ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‍ಗೂ ದೋನಿಗೂ ಇರುವ ಸಾಮ್ಯತೆ ಏನು? ಟ್ರೋಲ್ ಆಯ್ತು ರಮ್ಯಾ ಫೇಸ್‍ಬುಕ್ ಪೋಸ್ಟ್

Last Updated 19 ಸೆಪ್ಟೆಂಬರ್ 2017, 16:14 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕ್ರಿಕೆಟಿಗ ಎಂಎಸ್ ದೋನಿಗೂ ಇರುವ ಸಾಮ್ಯತೆ ಏನು? ಇವರಿಬ್ಬರನ್ನೂ ದೂಷಿಸುವವರು ತುಂಬಾ ಇದ್ದರು. ಆದರೆ ಅವರಿಬ್ಬರೂ ಮರಳಿ ಬಂದು ಭದ್ರವಾಗಿ ನೆಲೆಯೂರಿದ್ದಾರೆ. ಹೀಗೆ ಬರೆದಿರುವ ಪೋಸ್ಟ್ ವೊಂದನ್ನು ನಟಿ, ಕಾಂಗ್ರೆಸ್‌‌ನ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ರಮ್ಯಾ ಅವರು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.

ಇದು ವಾಟ್ಸ್ ಆ್ಯಪ್‍ನಲ್ಲಿ ಬಂದ ಫಾರ್ವರ್ಡ್ ಮೆಸೇಜ್ ಎಂಬ ಒಕ್ಕಣೆಯೊಂದಿಗೆ ರಮ್ಯಾ ಈ ಪೋಸ್ಟ್ ಹಾಕಿದ್ದರು. ಸಾಮಾಜಿಕ ತಾಣದಲ್ಲಿ ರಮ್ಯಾ ಏನೇ ಪೋಸ್ಟ್ ಮಾಡಿದರೂ ಆ ಪೋಸ್ಟ್ ಗಳು ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇರುತ್ತವೆ. ಅದೇ ರೀತಿ ಈ ಪೋಸ್ಟ್ ಬಗ್ಗೆಯೂ ನೆಟಿಜನ್‍ಗಳು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ರಾಹುಲ್ ಗಾಂಧಿಯನ್ನು ದೋನಿ ಜತೆಗೆ ಹೋಲಿಕೆ ಮಾಡಬೇಡಿ ಎಂದು ಹಲವಾರು ನೆಟಿಜನ್‍ಗಳು ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ. ಅದೇ ವೇಳೆ ಇನ್ನು ಕೆಲವರು ತಮಾಷೆಯ ಉತ್ತರಗಳನ್ನು ನೀಡಿ ಟ್ರೋಲ್ ಮಾಡಿದ್ದಾರೆ.

ನೆಟಿಜನ್‍ಗಳು ಏನಂತಾರೆ?

ಬಗೆ ಬಗೆ ಕಾಮೆಂಟ್

ರಮ್ಯಾ ಅವರ  ಈ ಪೋಸ್ಟ್ ಗೆ ತರಹೇವಾರಿ ಕಾಮೆಂಟ್‍ಗಳು ಬಂದಿವೆ.. ಅವುಗಳಲ್ಲಿ ಕೆಲವು ಕಾಮೆಂಟ್‍ಗಳು ಹೀಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT