ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದ ಏಳಿಗೆಗೆ ಕೊಡುಗೆ ನೀಡಲಿ

Last Updated 19 ಸೆಪ್ಟೆಂಬರ್ 2017, 5:39 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲಾ ರಡ್ಡಿ ನೌಕರರ ಪತ್ತಿನ ಸಹಕಾರ ಸಂಘ ಆರ್ಥಿಕ ವ್ಯವಹಾರದ ಜೊತೆ ಸಮುದಾಯದ ಏಳಿಗೆಗೂ ತನ್ನದೇ ಆದ ಕೊಡುಗೆ ನೀಡಬೇಕು ಎಂದು ಮಾಜಿ ಶಾಸಕ ಪಿ.ಎಚ್.ಪೂಜಾರ ಸಲಹೆ ನೀಡಿದರು. ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ರಡ್ಡಿ ನೌಕರರ ಪತ್ತಿನ ಸಹಕಾರ ಸಂಘದ ದ್ವಿತೀಯ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಸ್ಥಾಪನೆಯಾದ ಎರಡೇ ವರ್ಷದಲ್ಲಿ ಸಂಘ ಉತ್ತಮ ಸಾಧನೆ ಮಾಡಿರುವುದು ಗಮನಾರ್ಹ ಸಾಧನೆ ಎಂದರು.

ಸಹಕಾರ ಸಂಘಗಳ ಯಶಸ್ವಿಗೆ ಅದರ ಸದಸ್ಯರು, ನಿರ್ದೇಶಕ ಮಂಡ ಳಿಯ ಸಹಕಾರ ಅತ್ಯಂತ ಮಹತ್ವದ್ದಾಗಿ ರುತ್ತದೆ. ರಡ್ಡಿ ನೌಕರರ ಪತ್ತಿನ ಸಹಕಾರ ಸಂಘ ಸಮಾಜದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಬೇಕು ಎಂದರು.

ಬೀಳಗಿಯ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಎನ್. ಪಾಟೀಲ ಮಾತನಾಡಿ, ಸಂಘವು ವೇಮನಾನಂದ ಸ್ವಾಮೀಜಿ ಸಮ್ಮುಖ ದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಹಮ್ಮಿ ಕೊಳ್ಳುವ ಮೂಲಕ ಯುವಶಕ್ತಿಯನ್ನು ಸರಿದಾರಿಯಲ್ಲಿ ತರುವ ಕಾರ್ಯ ಮಾಡಬೇಕು ಎಂದರು.

ಸಂಘದ ಅಧ್ಯಕ್ಷ ಎಸ್.ಬಿ.ಮಾಚಾ ವಾರ್ಷಿಕ ವರದಿ ಮಂಡಿಸಿ ಸಂಘದ ಬೆಳವಣಿಗೆ, ಆರ್ಥಿಕ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬಹುದಾದ ಯೋಜನೆಗಳ ಕುರಿತು ಮಾಹಿತಿ ನೀಡಿ ದರು. ಹೇಮ-ವೇಮನ ಸದ್ಬೋಧನ ಪೀಠದ ಕಾರ್ಯಾಧ್ಯಕ್ಷ ಡಾ.ಶಿವಣ್ಣ ಅಮಾತೆಪ್ಪನವರ, ಲೆಕ್ಕಪರಿಶೋಧಕ ಕೆ.ಬಿ.ಕರಂಡಿ ಮಾತನಾಡಿದರು.

ಎರೆಹೊಸಳ್ಳಿಯ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವ ಯಾಧಿಕಾರಿ ಬಿ.ವಿ.ಪಾಟೀಲ, ಸಂಘದ ಉಪಾಧ್ಯಕ್ಷ ಎಂ.ಜಿ.ಮೇಟಿ, ಎಸ್.ಆರ್. ಪಾಟೀಲ, ವಿದ್ಯಾಗಿರಿ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ಉಪಾಧ್ಯಕ್ಷೆ ಪಾಟೀಲ, ನಿರ್ದೇಶಕರಾದ ಪ್ರೇಮಾ ನಾರಪ್ಪನವರ, ಗೀತಾ ಗಿರಿಜಾ, ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಸ್.ನಾಲತ್ತವಾಡ, ಎಚ್.ಎಸ್. ಪಾಟೀಲ, ಎಂ.ಎ.ಮಾಗಿ, ಎಸ್.ಪಿ. ನಿಂಗನಗೌಡರ, ಎ.ಪಿ.ಮೇಟಿ, ಕೆ.ಜಿ. ವಜ್ಜರಮಟ್ಟಿ, ಎಚ್.ಆರ್. ದಾಸನಗೌಡ್ರ, ಎಚ್.ಜಿ.ತಿಪರಡ್ಡಿ, ಎಚ್.ಟಿ. ಕೊಡ್ಡನ್ನವರ, ಎಸ್.ವೈ.ಕೊಳಚಿ ಇದ್ದರು.

ಬೆನಕಟ್ಟಿಯ ಹೇಮರಡ್ಡಿ ಮಲ್ಲಮಾಂಬೆ ಭಜನಾ ಮಂಡಳಿ ಯವರು ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಎಸ್.ಎಸ್.ರಕರಡ್ಡಿ ಸ್ವಾಗತಿಸಿದರು. ಸಂಜಯ ನಡುವಿನಮನಿ ನಿರೂಪಿಸಿದರು. ರಾಜು ಮನಗೂಳಿ ವಂದಿಸಿದರು.

ಪುರಸ್ಕಾರ, ಸನ್ಮಾನ: ಕಳೆದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸೇವೆಯಿಂದ ನಿವೃತ್ತಿ ಹೊಂದಿದ ಸಂಘದ ಸದಸ್ಯರನ್ನು ಮತ್ತು ಉತ್ತಮ ಎಸ್.ಡಿ.ಎಂ.ಸಿ ಎಂದು ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ತುಳಸಿಗಿರಿಯ ಕುವೆಂಪು ಮಾದರಿ ಶಾಲೆಯ ಮುಖ್ಯಶಿಕ್ಷಕ ಸಿ.ಎ.ಸನ್ನಪ್ಪನವರ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ದಾಸನ್ನವರ ಅವರನ್ನು ಗೌರವಿಸಲಾಯಿತು.

* * 

ಸಮಾಜ ಸಂಘಟನೆಗೊಂಡು ಇತರ ಸಮಾಜದವರೊಂದಿಗೆ ಸೌಹಾರ್ದಯುತವಾಗಿ ಬದುಕಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಸಮಾಜ ಮುನ್ನೆಡೆಯಬೇಕು
ವೇಮನಾನಂದ ಸ್ವಾಮೀಜಿ
ರಡ್ಡಿ ಗುರುಪೀಠ, ಎರೆಹೊಸಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT