ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾದಿ ತಪ್ಪುತ್ತಿರುವ ಸುದ್ದಿಗಳು

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಆದಾಗಿನಿಂದ ಪತ್ರಿಕೆಗಳನ್ನು ಓದಲು, ಸುದ್ದಿ ವಾಹಿನಿಗಳನ್ನು ನೋಡಲು ಬೇಸರವಾಗುತ್ತಿದೆ. ಮೂಲ ಸುದ್ದಿಯನ್ನು ಬಿಟ್ಟು ವಿಷಯಗಳು ಎತ್ತೆತ್ತಲೋ ಹರಿದಾಡುತ್ತಿವೆ.

ಹತ್ಯೆಯ ವಿಷಯದಲ್ಲಿ ಎಡಪಂಥೀಯ– ಬಲಪಂಥೀಯ ಎಂಬ ವಾಗ್ವಾದ, ಕಾಂಗ್ರೆಸ್– ಬಿಜೆಪಿ ತಿಕ್ಕಾಟಗಳು ಸರಿಯೇ? ಇದು ಸೂಕ್ತ ಸಮಯವೇ? ಇದನ್ನೆಲ್ಲಾ ಗಮನಿಸುತ್ತಿದ್ದರೆ, ಪೊಲೀಸರನ್ನು ಬಿಟ್ಟು ಉಳಿದೆಲ್ಲ ಸಂಘಟನೆಗಳೂ ‘ಇಂಥವರೇ ಹಂತಕರು’ ಎಂದು ಸ್ಪಷ್ಟ ನಿರ್ಧಾರಕ್ಕೆ ಬಂದಂತಿವೆ. ಇವರೆಲ್ಲರ ಮಾತು, ಹೇಳಿಕೆಗಳು ತನಿಖೆಯ ದಾರಿ ತಪ್ಪಿಸುತ್ತವೆ ಎಂಬುದನ್ನು ನಾವು ಮರೆಯಬಾರದು.

ಬೆಂಗಳೂರಿನಲ್ಲಿ ಈಚೆಗೆ ನಡೆದ ‘ನಾನೂ ಗೌರಿ’ ಸಮಾವೇಶದಲ್ಲಂತೂ ಎಲ್ಲರೂ ಗೌರಿ ಅವರ ಹತ್ಯೆಯನ್ನು ಖಂಡಿಸಿ, ನೈಜ ಹಂತಕರ ಪತ್ತೆಗೆ ಆಗ್ರಹಿಸುವ ಬದಲಾಗಿ ಬಲಪಂಥೀಯರು ಮತ್ತು ಆರ್‌ಎಸ್ಎಸ್‌ನವರನ್ನು ಹೀಗಳೆಯಲು ಪೈಪೋಟಿಗೆ ನಿಂತಿದ್ದರು.

ಪ್ರತ್ಯೇಕ ಧರ್ಮದ ವಿಚಾರವೂ ಅಷ್ಟೇ. ಜಗಳವು ವಾಕರಿಕೆ ತರಿಸುವಷ್ಟು ಬೆಳೆಯುತ್ತಿದೆ. ರಾಜಕೀಯ ಆಸಕ್ತಿ ಇರುವ ಧಾರ್ಮಿಕ ಮುಖಂಡರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಆದರೆ ಸಿದ್ಧಗಂಗಾ ಶ್ರೀಗಳನ್ನು ಮಾತ್ರ ಈ ರಾಜಕೀಯಕ್ಕೆ ಎಳೆದು ತರಬಾರದು.
–ಕೊಟ್ರೇಶ ಹಿರೇಮಠ, ಗೋವೇರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT