ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನಿಗಾಗಿ 5ನೇ ಬಾರಿ ಅರ್ಜಿ ಸಲ್ಲಿಸಿದ ನಟ ದಿಲೀಪ್‌: ವಿಚಾರಣೆ ಸೆ.26ಕ್ಕೆ ಮುಂದೂಡಿಕೆ

Last Updated 19 ಸೆಪ್ಟೆಂಬರ್ 2017, 14:03 IST
ಅಕ್ಷರ ಗಾತ್ರ

ಕೊಚ್ಚಿ: ಬಹುಭಾಷಾ ನಟಿಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಮಲಯಾಳ ನಟ ದಿಲೀಪ್‌, ಜಾಮೀನು ಪಡೆಯುವ ಸಲುವಾಗಿ ಐದನೇ ಬಾರಿಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಜುಲೈನಿಂದ ಜೈಲಿನಲ್ಲಿರುವ ದಿಲೀಪ್‌, ಈ ಹಿಂದೆಯೂ ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ನೀಡಲು ನಿರಾಕರಿಸಿದ್ದ ಕೋರ್ಟ್‌ ನಟನ ಅರ್ಜಿಗಳನ್ನು ರದ್ದುಪಡಿಸಿತ್ತು.

ಸದ್ಯ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿರುವ ಕೇರಳ ಹೈಕೋರ್ಟ್‌ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದ್ದು, ಸೆಪ್ಟೆಂಬರ್‌ 26ರಂದು ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT