ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಹಾಸಿನ ಮೇಲೆ ವಿರಮಿಸಿದ ದೋನಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಚಿತ್ರ
Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಭಾರತ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ದೋನಿ ಅವರು ಸೋಮವಾರ ಚೆನ್ನೈ ವಿಮಾನ ನಿಲ್ದಾಣದ ಮರದ ನೆಲ ಹಾಸಿನ ಮೇಲೆ ಮಲಗಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶ್ವೇತ ವರ್ಣದ ಟಿ ಶರ್ಟ್‌ ಮತ್ತು ಸನ್‌ ಗ್ಲಾಸ್‌ ಹಾಕಿಕೊಂಡಿರುವ ಮಹಿ, ತಲೆಯ ಕೆಳಗೆ ಸಣ್ಣ ಬ್ಯಾಗ್‌ ಇಟ್ಟುಕೊಂಡು ವಿಶ್ರಾಂತಿ ಪಡೆಯುತ್ತಿದ್ದರೆ, ನಾಯಕ ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌. ರಾಹುಲ್‌ ಅವರು ಮಹಿ ಅವರ ಸುತ್ತಲೂ ಕುಳಿತಿದ್ದಾರೆ.

ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿರುವ ಕರ್ನಾಟಕದ ರಾಹುಲ್‌ ’ತಂಡದೊಂದಿಗಿನ ಪ್ರಯಾಣದ ಕ್ಷಣಗಳು ಹೀಗೂ ಇರುತ್ತವೆ’ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು 2,778 ಮಂದಿ ಮೆಚ್ಚಿದ್ದು, 265 ಮಂದಿ ಟ್ವೀಟ್‌ ಮಾಡಿದ್ದಾರೆ.

‘ಕೊಹ್ಲಿ ಮತ್ತು ದೋನಿ ಅವರು ಬಾಲಿವುಡ್‌ ನಟರ ಹಾಗೆ ಕಾಣಿಸುತ್ತಿದ್ದಾರೆ’ ಎಂದು ಅಭಿಮಾನಿಯೊಬ್ಬ ಟ್ವೀಟ್‌ ಮಾಡಿದ್ದಾನೆ.

‘ದೋನಿಯ ಸರಳತೆಗೆ ಈ ಚಿತ್ರ ಸಾಕ್ಷಿ’ ಎಂದು ಅಭಿಷೇಕ್‌ ಎಂಬುವವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ ಗೆಲುವು ಒಲಿಸಿಕೊಂಡಿತ್ತು. ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಎರಡನೇ ಏಕದಿನ ಪಂದ್ಯ ನಿಗದಿಯಾಗಿದೆ. ಹೀಗಾಗಿ ತಂಡದ ಆಟಗಾರರು ಸೋಮವಾರ ಕೋಲ್ಕತ್ತಕ್ಕೆ ಪ್ರಯಾಣ ಬೆಳೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT