ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ; ಕೊಚ್ಚಿ ಹೋದ ತರಕಾರಿ ಅಂಗಡಿಗಳು

Last Updated 19 ಸೆಪ್ಟೆಂಬರ್ 2017, 7:18 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದಲ್ಲಿನ ರಸ್ತೆ ಬದಿ ವ್ಯಾಪಾರಿಗಳನ್ನು ಪುರಸಭೆ ಆಡಳಿತ ತೆರವುಗೊಳಿಸಿದೆ. ಸೂಕ್ತ ಸ್ಥಳ ನೀಡದೇ ಇರುವುದರಿಂದ ಈ ವ್ಯಾಪಾರಿಗಳು ತೊಂದರೆಪಡುವಂತಾಗಿದೆ.

ಪುರಸಭೆಯಿಂದ ಮಾರಿಕಾಂಬ ದ್ವಾರದ ಮುಖ್ಯ ರಸ್ತೆಯ ಬದಿ ಸಣ್ಣ ವ್ಯಾಪಾರಿಗಳು ತರಕಾರಿ, ಹೂವು, ಎಲೆ, ಅಡಿಕೆ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವರು ತಳ್ಳುವ ಗಾಡಿಯಲ್ಲಿಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.

ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಇಲ್ಲಿಂದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಗೆ ಸ್ಥಳಾಂತರಿಸಲಾಯಿತು. ಆದರೆ, ಯಾವುದೇ ರೀತಿಯ ಮೂಲ ಸೌಕರ್ಯ ಇಲ್ಲದ ಕಾರಣ ತುಂಬಾ ತೊಂದರೆಯಾಗಿದೆ. ಮಳೆ ಬಂದರೆ ತರಕಾರಿಗಳೆಲ್ಲ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ.

ಇದರಿಂದ ರಸ್ತೆ ಬದಿ ವ್ಯಾಪಾರಸ್ಥರು ತುಂಬಾ ಕಷ್ಟಕ್ಕೆ ಸಿಲುಕಿದ್ದಾರೆ. ಅದ್ದರಿಂದ ಪುರಸಭಾ ಆಡಳಿತ ಕೂಡಲೇ  ಸೂಕ್ತವಾದ ಸ್ಥಳ ಗುರುತಿಸುವ ಮೂಲಕ ಅವರ ಕಷ್ಟಕ್ಕೆ ನೆರವಾಗಬೇಕು.
– ವೆಂಕಟೇಶ್,
ರಸ್ತೆ ಬದಿ ವ್ಯಾಪಾರಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT