ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬನಿ ತಬ್ಬಿದ ಕೀಟಲೋಕ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕೆಲವು ಕೀಟಗಳು ಹಗಲಿನಲ್ಲಿ ಚುರುಕಾಗಿದ್ದರೆ ಇನ್ನು ಕೆಲವು ರಾತ್ರಿ ವೇಳೆ ಚಟುವಟಿಕೆಯಲ್ಲಿರುತ್ತವೆ. ಕೆಲಸ ಇಲ್ಲ ಎಂದಾದರೆ ಅವು ವಿಶ್ರಾಂತಿ ಪಡೆಯುತ್ತವೆ. ಇವು ಮನುಷ್ಯರ ರೀತಿಯಲ್ಲಿ ನಿದ್ದೆ ಮಾಡುವುದಿಲ್ಲ. ವಿಶ್ರಾಂತಿ ಪಡೆಯುವಾಗ ಟಾರ್ಪಾರ್‌ (torpor) ಎನ್ನುವ ಸ್ಥಿತಿಯಲ್ಲಿರುತ್ತವೆ. ಈ ಸಂದರ್ಭದಲ್ಲಿ ಕೀಟಗಳು ಹೊರಗಿನ ಯಾವುದೇ ಪ್ರಚೋದನೆಗಳಿಗೂ ಪ್ರತಿಕ್ರಿಯೆ ನೀಡುವುದಿಲ್ಲ.

ಇವೆಲ್ಲವನ್ನು ಅರಿತಿದ್ದ ಪೋಲೆಂಡ್‌ನ ಫಿಸಿಯೊಥೆರಪಿಸ್ಟ್‌ ಮಿರೊಸ್ಲಾ ಸ್ವೀತೆಕ್‌ ನಿದ್ದೆಗೆ ಜಾರಿದ ಕೆಲ ಕೀಟಗಳ ಅದ್ಭುತವಾದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಅವರು ತೆಗೆದ ‘ಸ್ಲೀಪಿಂಗ್‌ ಇನ್‌ಸೆಕ್ಟ್ಸ್‌’ ಸರಣಿ ಕೀಟಪ್ರಪಂಚದ ಹೊಸ ಲೋಕವನ್ನೇ ತೆರೆಯಿತು. ನೀರಿನ ಹನಿಯಿಂದ ಆವೃತವಾದ ಕೀಟಗಳು ವಜ್ರದ ಹರಳುಗಳಂತೆ ಚಿತ್ರಗಳಲ್ಲಿ ಮೂಡಿಬಂದಿವೆ. ತಾನು ಸೆರೆಹಿಡಿದ ಚಿತ್ರಗಳನ್ನು ಕಂಡು ಸ್ವತಃ ಮಿರೊಸ್ಲಾ ಕೂಡ ಅಂದು ಆಶ್ಚರ್ಯಗೊಂಡಿದ್ದ.ಅಷ್ಟು ಸೊಗಸಾಗಿವೆ ಇಬ್ಬನಿ ತಬ್ಬಿದ ಕೀಟಗಳ ನೋಟ.

ಕೀಟಗಳು ನಸುಕಿನ 3ರಿಂದ 4 ಗಂಟೆ ಅವಧಿಯಲ್ಲಿ ನಿದ್ದೆಯ ಜೋಂಪಿನಲ್ಲಿರುತ್ತವೆ. ಅವುಗಳ ಜೀವನ ಕ್ರಮದ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ್ದ ಮಿರೊಸ್ಲಾ ಇದೇ ಸಮಯವನ್ನು ತನ್ನ ಛಾಯಾಗ್ರಹಣಕ್ಕೆ ಬಳಸಿಕೊಂಡರು. ಅತಿ ಹತ್ತಿರದ (ಎಕ್ಸ್ಟ್ರೀಂ ಕ್ಲೋಸ್‌ ಅಪ್‌) ಮೋಡ್‌ ಹಾಗೂ ಮ್ಯಾಕ್ರೂ ಛಾಯಾಗ್ರಹಣದಲ್ಲಿ ತೆಗೆದ ಈ ಚಿತ್ರಗಳು ಕೀಟ ಜಗತ್ತಿನ ವಿಸ್ಮಯವನ್ನು ಅನಾವರಣಗೊಳಿಸುವಂತಿದೆ.

ಇನ್ನಷ್ಟು ಚಿತ್ರ ವೀಕ್ಷಿಸಲು – http://bit.ly/2gBSud5 ಕೊಂಡಿ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT