ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜವಂಶಸ್ಥರಿಗೆ ಈ ವರ್ಷವೂ ₹ 36 ಲಕ್ಷ ಗೌರವಧನ

Last Updated 19 ಸೆಪ್ಟೆಂಬರ್ 2017, 7:01 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾಡಳಿತವು ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಂಪ್ರದಾಯದಂತೆ ರಾಜವಂಶಸ್ಥರಿಗೆ ಆಹ್ವಾನ ನೀಡಿದ್ದು, ಗೌರವಧನದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.
ಈ ಬಾರಿಯೂ ₹ 36 ಲಕ್ಷ ನೀಡಿದೆ. 2015ರಲ್ಲಿ ₹ 30 ಲಕ್ಷ ಗೌರವಧನ ನೀಡಲಾಗಿತ್ತು. 2016ರಲ್ಲಿ ಅದನ್ನು ₹ 36 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸೋಮವಾರ ಅರಮನೆಯಲ್ಲಿನ ರಾಜವಂಶಸ್ಥರ ನಿವಾಸಕ್ಕೆ ತೆರಳಿ ಆಹ್ವಾನಪತ್ರ ನೀಡಿದರು. ಪ್ರಮೋದಾದೇವಿ ಒಡೆಯರ್‌ ಅವರಿಗೆ ಫಲ ತಾಂಬೂಲದ ಜತೆಗೆ ಗೌರವಧನ ನೀಡಿ ಚಿನ್ನದ ಅಂಬಾರಿ ಕೋರಿದರು. ಈ ಸಂದರ್ಭದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಪತ್ನಿ ತ್ರಿಷಿಕಾಕುಮಾರಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT