ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಬ್ಯಾಂಕಿನಲ್ಲಿ ಬೆಂಕಿ ಆಕಸ್ಮಿಕ

Last Updated 18 ಸೆಪ್ಟೆಂಬರ್ 2017, 15:47 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ರೋಟರಿ ವೃತ್ತದಲ್ಲಿರುವ ಓರಿಯಂಟಲ್‌ ಬ್ಯಾಂಕ್ ಆಫ್ ಕಾಮರ್ಸ್ ಶಾಖೆಯಲ್ಲಿ ಸೋಮವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ.

ಬ್ಯಾಂಕಿನ ಒಳಗೆ ಇದ್ದ ಕಡತಗಳು ಹಾಗು ಹವಾನಿಯಂತ್ರಿತ ಯಂತ್ರಗಳು ಹಾಗೂ ಕಂಪ್ಯೂಟರ್ ಸುಟ್ಟಿವೆ. ಆದರೆ, ಹಣ ಇಡಲಾಗಿದ್ದ ಸ್ಟ್ರಾಂಗ್ ರೂಮಿಗೆ ಯಾವುದೇ ಹಾನಿ ಆಗಿಲ್ಲ.

ಕೆಲಸದ ಅವಧಿ ಮುಕ್ತಾಯದ ಬಳಿಕ ಬ್ಯಾಂಕಿನ ಸಿಬ್ಬಂದಿ ಬೀಗ ಹಾಕಿ ತೆರಳಿದ್ದರು. ಅದಾದ ಕೆಲ ಹೊತ್ತಿನಲ್ಲಿ ಒಳಗಿನಿಂದ ಹೊಗೆ ಬರುತ್ತಿರುವುದನ್ನು ಅರಿತ ಭದ್ರತಾ ಸಿಬ್ಬಂದಿಯು ಬ್ಯಾಂಕಿನ ವ್ಯವಸ್ಥಾಪಕರಿಗೆ ಸುದ್ದಿ ಮುಟ್ಟಿಸಿದರು‌. ಸಿಬ್ಬಂದಿ‌ ಬೀಗ ತೆರೆದು ನೋಡುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಐಜೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT