ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ತೋಟ ಬಾಧಿಸುತ್ತಿರುವ ಶಂಖುಹುಳು

Last Updated 19 ಸೆಪ್ಟೆಂಬರ್ 2017, 6:48 IST
ಅಕ್ಷರ ಗಾತ್ರ

ಶನಿವಾರಸಂತೆ (ಕೊಡಗು ಜಿಲ್ಲೆ): ಹೋಬಳಿಯ ‘ನಮ್ಮ ಬೆಳೆಗಾರರ ಸ್ವಸಹಾಯ ಸಂಘ’ದ ನೇತೃತ್ವದಲ್ಲಿ ಬೆಳೆಗಾರರು ಒಂದುಗೂಡಿ ಕಾಫಿ ತೋಟಗಳಲ್ಲಿ ಶಂಖುಹುಳುಗಳ ನಾಶಕ್ಕಾಗಿ ಸ್ವಪ್ರೇರಣೆಯಿಂದ ದೇಣಿಗೆ ನೀಡುವ ಮೂಲಕ ‘ಹಿಡಿ– ಕೊಲ್ಲು’ ಕಾರ್ಯ ಕೈಗೊಂಡಿದ್ದಾರೆ.

ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಕೆರಳ್ಳಿ, ಹುಲುಸೆ ಗ್ರಾಮಗಳ 300 ಎಕರೆ ತೋಟಗಳಲ್ಲಿ ಸೋಮವಾರ ಚಾಲನೆ ನೀಡಲಾಯಿತು.‌‌ ಸಂಘದ ಪದಾಧಿಕಾರಿಗಳು, ಬೆಳೆಗಾರರು ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರ ಜತೆ ಸೇರಿ ಸಾಂಕೇತಿಕವಾಗಿ ಹುಳುಗಳನ್ನು ಸಂಗ್ರಹಿಸಿದರು.

ಹಾಕಿದ ಔಷಧಿ ತಿನ್ನಲು ಗುಂಪುಗೂಡಿ ಬಂದ ಶಂಖುಹುಳುಗಳನ್ನು ಬಕೆಟ್‌ಗಳಲ್ಲಿ ಸಂಗ್ರಹಿಸಿ ಚೀಲಗಳಲ್ಲಿ ತುಂಬಿಸಿದರು. ನಂತರ ಹುಳುಗಳು ತುಂಬಿದ ಚೀಲಗಳನ್ನು ಗುಂಡಿ ತೆಗೆದು ಕ್ರಿಮಿನಾಶಕ ಸುರಿದು ನಾಶಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT