ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಚಕ್ರವರ್ತಿ ರನ್ನನ ಸಾಹಿತ್ಯ ಎಲ್ಲೆಡೆ ಪಸರಿಸಲಿ

Last Updated 19 ಸೆಪ್ಟೆಂಬರ್ 2017, 5:35 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸಾಹಿತ್ಯಕ್ಕೆ ಕವಿ ರನ್ನ ನೀಡಿದ ಕೊಡುಗೆ ಬೆಲೆಕಟ್ಟಲಾಗದ ನಿಧಿ ಯಂತೆ’ ಎಂದು ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಅಭಿಪ್ರಾಯಪಟ್ಟರು. ನವನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರನ್ನ ಪ್ರತಿಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕವಿ ಶ್ರೇಷ್ಠರಲ್ಲಿ ಒಬ್ಬರಾದ ರನ್ನ ಜಿಲ್ಲೆಯ ಮುಧೋಳದವರು ಎಂದು ಹೇಳಿಕೊಳ್ಳು ವುದಕ್ಕೆ ತುಂಬಾ ಹೆಮ್ಮೆಯಾಗುತ್ತದೆ’ ಎಂದು ಹೇಳಿದರು.

ರನ್ನನ ಸಾಹಿತ್ಯವನ್ನು ಎಲ್ಲೆಡೆ ಪಸ ರಿಸಲು ಸರ್ಕಾರ ರನ್ನ ಪ್ರತಿಷ್ಠಾನ ರಚಿ ಸಿದೆ. ಅದಕ್ಕಾಗಿ ಪ್ರತಿ ವರ್ಷ ಅನುದಾನ ನೀಡುತ್ತಿದೆ. ಕ್ರೀಯಾಶೀಲ ಚಟುವಟಿಕೆ ರೂಪಿಸುವ ಕಾರ್ಯವಾಗಬೇಕು. ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕಾರ್ಯಕ್ರಮ ಹಮ್ಮಿಕೊಳ್ಳದೇ ಬೇರೆ ಜಿಲ್ಲೆಗಳಲ್ಲಿಯೂ ಹಮ್ಮಿಕೊಳ್ಳುವಂತೆ ಸಮಿತಿ ಸದಸ್ಯರಿಗೆ ತಿಳಿಸಿದರು.

ಸಮಿತಿಯ ಸದಸ್ಯ ಇಬ್ರಾಹಿಂ ಸುತಾರ ಮಾತನಾಡಿ, ರನ್ನನ ಸಾಹಿತ್ಯ ಕೃತಿಗಳಿಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ. ಮುಧೋಳ ಹಾಗೂ ಜಮಖಂಡಿ ಭಾಗದಲ್ಲಿ ತತ್ವಪದ ಹಾಡುವ ತಂಡಗಳ ಮೂಲಕ ಪ್ರಚಾರ ಮಾಡುವ ಅಗತ್ಯ ವಿದೆ. ಗೋಷ್ಠಿಗಳನ್ನು ಸಹ ಏರ್ಪಡಿಸ ಬೇಕು ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕ್ರಿಯಾ ಯೋಜನೆ ರೂಪಿಸಿ ಅನುಮತಿ ಪಡೆದು ಕಾರ್ಯಕ್ರಮ ಅನುಷ್ಠಾನಗೊಳಿಸಿ ಎಂದು ತಿಳಿಸಿದರು.

ರೂಪಕ ಹಾಗೂ ತತ್ವಪದ ಹಾಡುವ ಕಲಾತಂಡಗಳ ರಚನೆ ಮಾಡಿ ಅವರಿಗೆ ಸೂಕ್ತ ಸೂಕ್ತ ಬಹುಮಾನ ನೀಡಬೇಕು. ಗೋಷ್ಠಿಗಳು ಗ್ರಂಥ ಭಾಷೆಯಲ್ಲಿ ತಿಳಿಯುವುದಿಲ್ಲ. ಗ್ರಾಮೀಣ ಭಾಷೆಯಲ್ಲಿ ಹೇಳುವ ಕೆಲಸವಾಗಬೇಕು. ಹಾಗಾಗಿ ಈ ಕುರಿತು ಶಿಬಿರ ಹಮ್ಮಿಕೊಳ್ಳುವಂತೆ ಮೇಘಣ್ಣವರ ತಿಳಿಸಿದರು.

ಪ್ರತಿಷ್ಠಾನದ ಮೂಲಕ ರೂಪಿಸಿದ ಕಾರ್ಯಕ್ರಮದ ಕ್ರಿಯಾ ಯೋಜನೆ ಗಳನ್ನು ಕಾರ್ಯರೂಪದಲ್ಲಿ ತರುವ ಕೆಲಸ ವಾಗಬೇಕು. ಮರು ಮುದ್ರಣ ಮಾಡಿ ಸಿದ ಪುಸ್ತಕಗಳನ್ನು ರನ್ನ ಭೂಮಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡ ರೂಪು ರೇಷೆಗಳ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಬೇಕು ಎಂದು  ಹೇಳಿದರು.

ರನ್ನನ ಕುರಿತಾದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಬೇಕು. ಕಾರ್ಯಕ್ರಮ ಅನುಷ್ಠಾನಕ್ಕೆ ನೆರವಾಗುವ ನಿಟ್ಟಿನಲ್ಲಿ ಮುಧೋಳ ತಾಲ್ಲೂಕಿನ ಸೋಮಣ್ಣವರನ್ನು ಸದಸ್ಯ ಸಂಚಾಲಕ ಎಂದು ನೇಮಿಸಿಕೊಳ್ಳಲು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿತು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ ಸೇರಿದಂತೆ ರನ್ನ ಪ್ರತಿಷ್ಠಾನದ ಸದಸ್ಯರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT