ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಂಗ್‌ ಕಯಾಂಗ್‌ಗೆ ಜಯ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಟೋಕಿಯೊ: ಪ್ರಬಲ ಎದುರಾಳಿ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಚ್ ಅವರನ್ನು ಮಣಿಸಿದ ಚೀನಾದ ವಾಂಗ್ ಕಯಾಂಗ್‌ ಅವರು ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಭರ್ಜರಿ ಆರಂಭ ಕಂಡರು. ಕೇವಲ 48 ನಿಮಿಷಗಳಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ ವಾಂಗ್‌ 6–0, 6–0ಯಿಂದ ಗೆದ್ದು ಬೀಗಿದರು.

ಯು.ಎಸ್.ಓಪನ್‌, ಸಿನ್ಸಿನಾಟಿ ಓಪನ್‌ ಮತ್ತು ಕೆನಡಾ ಓಪನ್‌ನಲ್ಲೂ ಕ್ರಿಸ್ಟಿನಾ ಇದೇ ರೀತಿ ಮೊದಲ ಸುತ್ತಿನಲ್ಲೇ ಸೋಲು ಕಂಡು ಮರಳಿದ್ದರು.

ವಿಶ್ವದ ಮಾಜಿ ಅಗ್ರ ಕ್ರಮಾಂಕದ ಆಟಗಾರ್ತಿ, ಜರ್ಮನಿಯ ಏಂಜೆಲಿಕ್ ಕೆರ್ಬರ್‌ ಕಳೆದ ಬಾರಿಯ ರನ್ನರ್ ಅಪ್‌ ನವೊಮಿ ಒಸಾಕ ಅವರನ್ನು 6–3, 6–4ರಲ್ಲಿ ಮಣಿಸಿದರು. ಯು.ಎಸ್.ಓಪನ್‌ನಲ್ಲಿ ಕೆರ್ಬರ್‌ ಅವರನ್ನು ನವೊಮಿ ಮೊದಲ ಸುತ್ತಿನಲ್ಲೇ ಮಣಿಸಿದ್ದರು.

‘ನವೊಮಿ ಅವರನ್ನು ಮಣಿಸು ವುದು ಸುಲಭದ ಕೆಲಸವಲ್ಲ. ಆದರೂ ಗೆಲುವು ಸಾಧಿಸಿರುವುದು ಖುಷಿ ತಂದಿದೆ’ ಎಂದು ಕೆರ್ಬರ್‌ ವಿಶ್ವ ಟೆನಿಸ್‌ ಸಂಸ್ಥೆಯ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಕಳೆದ ಬಾರಿಯಂತೆ ನಿರಾಸೆ ಆಗಬಾರದು. ಆದ್ದರಿಂದ ಇಲ್ಲಿ ಪ್ರತಿಯೊಂದು ಪಾಯಿಂಟ್ ಬಗ್ಗೆಯೂ ಗಮನ ನೀಡುತ್ತೇನೆ. ನವೊಮಿ ಅವರು ಉತ್ತಮ ಪ್ರತಿಸ್ಪರ್ಧಿ. ಅವರಿಗೆ ಒಳ್ಳೆಯ ಭವಿಷ್ಯ ಇದೆ’ ಎಂದು ಕೆರ್ಬರ್ ಹೇಳಿದ್ದಾರೆ.

ಮುಂದಿನ ಸುತ್ತಿನಲ್ಲಿ ಅವರು ಅಮೆರಿಕದ ಮ್ಯಾಡಿಸನ್‌ ಬ್ರೆಂಗಲ್‌ ಅಥವಾ ರಷ್ಯಾದ ಡಾರಿಯಾ ಕಸಟ್ಕಿನಾ ಅವರನ್ನು ಎದುರಿಸುವರು.

ಸ್ಥಳೀಯ ಆಟಗಾರ್ತಿ ಕುರುಮಿ ನರಾ ಕಜಕಸ್ತಾನದ ಯೂಲಿಯಾ ಪುಟಿನ್ಸೆವಾ ಎದುರು 2–6, 6–4, 6–2ರಿಂದ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT