ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್‌ಟ್ಲಾಂಟಿಸ್‌: ಸಮುದ್ರ ತಳದಲ್ಲಿ ಆಕ್ಟೋಪಸ್‌ ನಗರಿ

Last Updated 19 ಸೆಪ್ಟೆಂಬರ್ 2017, 12:16 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾ: ಒಂಟಿ ಜೀವಿಗಳು ಎಂದು ಕರೆಯಲಾಗುವ ಮಬ್ಬು ಕವಿದಂತೆ ಕಾಣುವ ಅಷ್ಟಪಾದಿ(ಆಕ್ಟೋಪಸ್‌)ಗಳು ತನ್ನದೇ ನಗರವನ್ನು ನಿರ್ಮಿಸಿಕೊಂಡಿವೆ. ಸಂಶೋಧಕರು ಈ ಆಕ್ಟೋಪಸ್‌ ನಗರಗಳನ್ನು ಪತ್ತೆ ಮಾಡಿದ್ದಾರೆ.

ಪೂರ್ವ ಆಸ್ಟ್ರೇಲಿಯಾದ ಜೆರ್ವಿಸ್‌ ಕೊಲ್ಲಿಯಲ್ಲಿ ಆಕ್ಟೋಪಸ್‌ ಟೆರಿಕಸ್‌ಗಳು ರೂಪಿಸಿಕೊಂಡ ಸಾಗರದ ತಳದ ವಿಶೇಷ ವಲಯವನ್ನು ಸಂಶೋಧಕರು ‘ಆಕ್‌ಟ್ಲಾಂಟಿಸ್‌’ ಎಂದು ಹೆಸರಿಸಿದ್ದಾರೆ. ಒಂಟಿ ಜೀವಿಗಳೆಂದೇ ಗುರುತಿಸಿಕೊಂಡ ಇವು ಗುಂಪು ಗೂಡಿ ನಡೆಸುತ್ತಿದ್ದ ಕಾರ್ಯವನ್ನು ಸಮುದ್ರ ಜೀವಶಾಸ್ತ್ರಜ್ಞರು ಗಮನಿಸಿದ್ದಾರೆ.

ಮರಳು ರಾಶಿ ಹಾಗೂ ಕಪ್ಪೆಚಿಪ್ಪುಗಳನ್ನು ಬಳಸಿ ಗವಿಗಳನ್ನು ನಿರ್ಮಿಸಿಕೊಂಡಿವೆ. ಈ ಆಕ್‌ಟ್ಲಾಂಟಿಸ್‌ ವಲಯದಲ್ಲಿ 15 ಆಕ್ಟೋಪಸ್‌ಗಳು ಆಶ್ರಯ ಪಡೆಯಬಹುದು ಎನ್ನುತ್ತಾರೆ ಜೀವಶಾಸ್ತ್ರಜ್ಞರು.

ಸಮುದ್ರದ 33–49 ಅಡಿ ಆಳದಲ್ಲಿ 59*13 ಅಡಿ ವಲಯದಲ್ಲಿನ ಆಕ್ಟೋಪಸ್‌ಗಳ ಕಾರ್ಯಚಟುವಟಿಕೆಯನ್ನು ಅಂತರರಾಷ್ಟ್ರೀಯ ಸಂಶೋಧಕರ ತಂಡ 10 ಗಂಟೆ ವಿಡಿಯೊ ರೆಕಾರ್ಡ್‌ ಮಾಡಿದೆ. ಮರಳು ಗವಿಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಲ್ಲದ ಇತರೆ ಆಕ್ಟೋಪಸ್‌ಗಳು ಇಲ್ಲಿ ಪ್ರವೇಶಿಸಲು ಆಕ್‌ಟ್ಲಾಂಟಿಸ್‌ನ ಆಕ್ಟೋಪಸ್‌ಗಳು ಬಿಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT