದೆ. ಕರ್ನಾಟಕದಲ್ಲಿ ಶಾಲೆಗಳಲ್ಲಿ ಟೀಚ್‌ ಮಾಡಲು ಕೆಟಿಇಟಿ ಟೆಸ್ಟ್‌ ಅನ್ನು ತೆಗೆದುಕೊಳ್ಳಿ (ಕರ್ನಾಟಕ ಟೀಚರ್‌ ಎಲಿಜಿಬಿಲಿಟಿ ಟೆಸ್ಟ್‌) ಯುಜಿಸಿಗಾಗಿ ಸಿಬಿಎಸ್‌ಇನವರು ಎನ್‌ಇಟಿ (ನ್ಯಾಶನಲ್‌ ಎಲಿಜಿಬಿಲಿಟಿ ಟೆಸ್ಟ್‌ ಅನ್ನು ಅಸಿಸ್ಟೆಂಟ್‌ ಪ್ರೊಫೆಸರ್‌, ಜ್ಯೂನಿಯರ್‌ ರಿಸರ್ಚ್‌ ಫೆಲೋಶಿಫ್‌, ಅಸಿಸ್ಟೆಂಟ್‌ ಪ್ರೊಫೆಸರ್‌ ಇನ್‌ ಇಂಡಿಯನ್‌ ಯೂನಿರ್ವಸಿಟಿಸ್‌ ಅಂಡ್‌ ಕಾಲೇಜಸ್‌ಗೆ ತೆಗೆದುಕೊಳ್ಳಬೇಕು.

ಹೆಚ್ಚಿನ ವಿವರವನ್ನು www.cbsenet.nic.inನಲ್ಲಿ ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT