ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಣ್ಣು ಚಂದ ಅಂತಾರೆ’

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

*ಮೈಸೂರಿನಲ್ಲಿ ಬಾರೀ ಓಡಾಡ್ತಿದ್ದೀರಿ?
ಜ್ಯುವೆಲ್ಸ್‌ ಆಫ್‌ ಇಂಡಿಯಾ ಆಭರಣ ಪ್ರದರ್ಶನ ಉದ್ಘಾಟಿಸಲು ಮೈಸೂರಿಗೆ ಹೋಗಿದ್ದೆ. ಒಂದೇ ಗಂಟೆ ಇದ್ದಿದ್ದು. ಎಲ್ಲಿಯೂ ಸುತ್ತಾಡಲು ಸಾಧ್ಯವಾಗಲಿಲ್ಲ. ಸಿನಿಮಾ ಚಿತ್ರೀಕರಣವಿದ್ದಾಗ ಬಸ್ ನಿಲ್ದಾಣ, ಅರಮನೆ, ಚಾಮುಂಡಿ ಬೆಟ್ಟ ನೋಡಿದ್ದೇನೆ.

*ಒಡವೆ ಖರೀದಿ ನಿಮಗೂ ಇಷ್ಟವೇ?
ಎಲ್ಲ ಹೆಣ್ಮಕ್ಕಳಿಗೂ ಇಷ್ಟ ಕಣ್ರೀ. ಮದುವೆ, ಸಮಾರಂಭ, ಹಬ್ಬದ ದಿನಗಳಲ್ಲಿ ಆಭರಣ ಹಾಕ್ಕೋಬೇಕು ಅನ್ಸುತ್ತೆ. ದುಡ್ಡಿದ್ದಾಗ ಒಡವೆ ತಗೊಂಡಿದ್ರೆ ಒಳ್ಳೇದು. ಕಷ್ಟಕಾಲಕ್ಕೆ ಸಹಾಯಕ್ಕೂ ಬರುತ್ತೆ.

*‘ಮಾಸ್‌ ಲೀಡರ್‌’ ಅನುಭವ ಹೇಗಿತ್ತು?
ಹೊಸದಾಗಿ ಸಿನಿಮಾಗೆ ಬರುವ ನಾಯಕರಂತೆ ಈಗಲೂ ಶಿವಣ್ಣ ಅವರ ಅಭಿನಯದಲ್ಲಿ ಎನರ್ಜಿ ಇದೆ. ನೃತ್ಯ, ಸಾಹಸ ದೃಶ್ಯಗಳಲ್ಲಿ ಅವರು ಈಗಿನ ನಾಯಕರು ನಾಚುವಂತೆ ನಟಿಸುತ್ತಾರೆ. ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾರೆ. ಉತ್ತಮ ಅನುಭವ ಕಟ್ಟಿಕೊಟ್ಟ ಸಿನಿಮಾ.

*ಮುಂದಿನ ಸಿನಿಮಾಗಳು?
ತಮಿಳಿನ ಎರಡು ಚಿತ್ರಗಳಿಗೆ ಸಹಿ ಹಾಕಿದ್ದೇನೆ. ಇನ್ನೂ ಹೆಸರಿಟ್ಟಿಲ್ಲ.

*ನಿಮ್ಮ ಕಣ್ಣುಗಳಿಗೆ ಬಹಳಷ್ಟು ಮಂದಿ ಅಭಿಮಾನಿಗಳಿದ್ದಾರಂತೆ...
ಹೌದು, ಸೋಷಿಯಲ್‌ ಮೀಡಿಯಾಗಳಲ್ಲೂ ಸ್ನೇಹಿತರು ಕಣ್ಣುಗಳ ಬಗ್ಗೆಯೇ ‘ಕಾಮೆಂಟ್‌’ ಮಾಡುತ್ತಾರೆ. ‘ಮಾಸ್‌ ಲೀಡರ್‌’ ಚಿತ್ರದಲ್ಲಿಯೂ ಕಾಕತಾಳೀಯ ಎಂಬಂತೆ ‘ದೀಪವೇ ನಿನ್ನ ಕಣ್ಣು’ ಎಂಬ ಹಾಡು ಇತ್ತು.

*ಚಿತ್ರೀಕರಣದಿಂದ ಬಿಡುವು ಸಿಕ್ಕಾಗ?
ಸುಮ್ಮನೇ ನಾನು ಎಲ್ಲೆಲ್ಲೋ ಸುತ್ತುವುದಿಲ್ಲ. ಬೆಂಗಳೂರಿನಲ್ಲಿ ಎರಡು ರೆಸ್ಟೊರೆಂಟ್‌ಗಳನ್ನು ನಡೆಸುತ್ತಿದ್ದೇನೆ. ಸ್ನೇಹಿತರು ನೋಡಿಕೊಳ್ಳುತ್ತಿದ್ದಾರೆ. ನನಗೂ ಉದ್ಯಮಿಯಾಗಬೇಕೆಂಬ ಒಲವಿದೆ.

*ನಿಮಗೆ ಇಷ್ಟವಾಗುವ ತಿನಿಸು?
ದಕ್ಷಿಣ ಭಾರತೀಯ ತಿನಿಸುಗಳೆಲ್ಲಾ ಇಷ್ಟ. ಅದರಲ್ಲೂ ಮಸಾಲೆ ದೋಸೆ, ಪಾಯಸ ಹಾಗೂ ಹಾಲಿನ ಸಿಹಿ ತಿನಿಸುಗಳು ತುಂಬಾ ಇಷ್ಟ.

*ಫಿಟ್‌ನೆಸ್‌ಗಾಗಿ ಡಯೆಟ್‌ ಮಾಡ್ತೀರಾ?
ಡಯೆಟ್‌ ಮಾಡೋದಿಲ್ಲ, ಸ್ವಲ್ಪ ವರ್ಕೌಟ್‌ ಮಾಡುತ್ತೇನೆ. ಬೆಳಿಗ್ಗೆ ಜಾಗಿಂಗ್‌, ನೃತ್ಯ ಅಭ್ಯಾಸವಿರುತ್ತದೆ.

*ದಸರಾ ನೋಡಿದ್ದೀರಾ?
ಚಿಕ್ಕವಳಿದ್ದಾಗ ಒಮ್ಮೆ ನೋಡಿದ್ದೆ. ಇದೇ ತಿಂಗಳು 29ಕ್ಕೆ ಮೈಸೂರಿಗೆ ಬರಬೇಕು ಅಂದ್ಕೊಂಡಿದ್ದೀನಿ.

* ಇತರ ಭಾಷೆಗಳ ಚಿತ್ರಗಳಿಗೂ ಕನ್ನಡ ಸಿನಿಮಾರಂಗದಲ್ಲಿ ಏನು ವ್ಯತ್ಯಾಸ ಗುರ್ತಿಸುತ್ತೀರಾ?
ಎಲ್ಲ ಭಾಷೆಗಳ ಚಿತ್ರರಂಗದಲ್ಲೂ ಬದ್ಧತೆ ಇದೆ. ಅಂಥ ವ್ಯತ್ಯಾಸ ಕಾಣುತ್ತಿಲ್ಲ. ಈಚೆಗಷ್ಟೇ ತೆಲುಗಿನ 'ಬ್ರಹ್ಮೋತ್ಸವಂ'ನಲ್ಲಿ ಅಭಿನಯಿಸಿದೆ. ಎಲ್ಲ ಭಾಷೆಯಲ್ಲೂ ಸಿನಿಮಾ ಚೆನ್ನಾಗಿ ಬರಬೇಕು ಅಂತ ಕಾಳಜಿ ತೆಗೆದುಕೊಳ್ತಾರೆ.

*ಇಷ್ಟು ಸಿನಿಮಾಗಳಲ್ಲಿ ನಿಮಗೆ ಅಭಿನಯಿಸಲು ಕಷ್ಟವಾದ ಪಾತ್ರ?
ಯಾವುದೂ ಕಷ್ಟವೆನಿಸಲಿಲ್ಲ, ಒಂದೊಂದು ಸೀನ್‌ ಕಷ್ಟವಾಗಬಹುದು ಅಷ್ಟೇ.

*ಯಾವ ಪಾತ್ರ ಮಾಡುವುದು ಬಾಕಿ ಇದೆ?
ಬಾಹುಬಲಿಯಂಥ ಸಿನಿಮಾಗಳಲ್ಲಿ ಅಭಿನಯಿಸುವ ಆಸೆಯಿದೆ, ಅವಕಾಶಕ್ಕಾಗಿ ಕಾಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT