ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tez ಪೇಮೆಂಟ್‌ ಆ್ಯಪ್‌ ಬಳಕೆ ಹೇಗೆ?

Last Updated 18 ಸೆಪ್ಟೆಂಬರ್ 2017, 11:59 IST
ಅಕ್ಷರ ಗಾತ್ರ

ಬೆಂಗಳೂರು: ಗೂಗಲ್‌ ಪ್ಲೇ ಅಲ್ಲಿ Tez ಆ್ಯಪ್‌ ಉಚಿತ ಡೌನ್‌ಲೋಡ್‌ಗೆ ಲಭ್ಯವಿದೆ. ಆ್ಯಪ್‌ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಆಗುತ್ತಿದ್ದಂತೆ ಭಾಷೆ ಆಯ್ಕೆಗೆ ಅವಕಾಶವಿದೆ.

ಹಂತ 1: ಕನ್ನಡ, ಇಂಗ್ಲಿಷ್‌, ಹಿಂದಿ, ಬೆಂಗಾಲಿ, ಗುಜರಾತಿ, ಮರಾಠಿ, ತೆಲುಗು ಹಾಗೂ ತಮಿಳು ಸೇರಿ ಎಂಟು ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿ ಮುಂದುವರಿಯಬೇಕು.

ಹಂತ 2: ಬಳಕೆಯಲ್ಲಿರುವ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. ಆ ಸಂಖ್ಯೆಯು ಬ್ಯಾಂಕ್‌ ಖಾತೆಯೊಂದಿಗೆ ಸಂಪರ್ಕಿಸಿರಬೇಕು.

ಹಂತ 3: ನಿಮ್ಮ ಮೊಬೈಲ್‌ ಸಂಪರ್ಕ ಸಂಖ್ಯೆಗಳು, ಸಂದೇಶ ಹಾಗೂ ಸ್ಥಳದ ಮಾಹಿತಿ ಗಮನಿಸಲು ಅವಕಾಶ ಕೇಳುತ್ತದೆ.

ಹಂತ 4: ಜಿಮೇಲ್‌ನ ಐಡಿ ಹಾಗೂ ಹೆಸರು ಕಾಣುವ ಜತೆಗೆ ಸೇವೆ ಮತ್ತು ಖಾಸಗಿ ನಿಯಮಗಳಿಗೆ ಒಪ್ಪಿಗೆ ಕೇಳುತ್ತದೆ. ಸಮ್ಮತಿಸಿದ ನಂತರ ಮೊಬೈಲ್‌ಗೆ ಒಟಿಪಿ ರವಾನೆಯಾಗುತ್ತದೆ.

ಹಂತ 5: ಹಣ ವರ್ಗಾವಣೆಯಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಪ್ಯಾಟ್ರನ್‌ ಲಾಕ್‌ ಕೇಳುತ್ತದೆ.

ಹಂತ 6: ಹಲವು ರೀತಿಯಲ್ಲಿ ಹಣ ವರ್ಗಾವಣೆ ಸಾಧ್ಯ:

* ಮೊಬೈಲ್‌ ಅಥವಾ ಬ್ಯಾಂಕ್‌ ಖಾತೆ ಸಂಖ್ಯೆ ಬಳಸಿ ಹಣ ವರ್ಗಾವಣೆ

* ಸಮೀಪದ ಮೊಬೈಲ್‌ ಫೋನ್‌ ಜತೆಗೆ ಸಂಪರ್ಕ ಸಾಧಿಸಿ ಸುಲಭವಾಗಿ ಹಣ ವರ್ಗಾವಣೆ. ಫೋನ್‌ನ ಮೈಕ್ರೋಫೋನ್‌ ಮತ್ತು ಸ್ಪೀಕರ್‌ ಮುಖೇನ ಅಲ್ಟ್ರಾಸೌಂಡ್‌ ಕಿರಣಗಳನ್ನು ಬಳಸಿ ಹತ್ತಿರದ ಫೋನ್‌ ಜತೆ ಸಂಪರ್ಕ ಸಾಧಿಸುತ್ತದೆ. 

* ಹಲವು ಬ್ಯಾಂಕ್‌ ಖಾತೆಗಳ ಸಂಖ್ಯೆ ನಮೂದಿಸಿ ವಹಿವಾಟು ನಡೆಸಲು ಅವಕಾಶ

ಬಳಸಿ ಬಹುಮಾನ ಗೆಲ್ಲಿ:

ಆ್ಯಪ್‌ನಲ್ಲಿನ ತೇಜ್‌ ಸ್ಕ್ರಾಚ್‌ ಕಾರ್ಡ್‌ನಿಂದ ಪ್ರತಿ ವಹಿವಾಟಿನ ಮೇಲೆ ₹1000 ಬಹುಮಾನ ಗೆಲ್ಲಬಹುದಾಗಿದೆ. ಪ್ರತಿ ಭಾನುವಾರ ನಡೆಯುವ ವಿಶೇಷ ಸ್ಪರ್ಧೆಯಲ್ಲಿ ₹1 ಲಕ್ಷದವರೆಗೂ ಗೆಲ್ಲುವ ಅವಕಾಶವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT