ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯಗಳಿಗೆ ಕಾದಿರುವ ಹೆಬ್ಬಾಳ ಗ್ರಾಮಸ್ಥರು

Last Updated 19 ಸೆಪ್ಟೆಂಬರ್ 2017, 6:23 IST
ಅಕ್ಷರ ಗಾತ್ರ

ಹುಣಸಗಿ: ಗ್ರಾಮೀಣ ಭಾಗದಲ್ಲಿ ಸರ್ಕಾರದ ಯೋಜನೆಗಳು ಸದ್ಬಳಕೆ ಆಗುವುದಿಲ್ಲ ಎಂಬುದಕ್ಕೆ ಸಮೀಪದ ಹೆಬ್ಬಾಳ(ಬಿ) ಗ್ರಾಮದಲ್ಲಿ ಉತ್ತಮ ನಿದರ್ಶನ. ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿ ಎಂದು ನಾಲ್ಕು ವರ್ಷಗಳ ಹಿಂದೆ ಎನ್.ಆರ್.ಡಿ.ಡಬ್ಲೂ.ಪಿ ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿಯೇ ಶುದ್ಧ ನೀರಿನ ಘಟಕವನ್ನು ಅಳವಡಿಸಲಾಗಿದೆ. ಆದರೆ, ಇದನ್ನು ಅಳವಡಿಸಿದ್ದೇ ಸಾಧನೆ ಎನ್ನುವಂತಾಗಿದೆ.ಈ ಘಟಕದಿಂದ ಇಂದಿನ ವರೆಗೂ ಒಂದು ಹನಿ ನೀರು ಸಾರ್ವಜನಿಕರು ಪಡೆದುಕೊಂಡಿಲ್ಲ. ಈ ಘಟಕದ ಬಿಡಿಭಾಗಗಳು ಬೇರೆ ಗ್ರಾಮಗಳಿಗೆ ರವಾನೆ ಆಗಿವೆ.

‘ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ₹10 ಲಕ್ಷ ವೆಚ್ಚದಲ್ಲಿ ಆಶ್ರಯ ಕಾಲೊನಿಯಲ್ಲಿ ಇನ್ನೊಂದು ಶುದ್ಧ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ, ಅದು ಕಾರ್ಯಾರಂಭ ಮಾಡಿಲ್ಲ’ ಎಂದು ಗ್ರಾಮದ ಮಾನಪ್ಪ ಬಾಕ್ಲಿ ಮತ್ತು ದೇವು ದೊರಿ ದೂರಿದ್ದಾರೆ. 25 ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ಗ್ರಾಮವು, ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾಗಿದೆ.

‘ಹೆಬ್ಬಾಳ(ಬಿ) ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮದಲ್ಲಿನ ಶಾಲೆಯ ಬಳಿ ಇರುವ ಏಕೈಕ ಕೊಳವೆಬಾವಿ ಇದೆ. ಈಗಾಗಲೇ ನೀರು ಫ್ಲೊರೈಡ್‌ಯುಕ್ತ ನೀರಿನಿಂದ ಗ್ರಾಮಸ್ಥರು ಸಮಸ್ಯೆಯಿಂದ ಬಳಲುತ್ತಿದ್ದಾರೆ’ ಎಂದು ಹುಸೇನಸಾಬ ಸೈಯದ್ ಮತ್ತು ವೆಂಕಟೇಶ ಗುತ್ತೇದಾರ ಹೇಳುತ್ತಾರೆ.

‘ಸಮಸ್ಯೆ ಪರಿಹರಿಸಲು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರಿಸಬೇಕಿದೆ’ ಎನ್ನುತ್ತಾರೆ ಗ್ರಾಮದ ಬಾಪು ಚಲವಾದಿ ಮತ್ತು ಪರಶುರಾಮ ಭಜಂತ್ರಿ.

ಗ್ರಾಮದಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಮಲಿನ ನೀರು ರಸ್ತೆಯ ಮೇಲೆಯೇ ಹರಿಯುವಂತಾಗಿದೆ. ಆಶ್ರಯ ಕಾಲೊನಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಬೇಕು. ಕೃಷಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಇದರಿಂದ ಸಂಕಷ್ಟದಲ್ಲಿಯೇ ಕಾಲ ಕಳೆಯುವಂತಾಗಿದೆ. ‘ಅಧಿಕಾರಿಗಳು ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT