ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ 20, 09, 1967

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1964ರ ಭಾರತ–ಸಿಂಹಳ ಒಪ್ಪಂದದ ಪೂರ್ಣ ಜಾರಿ

ಕೊಲಂಬೊ, ಸೆ. 19– 1964ರ ಭಾರತ– ಸಿಂಹಳ ಒಪ್ಪಂದವನ್ನು ಸಂಪೂರ್ಣವಾಗಿ, ಎಲ್ಲ ನಿಷ್ಠೆಯಿಂದ ಜಾರಿಗೆ ತರಲು ಭಾರತ ಮತ್ತು ಸಿಂಹಳ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಒಪ್ಪಿಕೊಂಡಿದ್ದಾರೆ.

ಭಾರತದ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಸಿಂಹಳ ಪ್ರಧಾನಿ ಶ್ರೀ ಡಡ್ಲಿ ಸೇನಾನಾಯಕೆ ಹಾಗೂ ಅವರ ಸಲಹೆಗಾರರ ನಡುವೆ ನಡೆದ ಮಾತುಕತೆಗಳ ಕಾಲದಲ್ಲಿ ಪ್ರಮುಖವಾಗಿ ಚರ್ಚಿಸಲ್ಪಟ್ಟ ವಿಷಯಗಳಲ್ಲಿ 1964ರ ಭಾರತ–ಸಿಂಹಳ ಒಪ್ಪಂದವೂ ಒಂದು.

ಕಾಶ್ಮೀರದ ಬಗ್ಗೆ ಪಾಕ್‌ ಬಲಪ್ರಯೋಗ ಎದುರಿಸಲು ಭಾರತ ಸಿದ್ಧ: ಮುರಾರಜಿ

ಅಟ್ಟಾವ, ಸೆ. 19– ‘ಕಾಶ್ಮೀರವನ್ನು ಉಳಿಸಿಕೊಳ್ಳುವುದಕ್ಕಾಗಿ ಬಲ ಪ್ರಯೋಗದ ಪ್ರಶ್ನೆಯೇ ಇಲ್ಲ. ಆದರೆ ಈ ಪ್ರದೇಶವನ್ನು ತೆಗೆದುಕೊಳ್ಳಲು ಪಾಕಿಸ್ತಾನವು ಬಲಪ್ರಯೋಗ ಮಾಡಿದರೆ ಭಾರತ 1965 ರಲ್ಲಿ ಮಾಡಿದಂತೆ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ’ ಎಂದು ಉಪಪ್ರಧಾನಿ ಶ್ರೀ ಮುರಾಜಿ ದೇಸಾಯಿ
ಯವರು ನಿನ್ನೆ ಇಲ್ಲಿ ಹೇಳಿದರು.

ಪಾಕಿಸ್ತಾನದೊಡನೆ ಸ್ನೇಹದಿಂದ ಇರಲು ಭಾರತವು ಅಪೇಕ್ಷಿಸುತ್ತದೆ. ಇದೇ ರೀತಿ ಪಾಕಿಸ್ತಾನವೂ ಅಪೇಕ್ಷಿಸ ಬೇಕು ಎಂದು ನುಡಿದ ಶ್ರೀ ದೇಸಾಯಿ
ಯವರು, ‘ಪಾಕಿಸ್ತಾನವು ಶಾಂತಿಗಾಗಿ ಪ್ರಯತ್ನಿಸದಿದ್ದರೂ ಸಹ ಭಾರತವು ಮಾತ್ರ ತನ್ನ ಶಾಂತಿ ಪ್ರಯತ್ನಗಳನ್ನು ಮುಂದುವರಿಸುವುದು’ ಎಂದರು.

ಜನರಲ್‌ ಅಸೆಂಬ್ಲಿಗೆ ಕಮ್ಯುನಿಸ್ಟ್‌ ಅಧ್ಯಕ್ಷ

ವಿಶ್ವರಾಷ್ಟ್ರ ಸಂಸ್ಥೆ, ಸೆ. 19– ಜನರಲ್‌ ಅಸೆಂಬ್ಲಿಗೆ ಮೊಟ್ಟಮೊದಲನೇ ಬಾರಿಗೆ ಕಮ್ಯುನಿಸ್ಟ್‌ ಅಧ್ಯಕ್ಷರಾಗಿ ರುಮೇನಿಯದ ವಿದೇಶಾಂಗ ಸಚಿವ ಕಾರ್ನೆಲೂ ಮನೆಸ್ಕೂ ಅವರು ಆಯ್ಕೆಯಾದರು.

ಕೃಷ್ಣ–ಗೋದಾವರಿ ವಿವಾದ: ಪಂಚಾಯ್ತಿಗೇ ರಾಜ್ಯದ ಒಲವು

ಬೆಂಗಳೂರು, ಸೆ. 19– ‘ಕೃಷ್ಣ–ಗೋದಾವರಿ ನೀರಿನ ವಿವಾದಕ್ಕೆ ಪಂಚಾಯ್ತಿಯೇ ಅತ್ಯುತ್ತಮ ಪರಿಹಾರ ಮಾರ್ಗ’. ಇದು ಮೈಸೂರಿನ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರ ದೃಢವಾದ ನಂಬಿಕೆ.

ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರಿಗೆ ಕಳೆದ ಸೋಮವಾರ ನೀಡಿರುವ ಪತ್ರವೊಂದರಲ್ಲಿ ಶ್ರೀ ನಿಜಲಿಂಗಪ್ಪನವರು ತಮ್ಮ ಈ ದೃಢವಾದ ನಂಬಿ
ಕೆಯನ್ನು ಸ್ಪಷ್ಟಪಡಿಸಿಯೂ ಇದ್ದಾರೆ.

ಎಲ್ಲ ಬಣ್ಣವನ್ನೂ ನುಂಗಿದ ಮಸಿ

ನವದೆಹಲಿ, ಸೆ. 19– ದೇಶದ ಜನಸಂಖ್ಯೆ ಈಗ 51 ಕೋಟಿ 10 ಲಕ್ಷ. ಪ್ರತಿವರ್ಷ 2 ಕೋಟಿ 10 ಲಕ್ಷ ಮಕ್ಕಳ ಜನನ; 80 ಲಕ್ಷ ಜನರ ಮರಣ. ಪರಿಣಾಮ: ಜನಸಂಖ್ಯೆಯಲ್ಲಿ 1 ಕೊಟಿ 30 ಲಕ್ಷ ಏರಿಕೆ. ಈ ಬೆಳವಣಿಗೆ ಹೀಗೆಯೇ ಅವ್ಯಾಹತವಾಗಿ ಮುಂದುವರಿದರೆ ಈ ಶತಮಾನದ ಅಂತ್ಯದ ವೇಳೆಗೆ ದೇಶದ ಜನಸಂಖ್ಯೆ ಸುಮಾರು 100 ಕೋಟಿ.

ದೇಶಾದಾದ್ಯಂತ ಆಚರಿಸಲಾಗುತ್ತಿರುವ ಕುಟುಂಬ ಯೋಜನಾ ಪಕ್ಷದ ಸಂದರ್ಭದಲ್ಲಿ ಕುಟುಂಬ ಯೋಜನಾ ಇಲಾಖೆಯು ಈ ಅಂಕಿ ಸಂಖ್ಯೆಗಳನ್ನು ಸಿದ್ಧಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT