ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪ್ಪೀನ್ಸ್‌: ಐಎಸ್‌ ಉಗ್ರರ ಒತ್ತೆಯಲ್ಲಿದ್ದ ಕ್ರೈಸ್ತ ಧರ್ಮಗುರು ರಕ್ಷಣೆ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮನಿಲಾ: ಫಿಲಿಪ್ಪೀನ್ಸ್‌ನ ದಕ್ಷಿಣ ಮರಾವಿ ನಗರದಲ್ಲಿ ಐಎಸ್ ಉಗ್ರರ ಒತ್ತೆಸೆರೆಯಲ್ಲಿದ್ದ ಕ್ರೈಸ್ತ ಧರ್ಮಗುರುವೊಬ್ಬರನ್ನು ಸೇನೆ ರಕ್ಷಣೆ ಮಾಡಿದೆ.

‘ಉಗ್ರರ ಹಿಡಿತದಲ್ಲಿದ್ದ ನಗರವನ್ನು ಶನಿವಾರ ಮರುವಶಪಡಿಸಿಕೊಂಡಿದ್ದು, ಈ ವೇಳೆ ಕೆಥೋಲಿಕ್‌ ಧರ್ಮಗುರು ತೆರೇಸಿಟೊ ಸುಗನಾಬ್‌ ಅವರನ್ನು ರಕ್ಷಣೆ ಮಾಡಲಾಗಿದೆ’ ಎಂದು ಸೇನೆ ಹೇಳಿದೆ.

‘ಶಿಕ್ಷಕರು, ಬಡಗಿಗಳು ಸೇರಿದಂತೆ 240 ಮಂದಿಯನ್ನು ಉಗ್ರರು ಒತ್ತೆಸೆರೆಯಲ್ಲಿರಿಸಿದ್ದರು. ಒತ್ತೆಯಾಳುಗಳನ್ನು ಗುಲಾಮರಂತೆ ಕೆಲಸ ಮಾಡಲು ಒತ್ತಾಯಿಸುತ್ತಿದ್ದರು’ ಎಂದು ತೆರೇಸಿಟೊ ಹೇಳಿದ್ದಾರೆ.

ಮೇ 23ರಂದು ಮರಾವಿ ನಗರವನ್ನು  ವಶಪಡಿಸಿಕೊಂಡ ಐಎಸ್‌ ಉಗ್ರರು ತೆರೇಸಿಟೊ ಹಾಗೂ ಇತರ 13 ಮಂದಿಯನ್ನು ಚರ್ಚೊಂದರಿಂದ ಅಪಹರಿಸಿದ್ದರು.

ಅನಂತರ ಚರ್ಚ್‌ ಅನ್ನು ಧ್ವಂಸ ಮಾಡುವ ವಿಡಿಯೊ ದೃಶ್ಯಾವಳಿಯನ್ನು ಉಗ್ರರು ಬಿಡುಗಡೆ ಮಾಡಿದ್ದರು.

ಮರಾವಿ ನಗರದಿಂದ ಸೇನೆಯನ್ನು ವಾಪಸ್‌ ಪಡೆಯುವಂತೆ ತೆರೇಸಿಟೊ ಅವರು ಫಿಲಿಪ್ಪೀನ್ಸ್‌ ಅಧ್ಯಕ್ಷ  ರೊಡ್ರಿಗೊ ಡುಟೆರ್ಟೆ ಅವರಲ್ಲಿ ಮನವಿ ಮಾಡಿಕೊಳ್ಳುವ ವಿಡಿಯೊ ದೃಶ್ಯಾವಳಿಯನ್ನೂ ಉಗ್ರರು ಬಿಡುಗಡೆ ಮಾಡಿದ್ದರು.

‘ಮರಾವಿ ನಗರವನ್ನು ವಶಪಡಿಸಿಕೊಳ್ಳಲು ನಡೆದ ಹೋರಾಟದಲ್ಲಿ 673 ಉಗ್ರರು, 47 ನಾಗರಿಕರು ಹಾಗೂ 149 ಸೈನಿಕರು ಮೃತಪಟ್ಟಿದ್ದಾರೆ’ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT