ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೂಪದಲ್ಲಿ ನೆಸ್ಲೆ ಮಿಲ್ಕಿಬಾರ್‌

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳನ್ನು (ಎಫ್‌ಎಂಸಿಜಿ) ತಯಾರಿಸುವ ಪ್ರಮುಖ ಸಂಸ್ಥೆಯಾಗಿರುವ ನೆಸ್ಲೆ ಇಂಡಿಯಾ, ತನ್ನ ಬಿಳಿಬಣ್ಣದ ಚಾಕಲೇಟ್‌ ಬ್ರ್ಯಾಂಡ್‌ ‘ಮಿಲ್ಕಿಬಾರ್‌’ಗೆ ಈಗ ಹೊಸ ರೂಪ ನೀಡಿದೆ. ಆರೋಗ್ಯಕರ ಉತ್ಪನ್ನದ ಪೋಷಕಾಂಶ ಮತ್ತು ಸ್ವಾದ ಹೆಚ್ಚಿಸಿ ಗ್ರಾಹಕರ ಮನ ಗೆಲ್ಲಲು ಹೊರಟಿದೆ. ಅದರಲ್ಲೂ ಚಿಣ್ಣರ ಗಮನ ಸೆಳೆಯಲು ಈ ಉತ್ಪನ್ನದಲ್ಲಿ ಇನ್ನು ಅನೇಕ ಹೊಸತನಗಳನ್ನೂ ಅಳವಡಿಸಿದೆ.

ಹೊಸ ರೂಪ ಪಡೆದಿರುವ ‘ಮಿಲ್ಕಿಬಾರ್‌’ ಪ್ಯಾಕೇಜ್‌ ಮೇಲೆ – ‘ಚಾಕಲೇಟ್ ಸಿದ್ಧಪಡಿಸುವ ಸೂತ್ರದಲ್ಲಿ ಹಾಲಿಗೆ ಮೊದಲ ಸ್ಥಾನ’ ಎನ್ನುವ ಸಂದೇಶವನ್ನು ಪ್ರಮುಖವಾಗಿ ಮುದ್ರಿಸಲಾಗಿದೆ. 

ಸಕ್ಕರೆ ಪ್ರಮಾಣ ತಗ್ಗಿಸಿ, ಹಾಲಿನ ಪ್ರಮಾಣ ಹೆಚ್ಚಿಸಿರುವುದರ ಜತೆಗೆ, ಚಾಕಲೇಟ್‌ನ ಸ್ವಾದವನ್ನೂ ಹೆಚ್ಚಿಸಲೂ ಸಾಕಷ್ಟು ಕಾಳಜಿವಹಿಸಲಾಗಿದೆ. ಇದು ಈ ಉತ್ಪನ್ನದ ಇನ್ನೊಂದು ಹೆಗ್ಗಳಿಕೆಯಾಗಿದೆ.

ಹಾಲಿನ ಪ್ರಮಾಣವನ್ನು ಶೇ 8ರಷ್ಟು ಹೆಚ್ಚಿಸಿರುವುದರ ಜತೆಗೆ ಸಕ್ಕರೆ ಪ್ರಮಾಣವನ್ನು ಶೇ 10ರಷ್ಟು ಕಡಿಮೆ ಮಾಡಲಾಗಿದೆ. ಹೊಸ ವಿಶಿಷ್ಟ ತಂತ್ರಜ್ಞಾನ ತಯಾರಿಕೆ ಸೂತ್ರದ ಅನ್ವಯ ‘ಮಿಲ್ಕಿಬಾರ್‌’ ಉತ್ಪನ್ನವನ್ನು ಹೊಸ ರೂಪದಲ್ಲಿ ಈಗ ಮಾರುಕಟ್ಟೆಗೆ ಮರು ಪರಿಚಯಿಸಲಾಗಿದೆ. ಈ ಹೊಸ ಉತ್ಪನ್ನವು ₹ 5, ₹ 10 ಮತ್ತು ₹ 20ರ ಬೆಲೆಯಲ್ಲಿ ದೊರೆಯಲಿದೆ.

‘ನಮ್ಮ ಉತ್ಪನ್ನಗಳಲ್ಲಿನ ಪೋಷಕಾಂಶಗಳ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರಲ್ಲಿ ಅರಿವು ಹೆಚ್ಚಿಸಲು, ಹೆಚ್ಚು ಪಾರದರ್ಶಕತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಮಿಲ್ಕಿಬಾರ್‌ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಸಂಸ್ಥೆ ಮುಂದಾಗಿದೆ. ಸಂಸ್ಥೆಯು ಮುಂಬರುವ ದಿನಗಳಲ್ಲಿ ತಯಾರಿಸಲಿರುವ ಇತರ ಎಲ್ಲ ಮಿಲ್ಕಿಬಾರ್‌ ಉತ್ಪನ್ನಗಳಿಗೆ ಇದೇ ಸೂತ್ರ ಅನ್ವಯವಾಗಲಿದೆ’ ಎಂದು ನೆಸ್ಲೆ ಇಂಡಿಯಾ ಜನರಲ್‌ ಮ್ಯಾನೇಜರ್‌ (ಚಾಕಲೇಟ್‌ ಆ್ಯಂಡ್‌ ಕನ್‌ಫೆಕ್ಷನರಿ) ನಿಖಿಲ್‌ ಚಂದ್ ಅಭಿಪ್ರಾಯಪಟ್ಟಿದ್ದಾರೆ.

ನೆಸ್ಲೆ ಇಂಡಿಯಾದ ಮಂಚ್‌ ಮತ್ತು ಕಿಟ್‌ಕ್ಯಾಟ್‌ ನಂತರ ಅತಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್‌ ಕೂಡ ಇದಾಗಿದೆ. ‘ದೇಶದಲ್ಲಿನ ನೆಸ್ಲೆ ಇಂಡಿಯಾದ ವೈವಿಧ್ಯಮಯ ಉತ್ಪನ್ನಗಳ ಮಾರಾಟದಲ್ಲಿ ಚಾಕಲೇಟ್‌ ಮತ್ತು ಸಿಹಿ ಉತ್ಪನ್ನಗಳ ಪಾಲು ಶೇ 13ರಷ್ಟಿದೆ.

ಸದ್ಯಕ್ಕೆ ಚಾಕಲೇಟ್‌ ಮಾರುಕಟ್ಟೆಯು ದೇಶದಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚು ಕೇಂದ್ರೀಕೃತಗೊಂಡಿದೆ. ನೆಸ್ಲೆ ಇಂಡಿಯಾ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ತನ್ನ ಮಾರುಕಟ್ಟೆ ವಿಸ್ತರಿಸಲು ಗಮನ ಕೇಂದ್ರೀಕರಿಸಿದೆ’ ಎಂದು ನಿಖಿಲ್‌ ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ‘ಎಫ್‌ಎಂಸಿಜಿ’ ಸಂಸ್ಥೆಯಾಗಿರುವ ನೆಸ್ಲೆ, ಗರಿಗರಿಯಾದ ತೆಳು ಬಿಸ್ಕತ್ತಿಗೆ (ವೇಫರ್‌) ಚಾಕಲೇಟ್‌ ಲೇಪಿತ ಉತ್ಪನ್ನಗಳಲ್ಲಿ ಮಂಚ್‌ ಮತ್ತು ಕಿಟ್‌ಕ್ಯಾಟ್‌ ಬ್ರ್ಯಾಂಡ್‌ನ ಉತ್ಪನ್ನಗಳು ಶೇ 65ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. 2017ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಾಕಲೇಟ್‌ ವಹಿವಾಟು ಶೇ 11ರಷ್ಟು ಚೇತರಿಕೆ ಕಂಡಿದೆ. ಹೊಸತನ ಅಳವಡಿಸಿಕೊಂಡು, ಉತ್ಪನ್ನಗಳಿಗೆ ಹೊಸ ರೂಪ ಕೊಡುತ್ತ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಗಮನ ಕೇಂದ್ರೀಕರಿಸಲಾಗಿದೆ. ಹಬ್ಬಗಳ ಸಂದರ್ಭದಲ್ಲಿ ಗಿಫ್ಟ್‌ ನೀಡಲು ವಿಶೇಷ ಚಾಕಲೇಟ್‌ ಬಾಕ್ಸ್‌ ಸಿದ್ಧಪಡಿಸಲಾಗಿದೆ. ಬಾಯಿ ಮತ್ತು ಕಾಲುಗಳಿಂದ ವರ್ಣ ಕಲಾಕೃತಿ ರಚಿಸಿರುವ ಕಲಾವಿದರು (Mouth And Foot Painting Artists) ಸಿದ್ಧಪಡಿಸಿರುವ ವಿಶಿಷ್ಟ ಚಿತ್ರಗಳನ್ನು ಒಳಗೊಂಡ ಗ್ರೀಟಿಂಗ್‌ ಕಾರ್ಡ್‌ ಈ ಬಾಕ್ಸ್‌ನಲ್ಲಿ ಇರಲಿದೆ.

(ಲೇಖಕ, ಸಂಸ್ಥೆಯ ಆಹ್ವಾನದ ಮೇರೆಗೆ ಗೋವಾದ ಪೋಂಡಾದಲ್ಲಿ ಇರುವ ಚಾಕಲೇಟ್‌ ತಯಾರಿಕೆ ಕಾರ್ಖಾನೆಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT